ರನ್ನ ಬೆಳಗಲಿ:ಆ.04: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಶಾಲೆಯ ಮುಖ್ಯ ಶಿಕ್ಷಕಿಯಾದ ಶಶಿಕಲಾ ಕಠಾರೆ ಸೇವಾ ನಿವೃತ್ತಿ, ಬೀಳ್ಕೊಡುಗೆ ಸನ್ಮಾನ ಸಮಾರಂಭ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಾಣಾಧಿಕಾರಿಗಳಾದ ಶ್ರೀಶೈಲ ಕುರಣಿ ಶಿಕ್ಷಕ ವೃತ್ತಿ ಪವಿತ್ರವಾದದ್ದು, ಶಿಕ್ಷಕನೇ ಸಮುದಾಯದ ಮಾರ್ಗದರ್ಶಕ ನಾಗಿದ್ದಾನೆ.ಕಠಾರೆ ದಂಪತಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಗೈದು ವಿಶ್ರಾಂತ ಜೀವನಕ್ಕೆ ಕಾಲಿಟ್ಟಿದ್ದಾರೆ.ಅವರ ಶೈಕ್ಷಣಿಕ ಅನುಭವಗಳು ಇಂದಿನ ಯುವ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಲಭ್ಯವಾಗಬೇಕು.ತಾವು ಸೇವೆಯಿಂದ ನಿವೃತ್ತಿಅಲ್ಲ, ವಯಸ್ಸಿನಿಂದ ನಿವೃತ್ತಿ ಆದರಿಂದ ಮಕ್ಕಳು ನಿಮಗಾಗಿ ಕಾಯುತ್ತೇವೆ ಅವರ ಅನಿಸಿಕೆಯಲ್ಲಿ ನಿಮ್ಮ ವ್ಯಕ್ತಿತ್ವ ಅರಳಿದೆ.ಬಿಡುವಿನ ಅವಧಿಯಲ್ಲಿ ನಮ್ಮ ಶಾಲೆಗೆ ಸದಾ ಸ್ವಾಗತಿಸುತ್ತೇವೆ. ಶಿಕ್ಷಕರಾಗಿ ಬಂದು ಮತ್ತೆ ಶಾಲೆಯನ್ನು ಬೆಳಗಿಸಿ ಎಂದು ತಿಳಿಸಿದರು.
ನಿವೃತ್ತ ಮುಖ್ಯೋಪಾಧ್ಯರಾದ ಜೆ ಆರ್ ಹಂಚಾಟೆ, ಎಸ್ ಎಲ್ ಕಠಾರೆ ದಂಪತಿಗಳು ತಮ್ಮ ಸೇವಾ ಅನುಭವಗಳನ್ನು ಹಂಚಿಕೊಂಡರು.ಅಧ್ಯಕ್ಷತೆ ವಹಿಸಿದ ಯಮನಪ್ಪ ಆಲಗೂರ,ಹಿರಿಯ ಶಿಕ್ಷಕರಾದ ಆರ್ ಡಿ ಗಲಗಲಿ,ಮಹಾಂತೇಶ ಗೂಳಪ್ಪಗೋಳ,ರಾಘವೇಂದ್ರ ನೀಲನ್ನವರ,ಆರ್ ಡಿ ಬಂಡಿ ಕಾರ್ಯಕ್ರಮದ ಕುರಿತು ಮಾತನಾಡಿದರು.
ಉಪಾಧ್ಯಕ್ಷೆ ಪ್ರೇಮಾ ಲೋಹಾರ,ನ್ಯಾಯವಾದಿ ಸದಾಶಿವ ಹಳ್ಳೂರ,ಡಿ ಎ???ಸ್ ಮುಖಂಡ ಭೀಮರಾವ ಕಾಳವ್ವಗೋಳ, ಎಸ್.ಡಿ.ಎಮ್.ಸಿ ಸದಸ್ಯರಾದ ಸದಾಶಿವ ಗುಲಗಂಜಿಕೊಪ್ಪ (ಪೂಜೇರಿ),ರಾಜೇಶ್ವರಿ ಪುರಾಣಿಕ, ಲಕ್ಷ್ಮೀ ನಾವಿ, ಬಂದವ್ವ ಲಾಲಸಿಂಗಿ, ಮಹಾನಂದ ಬಬಲಾದಿ, ಪವಿತ್ರಾ ಜಿರಗಾಳ,ಶಿಕ್ಷಕ ಸಿಬ್ಬಂದಿಗಳಾದ ಎಸ್ ಪಿ ಜೋಶಿ, ಎಚ್ ಬಿ ಜಮಾದಾರ, ರೂಪಾ ದಂಡಿನ,ಸದಾಶಿವ ಪುರಾಣಿಕ,ಸದಾಶಿವ ಹನಗಂಡಿ, ಹಣಮಂತ ಮಲವಾಡಿ ಮತ್ತು ಪಾಲಕ ಪೋ?ಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.