ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮತ್ತು ಮುಂಗಾರಿನಲ್ಲಿ ಉತ್ತಮ ಮಳೆಯಾಗಿದ್ದು, ಇಲ್ಲಿಯವರೆಗೆ 2.81 ಲಕ್ಷ ಹೆಕ್ಟೆರ್ ಪ್ರದೇಶದ ಬಿತ್ತನೆ ಗುರಿಗೆ 2.91 ಲಕ್ಷ ಹೆಕ್ಟರ್ ಪ್ರದೇಶ (ಶೇ. 103.46ದಲ್ಲಿ) ಬಿತ್ತನೆಯಾಗಿದೆ. ಸಮಪರ್ಕವಾಗಿ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರಿಗೆ ವಿತರಿಸಲಾಗಿದೆ. ಜಿಲ್ಲೆಯಲ್ಲಿ ನ್ಯಾನೊ ರಸಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ
ಹೆಚ್ಚುತ್ತಿದ್ದು, ಮತ್ತು ಇದು ರೈತ ಸ್ನೇಹಿಯಾಗಿದ್ದು, ಕಾಳುಗೊಬ್ಬರವನ್ನು ಮಿತವಾಗಿ ಬಳಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಕೃಷಿ ಇಲಾಖೆಯಿಂದ ಮರೆವಾಡ ಗ್ರಾಮದ ರೈತ ರಾಯಣ್ಣ ಹುರಳಿ ಅವರ ತೋಟದಲ್ಲಿ ಬೆಳೆಗಳಿಗೆ ನ್ಯಾನೋ ಯೂರಿಯಾ ರಸಗೊಬ್ಬರ ಸಿಂಪಡಣೆ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆಯ ಪ್ರಾತ್ಯಕ್ಷಿಕೆಯನ್ನು ರೈತರೊಂದಿಗೆ ಪರಿಶೀಲಿಸಿದ ನಂತರ ಮಾತನಾಡಿದರು.
ಮಣ್ಣಿನ ರಸವತ್ತಿತೆ ಹಾಗೂ ಫಲವತ್ತತೆ ಹಾಳಾಗದಂತೆ ಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು. ಅನಗತ್ಯವಾಗಿ ಹೆಚ್ಚುವರಿ ರಸಗೊಬ್ಬರಗಳನ್ನು, ರಾಸಾಯನಿಕಗಳನ್ನು ಬೆಳೆಗಳಿಗೆ, ಭೂಮಿಗೆ ಬಳಸುವದರಿಂದ ಆಹಾರ, ವಾತಾವರಣ ಮತ್ತು ಜಲ ಮಲೀನವಾಗುತ್ತದೆ. ಬೆಳೆಗಳಿಗೆ ಅಗತ್ಯಕ್ಕೆ ಅನುಗುಣವಾಗಿ ನ್ಯಾನೊ ರಸಗೊಬ್ಬರ ಬಳಸುವದರಿಂದ ಪರಿಸರ ಮಾಲಿನ್ಯ ಮತ್ತು ಹೆಚ್ಚು ಖರ್ಚನ್ನು ತಡೆಯಬಹುದಾಗಿದೆ. ಜಿಲ್ಲೆಯಲ್ಲಿ 2024-25 ನೇ ಸಾಲಿನ ಜುಲೈ ಅಂತ್ಯಕ್ಕೆ 6500 ಲೀಟರ್ ಅಂದರೆ 13 ಸಾವಿರ ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಪ್ರಸಕ್ತ ವರ್ಷ 14400 ಲೀಟರ್ ಅಂತೆ 28800 ಬಾಟಲ್ ನ್ಯಾನೊ ಯೂರಿಯಾ ಮಾರಾಟವಾಗಿದೆ. ಇದು ಸಾಂಪ್ರಾದಿಯಿಕ ಯೂರಿಯಾಗಿಂತ 8 ರಿಂದ 10 