ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಭವಿಷ್ಯ ಭದ್ರ: ಸಚಿವ ಪ್ರಲ್ಹಾದ ಜೋಶಿ

Ravi Talawar
ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಭವಿಷ್ಯ ಭದ್ರ: ಸಚಿವ ಪ್ರಲ್ಹಾದ ಜೋಶಿ
WhatsApp Group Join Now
Telegram Group Join Now
ಧಾರವಾಡ: ಧಾರವಾಡದ ಕಮಲಾಪುರ4 ನಂ ಶಾಲೆಯ ಉದ್ಘಾಟನೆ ಇಂದು ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು ಹಾಗು ಗಣ್ಯಮಾನ್ಯರು ನೆರವೇರಿಸಿದರು. ಮೊದಲು ದ್ಯಾಮವ್ವನ ಗುಡಿ ಸಭಾಂಗಣ ಅಂದಾಜು ವೆಚ್ಚ ₹1.5 ಕೋಟಿ ಅನುದಾನದಡಿ ನೂತನ ಸಭಾಭವನ ಉದ್ಘಾಟಿಸಿ ನಂತರ ಧಾರವಾಡದ ಕಮಲಾಪುರ ಶಾಲೆ ನೂತನ ಕಟ್ಟಡದ ಉದ್ಘಾಟನೆಯನ್ನು ಗಣ್ಯಮಾನ್ಯರೊಂದಿಗೆ ನೆರವೇರಿಸಿದರು.
ನಂತರ ಜರುಗಿದ ಸಭೆಯಲ್ಲಿ ಸ್ಥಳಿಯರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು ಬಾಲ್ಯದಲ್ಲಿ ಮಕ್ಕಳಿಗೆ ಓದಲು ಒಂದು ಒಳ್ಳೆಯ ವಾತಾವರಣ ನಿರ್ಮಾಣ ಮಾಡುವದರಿಂದ ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವದು ಇಂತಹ ಶಾಲೆಗಳ ಅವಶ್ಯಕತೆ ಇರುತ್ತದೆ. ಕಾರಣ ಸಿಎಸ‌ಆರ ನಿಧಿಯಡಿ₹ 1.62  ಕೋಟಿ ಹಾಗು ಮಾಜಿಮಹಾಪೌರರು  ಸಭಾನಾಯಕರು ಈರೇಶ ಅಂಚಟಗೇರಿ ಅವರ ಸತತ ಪ್ರಯತ್ನ ಹಾಗು ಅನುದಾನದಡಿ ₹36ಲಕ್ಷದಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದ್ದು ತಮಗೆಲ್ಲರಿಗು ಹಾರ್ದಿಕ ಅಭಿನಂದನೆಗಳು.ಜಿಲ್ಲೆಯ ಬಣ್ಣ ಕಾಣದ ಸರ್ಕಾರಿ ಶಾಲೆಗಳಿಗೆ ಬಣ್ಣದರ್ಪಣೆ ಕಾರ್ಯಕ್ರಮ ಮಕ್ಕಳು ನೆಲದ ಮೇಲೆ ಕೂಡಬಾರದು ಅದಕ್ಕಾಗಿ ಸಿ ಎಸ ಆರ ನಿಧಿಯಡಿ ಸಹಸ್ರಾರು ಡೆಸ್ಕಗಳನ್ನು ವಿತರಿಸಿದ್ದೇವೆ ಹಾಗು ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಲಿಯುವ ಸಲುವಾಗಿ ಸ್ಮಾರ್ಟ ಬೋರ್ಡ ನೀಡಲಾಗಿದ್ದು ಮಕ್ಕಳ ಭವಿಷ್ಯದ ನಿರ್ಮಾಣಕ್ಕೆ ನಾನೆಂದು ಕಟಿಬದ್ದ ಹಾಗು ಕನ್ನಡ ಶಾಲೆಗಳು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಬೇಕು ನಮ್ಮ ಕನ್ನಡದ ಕಂಪು ವಿಶ್ವದಲ್ಲೆ  ಕಂಪಿಸಬೇಕು ಹಾಗು ಮುಂಬರುವ ದಿನಮಾನಗಳಲ್ಲಿ ಭಾರತ ವಿಶ್ವದ ಮೂರನೆ ಅತಿದೊಡ್ಡ ಶಕ್ತಿ ಯಾಗಿ ಹೊರಹೊಮ್ಮಲಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಮುಂಬರುವ ದಿನಮಾನಗಳಲ್ಲಿ ವಿಶ್ವಗುರು ಆಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದ್ದು ಭಾಗದ ಸಮಸ್ತ ರೈತಬಾಂಧವರಿಗೆ ಗುರುಹಿರಿಯರಿಗೆ ಅಭಿನಂದಿಸಿ ಶ್ರಾವಣ ಮಾಸದ ಶುಭ ಕೋರಿದರು.
