ಸನಾತನ ಹಿಂದೂ ಧರ್ಮರಕ್ಷಣೆಗಾಗಿ ಆಧ್ಯಾತ್ಮಿಕ ಭಾವಗಳು ಬೆಳೆಯಲಿ: ಮಾಜಿ ಶಾಸಕ ಸೋಮಶೇಖರ ರೆಡ್ಡಿ

Ravi Talawar
ಸನಾತನ ಹಿಂದೂ ಧರ್ಮರಕ್ಷಣೆಗಾಗಿ ಆಧ್ಯಾತ್ಮಿಕ ಭಾವಗಳು ಬೆಳೆಯಲಿ:  ಮಾಜಿ ಶಾಸಕ ಸೋಮಶೇಖರ ರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ ಆ 04.  ಹಿಂದೂ ಸಂಸ್ಕೃತಿಯ ಪ್ರತೀಕದಂತಿರುವ ಭಜನೆ ಇಂದು ಬಹುತೇಕ ಅಸ್ತಿತ್ವ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಿದೆ.ಜಾತಿ ಭೇದಗಳು ಇಲ್ಲದೆ ದೇವರನ್ನು ನೇರವಾಗಿ ಒಲಿಸುವ ಸುಲಭ ಮಾರ್ಗವೆಂದರೆ ಅದು ಭಜನೆಯಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕರು ಬಳ್ಳಾರಿ ನಗರ ಜಿ.ಸೋಮಶೇಖರ್ ರೆಡ್ಡಿ  ಅವರು ಕುಣಿತ ಭಜನಾ ಸಮಾರೋಪ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಳ್ಳಾರಿ ತಾಲ್ಲೂಕಿನ ಗಾಂಧಿನಗರ ವಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ).ಜ್ಞಾನಾಮೃತ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಬಳ್ಳಾರಿ. ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಕುಣಿತ ಭಜನಾ ತರಭೇತಿ ಸಮಾರೋಪ ಸಮಾರಂಭ  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಜನೆಯ ಮಹತ್ವ  ಭಜನೆಗಳನ್ನ ನಾವು ನಿತ್ಯ ಯಾಕೆ ಮಾಡಬೇಕು ಹಾಗೂ ಮಾಡುವುದರಿಂದ ಇದರ ಪ್ರಯೋಜನಗಳೇನು.ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಭಜನೆಗೆ ತುಂಬಾ ಮಹತ್ವವಿದೆ ನಮ್ಮ ಪೂರ್ವಜರು ಅನಾದಿ ಕಾಲದಿಂದಲೂ ಭಜನೆ ಹಾಗೂ ದೇವರ ನಾಮ ಸಂಕೀರ್ತನೆಯನ್ನು ಮಾಡುತ್ತಾ ಬಂದಿದ್ದಾರೆ,ಭಜನೆ ಮಾಡುವುದರಿಂದ ಭಗವತ್ ಸಾಕ್ಷಾತ್ಕಾರ ಆಗುವುದರ ಜೊತೆಗೆ  ಭಗವಂತ ನಾಮಸ್ಮರಣೆ ನಿರಂತರ ಮಾಡಿದ ಪಲವು ಹಾಗೂ ಭಗವಂತನ ವರವು ಸಿಗುವುದು ಈ ಸ್ವಾರ್ಥದ ಯುಗದಲ್ಲಿ ಭಗವಂತನನ್ನು ನೆನೆಯುವ ಶಕ್ತಿ ಭಗವಂತ ನಮಗೆ ನೀಡಿದ್ದನೆಂದರೆ ಅದಕ್ಕಿಂತ ಪುಣ್ಯ ಬೇರೆ ಯಾವುದೂ ಇಲ್ಲ ಎಂದು ಕುಮಾರಿ ಹಾರಿಕ ಮಂಜುನಾಥ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಧರ್ಮಸ್ಥಳದಲ್ಲಿ ಕೆಲವು ವರ್ಷಗಳ ಹಿಂದೆ ಭಜನಾ ಮಂದಿರಗಳಾಗಲಿ, ಭಜನಾ ಸಂಘಗಳಾಗಲಿ ಇರಲಿಲ್ಲ ನಮ್ಮ ಸನಾತನ ಧರ್ಮದ ಭಜನಾ ಕುಣಿತವು ನಶಿಸಿ ಹೋಗಬಾರದು ಎಂಬ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಗಳಾದ ಪೂಜ್ಯ ಡಾ/ ಡಿ. ವೀರೇಂದ್ರ ಹೆಗಡೆಯವರು ಪ್ರತಿ ವರ್ಷ ಭಜನಾ ಕುಮಟಾ ಎಂಬ ಅದ್ಭುತ ಕಾರ್ಯಕ್ರಮವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಿದರು ಈ ಕುಣಿತ ಭಜನಾ ಕುಮಟ ಕಾರ್ಯಕ್ರಮದಲ್ಲಿ 6 ಸಾವಿರಕ್ಕೂ ಹೆಚ್ಚು ಭಜನಾ ತಂಡಗಳು ಭಾಗವಹಿಸುತ್ತಿವೆ.
ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ ಸಾಧ್ಯ ಎಂದು ಮಾನ್ಯ ಬಳ್ಳಾರಿ ಜಿಲ್ಲಾ ನಿರ್ದೇಶಕರಾದ ರೋಹಿತಾಕ್ಷ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಮರ್ಚಡ್ ಟ್ರಸ್ಟ್(ರಿ) ಎಂ.ಜಿ.ಗೌಡ.ಮಹಾನಗರ ಪಾಲಿಕೆ ಸದಸ್ಯರು ಬಳ್ಳಾರಿ ಶ್ರೀನಿವಾಸ ಮೋತ್ಕರ್.ಮಹಾನಗರವು ಪಾಲಿಕೆ ಸದಸ್ಯರು ಬಳ್ಳಾರಿ ಅಶೋಕ ಕುಮಾರ್.
ಜ್ಞಾನಾಮೃತ ಆಂಗ್ಲ ಮಾಧ್ಯಮ ಕಾಲೇಜಿನ ಪ್ರಾಂಶುಪಾಲರು ಯಶವಂತ ಶೆಟ್ಟಿ.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕ್ಷೇತ್ರ ಯೋಜನಾಧಿಕಾರಿಗಳು ಬಸವರಾಜ ಕೆ.,ರಂಗ ಕಲಾವಿದರು ಬಳ್ಳಾರಿ ಶ್ರೀಮತಿ ಜಯಶ್ರೀ ಪಾಟೀಲ, ಶ್ರೀಮತಿ ರೂಪ ಶ್ರೀ, ಕುಣಿತ ಭಜನಾ ತರಬೇತಿ ಕಾರ್ಯಕ್ರಮದ ನಿರೂಪಕರು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರು ಬಳ್ಳಾರಿ. ಅಧ್ಯಕ್ಷರು,ಮತ್ತು ಆಡಳಿತ ಮಂಡಳಿಯ ಸದಸ್ಯರು ಮರ್ಚಡ್ ಟ್ರಸ್ಟ್ (ರಿ)  ಜ್ಞಾನಾಮೃತ ಕಾಲೇಜಿನ ಮುಖ್ಯೋಪಾಧ್ಯಾಯರು,ಬೋದಕ,ಬೋಧಕೇತರ ಸಿಬ್ಬಂದಿಗಳು ಹಾಗೂ ಪಾಲಕರು & ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article