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತವಾಗಿ ಪೋಷಕಾಂಶಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 2,91,182 ಪ್ಲಾಟಗಳಲ್ಲಿ ಮುಂಗಾರು ಹಂಗಾಮಿಗಾಗಿ ಬೆಳೆ ಸಮೀಕ್ಷೆ ಕೈಗೊಳ್ಳಬೇಕಾಗಿದೆ. ಇಲ್ಲಿಯವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 390 ಖಾಸಗಿ ನಿವಾಸಿಗಳ ಮೂಲಕ 2,06,754 ಪ್ಲಾಟಗಳ ಸಮೀಕ್ಷೆ ಕೈಗೊಳ್ಳಲಾಗಿದೆ. ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಸ್ವತಃ ರೈತರೆ 5029 ಪ್ಲಾಟ್‍ಗಳಲ್ಲಿ ತಮ್ಮ ಜಮೀನಿನಲ್ಲಿ ಬೆಳೆದಂತಹ ಬೆಳೆಗಳ ಮಾಹಿತಿಯನ್ನು ದಾಖಲಿಸಿದ್ದಾರೆ. ಬೆಳೆ ಸಮೀಕ್ಷೆಯು ಸರ್ಕಾರವು ನೀಡಿರುವ ಬೆಳೆ ಸಮೀಕ್ಷೆ ಆ್ಯಪ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
*ರಸಗೊಬ್ಬರ:* ಜುಲೈ ತಿಂಗಳ ಅಂತ್ಯದವರೆಗೆ ಯೂರಿಯಾ 17224 ಮೆ.ಟನ್, ಡಿ.ಎ.ಪಿ 9845 ಮೆ. ಟನ್. ಪೆÇಟಾμï 542 ಮೆ.ಟನ್ . ಕಾಂಪ್ಲೆಕ್ಸ್ 4580 ಮೆ.ಟನ್ ಹಾಗೂ ಎಸ್. ಎಸ್. ಪಿ 226 ಮೆ.ಟನ್ ಗುರಿ ಇದ್ದು. ಯೂರಿಯಾ 23333 ಮೆ.ಟನ್, ಡಿ.ಎ.ಪಿ 8800 ಮೆ. ಟನ್. ಪೆÇಟಾμï 2846 ಮೆ.ಟನ್. ಕಾಂಪ್ಲೆಕ್ಸ್ 20857 ಮೆ.ಟನ್ ಹಾಗೂ ಎಸ್.ಎಸ್.ಪಿ 823 ಮೆ.ಟನ್ ಪೂರೈಕೆಯಾಗಿರುತ್ತದೆ.
ಯೂರಿಯಾ 21705 ಮೆ.ಟನ್, ಡಿ.ಎ.ಪಿ 7227 ಮೆ. ಟನ್. ಪೆÇಟಾμï 898 ಮೆ.ಟನ್. ಕಾಂಪ್ಲೆಕ್ಸ್ 16733 ಮೆ.ಟನ್ ಹಾಗೂ ಎಸ್.ಎಸ್.ಪಿ 579 ಮೆ.ಟನ್ ಮಾರಾಟವಾಗಿರುತ್ತದೆ. ಯೂರಿಯಾ 2099 ಮೆ.ಟನ್, ಡಿ.ಎ.ಪಿ 1495 ಮೆ.ಟನ್. ಪೆÇಟಾμï 1330 ಮೆ.ಟನ್. ಕಾಂಪ್ಲೆಕ್ಷ 4900 ಮೆ.ಟನ್ ಹಾಗೂ ಎಸ್.ಎಸ್.ಪಿ 282 ಮೆ.ಟನ್ ದಾಸ್ತಾನಿಕರಿಸಲಾಗಿರುತ್ತದೆ. ಅಗಸ್ಟ್ ಅಂತ್ಯಕ್ಕೆ ಯೂರಿಯಾ 22879 ಮೆ.ಟನ್, ಡಿ.ಎ.ಪಿ 11647 ಮೆ.ಟನ್. ಪೆÇಟಾμï 680 ಮೆ.ಟನ್ ಕಾಂಪ್ಲೆಕ್ಸ್ 5805 ಮೆ.ಟನ್ ಹಾಗೂ ಎಸ್.ಎಸ್.ಪಿ 280 ಮೆ.ಟನ್ ಗುರಿ ಇರುತ್ತದೆ.
