ಕಾಗವಾಡ;- ಕಳೆದ ಒಂದು ವರ್ಷದಿಂದ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಂಗಾ ಬಿರಾದಾರ ಅವರು ಬೆಳಗಾವಿಗೆ ವರ್ಗಾವಣೆಗೊಂಡಿದ್ದು ಆ ಸ್ಥಾನಕ್ಕೆ ಸಂಕೇಶ್ವರದಿಂದ ವರ್ಗಾವಣೆಗೊಂಡ ರಾಘವೇಂದ್ರ ಖೋತ ಅವರು ಶುಕ್ರವಾರ ಸಂಜೆ ಅಧಿಕಾರ ಸ್ವೀಕರಿದ್ದಾರೆ.
ರಾಘವೇಂದ್ರ ಖೋತ ಅವರು ಹಾರೂಗೇರಿ,ಬಣಹಟ್ಟಿ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿ ಕಾಗವಾಡ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು ಈ ಹಿಂದೆ ಇದ್ದ ಅಧಿಕಾರಿಗಾಳಿಗೆ ನೀಡಿದ ಸಹಕಾರ ನೀಡಬೇಕೆಂದರು. ಸರಕಾರ ಇತ್ತೀಚಿಗೆ ಜಾರಿಗೊಳಿಸಿರುವ ಪೊಲೀಸ್ ಹಾಗೂ ಸಮುದಾಯದ ನಡುವೆ ವಿಶ್ವಾಸ ಮೂಡಿಸಲು ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸಹಕಾರಿಯಾಗಿದೆ ಅದನ್ನು ಕೂಡಲೆ ಮಾಡಲಾಗುವುದೆಂದರು.