ಮಾಜಿಮಹಾಪೌರರು ಈರೇಶ ಅಂಚಟಗೇರಿ ಮಾತನಾಡಿ ಈ ಕಮಲಾಪುರ ಶಾಲೆ ಶತಮಾನ ಕಂಡ ಶಾಲೆ ಎಷ್ಟೊ ತಲೆಮಾರುಗಳ ಮಕ್ಕಳು ಇಲ್ಲಿ ಕಲಿತಿದ್ದು ಇಂತಹ ಶಾಲೆ ಆಧುನಿಕವಾಗಿ ಹೈಟೆಕ‌ನಿರ್ಮಾಣವಾಗಲೆಂದು ಮಾರ್ಗದರ್ಶನ ನೀಡಿದ್ದು ಕೇಂದ್ರ ಸಚಿವರು ಪ್ರಲ್ಹಾದ ಜೋಶಿಯವರು.. ಶಿಕ್ಷಣ ಪ್ರೇಮಿಗಳಾದ ಕೇಂದ್ರ ಸಚಿವರು ಕನ್ನಡ ಶಾಲೆಗಳು ಏಳ್ಗೆಗಾಗಿ ಹಲವಾರು ಕಾರ್ಯಕ್ರಮ ಹಾಕಿಕೊಂಡಿದ್ದು ಅವರಿಗೆ ಕಮಲಾಪುರ ಭಾಗದ ಜನತೆ ಪರವಾಗಿ ಧನ್ಯವಾದಗಳು ಅರ್ಪಿಸಿದರು.
ಊರಿನಲ್ಲಿ ಮಾದರಿ ಶಾಲೆ ನಿರ್ಮಾಣ ಕನಸು ನನಸಾದ ದಿನ ಸಹಕರಿಸಿದ ಎಲ್ಲಾ ಗುರುಹಿರಿಯರಿಗೆ ಧನ್ಯವಾದಗಳು ಅರ್ಪಿಸಿದರು. ಕೇಂದ್ರ ಸಚಿವರು ಪ್ರಲ್ಹಾದ ಜೋಶಿ ಸಭಾನಾಯಕರು ಮಾಜಿ ಮಹಾಪೌರರು ಈರೇಶ ಅಂಚಟಗೇರಿ ಮಹಾಪೌರರು ಜ್ಯೋತಿ ಪಾಟೀಲ ಮಾಜಿ ಶಾಸಕರು ಸೀಮಾ  ಉಪಮಹಾಪೌರರು ಸಂತೋಷ ಚವಾಣ ರಾಜಶೇಖರ ಬೆಳ್ಳಕ್ಕಿ ರುದ್ರೇಶ ಘಾಳಿ ಗಿರೀಶ ಪದಕಿ  ಬಸವಣ್ಣಪ್ಪ ಅಣ್ಣಿಗೆರಿ ಬಸಪ್ಪ ಮಟ್ಟಿ ಗಿರಿಮಲ್ಲಪ್ಪ ಸಪ್ಪುರಿ ಬಸು ಬಾಳಗಿ ಈರಯ್ಯ ರಾಚಯನವರ ಸೋಮು ಉಡಿಕೆರಿ ಪಕಿರಪ್ಪ ಗೊಡಸೆ ಸುರೇಶ ಹುಬ್ಬಳ್ಳಿ ಮಲ್ಲೆಶ ಶಿಂದೆ ಶ್ರೀನಿವಾಸ ಕೋಟ್ಯಾನ ಬಸವಣೆಪ್ಪ ಹೊಂಗಲ ಹಾಗು ಹನಮಂತ‌ಗುಮಗೊಳ ಹಾಗು ಗುರುಹಿರಿಯರು ಗಣ್ಯಮಾನ್ಯರು ಉಪಸ್ಥಿತರಿದ್ದರು  .
WhatsApp Group Join Now
Telegram Group Join Now
Share This Article