*ಮುಂಗಾರು ಹಂಗಾಮಿನ ರಸಗೊಬ್ಬರ ಬೇಡಿಕೆ ಮತ್ತು ದಾಸ್ತಾನು ವಿವರ:*
ಯೂರಿಯಾ: 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಯೂರಿಯಾ ಗೊಬ್ಬರವು 28,266 ಮೆ.ಟನ್ ಬೇಡಿಕೆ ಇದ್ದು, ಒಟ್ಟು 23,533 ಮೆ.ಟನ್ ರಸಗೊಬ್ಬರದ ಆರಂಭಿಕ ಶಿಲ್ಕು ಮತ್ತು ಸರಬರಾಜು ಆಗಿತ್ತು. ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೆ 21,958 ಮೆ.ಟನ್ ಯೂರಿಯಾ ರಸಗೊಬ್ಬರ ಮಾರಾಟವಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನ್ಯಾನೊ ಯೂರಿಯಾ :* ಜಿಲ್ಲೆಯಲ್ಲಿ 2024-25 ನೇ ಸಾಲಿನ ಜುಲೈ ಅಂತ್ಯಕ್ಕೆ 6500 ಲೀಟರ್ (13000 ಬಾಟಲ್) ನ್ಯಾನೊ ಯೂರಿಯಾ ಮಾರಾಟವಾಗಿದೆ. ಪ್ರಸ್ತುತ ಸಾಲಿನಲ್ಲಿ 14400 ಲೀಟರ್ (28800 ಬಾಟಲ್) ನ್ಯಾನೊ ಯೂರಿಯಾ ಮಾರಾಟವಾಗಿರುತ್ತದೆ. ನ್ಯಾನೊ ಯೂರಿಯಾ ಸಾಂಪ್ರದಾಯಿಕ ಯೂರಿಯಾಗಿಂತ 8 ರಿಂದ 10 ಪಟ್ಟು ಪರಿಣಾಮಕಾರಿಯಾಗಿದ್ದು, ಬೆಳೆಗಳಿಗೆ ತ್ವರಿತವಾಗಿ ಪೆÇೀಷಕಾಂಶಗಳನ್ನು (ಸಾರಜನಕ) ಲಭ್ಯವಾಗಿಸುತ್ತದೆ. ಡೋನ್ ಮೂಲಕ ನ್ಯಾನೊ ಯೂರಿಯಾ ಸಿಂಪರಣೆ ಮಾಡಿದ್ದಲ್ಲಿ ಒಂದು ಎಕರೆ ಜಮೀನಿಗೆ ಅಂದಾಜು 7 ನಿಮಿಷದಲ್ಲಿ ಸಿಂಪರಣೆ ಮಾಡಬಹುದಾಗಿದ್ದು ಸಮಯದ ಹಾಗೂ ಕೃಷಿ ಕೂಲಿಕಾರ್ಮಿಕರ ಅಭಾವವನ್ನು ನೀಗಿಸಬಹುದಾಗಿದೆ. ಅಲ್ಲದೇ ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡುವುದರ ಮೂಲಕ ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚವನ್ನು ಕಡಿಮೆಗೊಳಿಸುತ್ತದೆ. ಮಣ್ಣಿನ ಗುಣಮಟ್ಟ ಹಾಳಾಗುವುದರ ಜೊತೆಗೆ ಅಂತರ್ಜಲ ಕಲೂಷಿತಗೊಂಡು ಪ್ರಾಣಿ ಪಕ್ಷಿಗಳು ಹಾಗೂ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ಸಹ ಕಡಿಮೆಗೊಳಿಸಬಹುದಾಗಿದೆ. ನ್ಯಾನೊ ಯೂರಿಯಾ ಸಿಂಪರಣೆಯಿಂದ ಕಳೆಯನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಅವರು ಕೃಷಿ ಇಲಾಖೆ ವಿವಿಧ ಯೋಜನೆಗಳ ಕುರಿತು ಹಾಗೂ ನ್ಯಾನೊ ರಸಗೊಬ್ಬರ ಪ್ರಾತ್ಯಕ್ಷಿಕೆ ಮತ್ತು ಬೆಳೆ ಸಮೀಕ್ಷೆ ಆ್ಯಪ್ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ, ಜಿಲ್ಲಾ ಸಂಖ್ಯಾ ಮತ್ತು ಆರ್ಥಿಕ ಅಧಿಕಾರಿ ವೀರಣ್ಣಗೌಡ ಪಾಟೀಲ, ಸಹಾಯಕ ನಿರ್ದೇಶಕ ರಾಜಶೇಖರ ಆನಗೌಡರ, ಧಾರವಾಡ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಮಲ್ಲಿನಗೌಡ ಪಾಟೀಲ, ಮಾಜಿ ಅಧ್ಯಕ್ಷ ಬಸವರಾಜ ಕುಂದಗೋಳ, ಬಸವರಾಜ ಬಂಡಿವಾಡ, ತಮ್ಮಣ್ಣ ಗುಂಡಗೋವಿ, ಬೀಮಣ್ಣ ಕಸಾಯಿ, ಕೃಷಿ ಅಧಿಕಾರಿ ರೇಖಾ ಬೆಳ್ಳಟ್ಟಿ, ಮಹಾದೇವ ಸರಶಟ್ಟಿ ಸೇರಿದಂತೆ ವಿವಿಧ ಪ್ರಗತಿಪರ ರೈತರು, ಗ್ರಾಮಸ್ಥರು, ಮರೆವಾಡ, ಅಮ್ಮಿನಭಾವಿ ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.