ಬೈಲಹೊಂಗಲ-ಸಮಾಜದಲ್ಲಿ ನಡೆಯುವ ಮೂಡನಂಬಿಕೆ, ಬಹುದೇವಪಾಸನೆ, ಡಾಂಬಿಕತೆ, ಅತ್ಯಾಚಾರ ಅನಾಚಾರಿಗಳ ಬಗ್ಗೆ ನೇರ, ದಿಟ್ಟ, ನಿ?ರವಾಗಿ ವಚನಗಳ ಮೂಲಕ ಖಂಡಿಸಿ ಅಖಂಡ ಸಮಾಜ ನಿರ್ಮಾಣದ ನಿಲುವು ಹೊಂದಿದ ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ಸರ್ವಕಾಲಿಕ ಸತ್ಯದ ಮೌಲ್ಯಗಳನ್ನು ನೀಡಿದ್ದಾರೆ. ಎಂದು ಸಮೀಪದ ಚಿಕ್ಕೊಪ್ಪದ ಬಸವಾನುಭವ ಮಂಟಪದ ಮುಖ್ಯಸ್ಥ ಚೆನ್ನಪ್ಪ ನರಸನ್ನವರ ಹೇಳಿದರು.
ಅವರು ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ಯ ಪತ್ರಿ ಬಸವನಗರ ಅಭಿವೃದ್ಧಿ ಸಂಘ, ಶರಣ ಸಾಹಿತ್ಯ ಪರಿ?ತ್ತು ,ಕದಳಿ ಮಹಿಳಾ ವೇದಿಕೆ, ಜಾಗತಿಕ ಲಿಂಗಾಯತ ಮಹಾಸಭಾ, ಹಿರಿಯ ನಾಗರಿಕರ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡ ನಿಜಶರಣ ಅಂಬಿಗರ ಚೌಡಯ್ಯನವರ ಪ್ರವಚನ, ಶ್ರಾವಣ ಮಾಸದ ೩೨ ನೇ ಮಾಸಿಕ ಅನುಭಾವ ಗೋಷ್ಠಿ ಹಾಗೂ ಚೌಡಯ್ಯನವರ ನಾಮಕರಣೋತ್ಸವ ನಿಮಿತ್ಯ ಏರ್ಪಡಿಸಿದ ಕಾರ್ಯಕ್ರಮದಲ್ಲಿ ವಚನ ಚಿಂತಕರಾಗಿ ಆಗಮಿಸಿ ಮಾತನಾಡಿ, ಅಂಬಿಗರ ಚೌಡಯ್ಯನವರ ವಚನಗಳಲ್ಲಿಯ ಸಂದೇಶ ಸುಂದರ ಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ ಎಂದರು.
ಪತ್ರಿ ಬಸವೇಶ್ವರ ದೇವಸ್ಥಾನದ ಮುಖ್ಯಸ್ಥೆ ಪ್ರೇಮಾ ಅಂಗಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಂತಮ್ಮ ಬಸಪ್ಪ ಗೋಣಿ ದಂಪತಿಗಳಿಂದ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು. ಪತ್ರಯ್ಯ ಕುಲಕರ್ಣಿ ವಚನ ಗಾಯನ ಮಾಡಿದರು. ಗಿರಿಜಕ್ಕ ಪಾಟೀಲ, ಶಕುಂತಲಾ ನರಸನ್ನವರ, ಗೀತಾದೇವಿ ಬೇವಿನ, ಗೀತಾ ಆರಳಿಕಟ್ಟಿ, ಸುವರ್ಣ ಬಿಜುಗುಪ್ಪಿ, ದುಂಡಯ್ಯ ಕುಲಕರ್ಣಿ, ವೀರಣ್ಣ ಹವಳಪ್ಪನವರ, ಸಂತೋಷ ಕೊಳವಿ, ಗಂಗಣ್ಣ ಅಂಗಡಿ, ಗೌರದೇವಿ ತಾಳಿಕೋಟಿಮಠ, ಅನ್ನಪೂರ್ಣ ಕನೋಜ, ಮಹಾದೇವಿ ಗಣಾಚಾರಿ, ಪಾರ್ವತಿ ಎತ್ತಿನಗುಡ್ಡ ಉಪಸ್ಥಿತರಿದ್ದರು. ಚಿಕ್ಕೊಪ್ಪ ಅಕ್ಕ ನಾಗಲಾಂಬಿಕಾ ಅಕ್ಕನ ಬಳಗ, ಬಸವಾದಿ ಸಂಘಟನೆಗಳ ಸದಸ್ಯರು ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
ವೀರಭದ್ರ ಕಾಪಸೆ ಸ್ವಾಗತಿಸಿದರು. ಕಾಡಪ್ಪ ರಾಮಗುಂಡಿ ನಿರೂಪಿಸಿದರು. ಅಶೋಕ ಸಾಲಿ ವಂದಿಸಿದರು. ಪೋಟೋ ಶೀರ್ಷಿಕೆ- ಬೈಲಹೊಂಗಲ ಪಟ್ಟಣದ ಪತ್ರಿ ಬಸವೇಶ್ವರ ಬಡಾವಣೆಯ ಪತ್ರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಚನ ಗಾಯನ ಜರುಗಿತು.