ಧಾರವಾಡ: ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಯ 20 ನೇ ಕಂತನ್ನು ಬಿಡುಗಡೆ ಮಾಡಿದ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಸಾದ್ ಜೋಶಿ ಪಾಲ್ಗೊಂಡಿದ್ದರು
2019 ರಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದ, 19 ಕಂತುಗಳ ಮೂಲಕ ₹3.69 ಲಕ್ಷ ಕೋಟಿಗಳನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇಂದಿನ 20 ನೇ ಕಂತಿನಲ್ಲಿ, ₹20,500 ಕೋಟಿಗಳನ್ನು 9.7 ಕೋಟಿ ರೈತರಿಗೆ ವರ್ಗಾಯಿಸಲಾಯಿತು.
ಈ ಯೋಜನೆ ಅಡಿ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವಾರ್ಷಿಕವಾಗಿ 6,000 ರೂ ಪಡೆಯುತ್ತಾರೆ.ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ
ಇಂದು ಬಿಡುಗಡೆ ಮಾಡಿದ 20 ನೇ ಕಂತಿನಲ್ಲಿ ನಮ್ಮ ಧಾರವಾಡ ಜಿಲ್ಲೆಯ 99983 ರೈತರಿಗೆ 20.15 ಕೋಟಿ ಧನ ಸಹಾಯ ಬಿಡುಗಡೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ನಮ್ಮ ಧಾರವಾಡ ಜಿಲ್ಲೆಯ 2281295 ರೈತರು 456.80 ಕೋಟಿ ಧನಸಹಾಯ ಪಡದಂತಾಗಿದೆ.
ವಿಶ್ವದ ಅತಿದೊಡ್ಡ ನೇರ ಲಾಭ ವರ್ಗಾವಣೆ ಯೋಜನೆಯಾಗಿರುವ ಈ ಪಿಎಂ ಕಿಸಾನ್ ಯೋಜನೆ ದೇಶದ ಅನ್ನದಾತನಿಗೆ ವರದಾನವಾಗಿದೆ. ಈ ಸಂದರ್ಭದಲ್ಲಿ . ಎಮ್. ವಿ. ಮಂಜುನಾಥ, ವಿಸ್ತರಣಾ ನಿರ್ದೆಶಕರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಡಾ. ಪಿ. ಎಲ್. ಪಾಟೀಲ – ಮಾನ್ಯ ಕುಲಪತಿಗಳು ,ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಡಾ. ಕೆ. ಪಿ. ಗುಂಡಣ್ಣವರ, ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಐ.ಸಿ.ಎ.ಆರ್-ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜ್ಯದ ರೈತರ ಹಿತ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದ್ದು ಇಂತಹ ಅನೇಕ ರೈತಪರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಹಾಗೂ ಕೃಷಿ ಸಚಿವ ಶ್ರೀ ಶಿವರಾಜಸಿಂಗ್ ಚವ್ಹಾಣ ಅವರಿಗೆ ಧನ್ಯವಾದಗಳನ್ನ
ತಿಳಿಸಿದರು.