ಅಂಕಲಗಿ.04- ವನ್ಯಜೀವಿ ಪರಿಸರ ಸುರಕ್ಷಿತವಾಗಿದ್ದರೆ ಮಾತ್ರ ನಮ್ಮ ಉಸಿರು. ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮುಂದೊಂದು ದಿನ ದೊಡ್ಡ ಆಪತ್ತು ತಂದೊಡ್ಡಲಿದೆ ಎಂದು ಅಂಕಲಗಿ ಅಡವಿಸಿದ್ಧೇಶ್ವರ ಮಠದ ಶ್ರೀ ಅಮರ ಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಶ್ರಾವಣ ಮಾಸದ ನಿಮಿತ್ತ ಭಾನುವಾರ ,, ಪಾದಯಾತ್ರೆಯಲ್ಲಿದ್ದ ಅಂಕಲಗಿ ಶ್ರೀ ಅಡವಿಸಿದ್ದೇಶ್ವರ ಮಠದ ಶರಣರು ಮತ್ತು ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಪದಾಧಿಕಾರಿಗಳನ್ನು ಉದ್ದೇಶಿಸಿ ಉಳವಿ ಮಹಾದ್ವಾರದಲ್ಲಿ ಭವ್ಯ ಸ್ವಾಗತ ಸ್ವೀಕರಿಸಿ ಮಾತನಾಡಿದರು.
ಕಳೆದ ಗುರುವಾರದಿಂದ ೪ ದಿನಗಳವರೆಗೆ ಪಾದಯಾತ್ರಿಗಳು ದಾರಿ ಮಧ್ಯದ ಗ್ರಾಮಗಳಲ್ಲಿ ವನ್ಯಜೀವಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ಗಟ್ಟಿ ನಿಷೇಧಕ್ಕೆ ಆಗ್ರಹಿಸಿ ಮಾನವ ಸರಪಳಿ ನಿರ್ಮಿಸಿ ಜನಜಾಗ್ರತಿಗೊಳಸುತ್ತಿರುವದು ಅತ್ಯಂತ ಶ್ಲ್ಯಾಘನೀಯವಾಗಿದೆ ಎಂದರು.
೫ ಕಿಮಿ ಅಂತರದ ಮಹಾದ್ವಾರದಿಂದ ಅಸಂಖ್ಯಾತ ಅಡವಿ ಶರಣರು ಶ್ರೀಗಳನ್ನು ಮೆರವಣಿಗೆ ಮೂಲಕ ಬರಮಾಡಿಕೊಂಡು ಉಳವಿ ಮಹಾದ್ವಾರದ ಬಳಿ ಭವ್ಯ ಸ್ವಾಗತ ನೀಡಿ ಗೌರವಿಸಿದರು. ಕ್ಷೇತ್ರ ದರ್ಶನ ಮಾಡಿದ ಶ್ರೀ ಗಳು ಈ ಶ್ರಾವಣ ಮಾಸದ ಶರಣರ ಈ ಸಂಕಲ್ಪ ಸರ್ವರಿಗೂ ಸುಖ, ಶಾಂತಿ ತರಲಿ ಎಂದು ಶುಭ ಹಾರೈಸಿ ಪಾದಯಾತ್ರೆ ಸಂಪನ್ನಗೊಳಿಸಿದ ಸರ್ವ ಅಡವಿ ಶರಣರ ಯೋಗ ಕ್ಷೇಮ ವಿಚಾರಿಸಿ ಸರ್ವರಿಗೂ ಶುಭ ಕೋರಿದರು.
ಪಾದಯಾತ್ರೆಯ ಸಂಚಾಲಕರಾದ ಶಂಕರ ಗೊಡಗೇರಿ , ಸಚ್ಚಿನ ಹರದಿ, ಈರಣ್ಣಾ ಮದವಾಲ, ಚಂಬ ಪಾಶ್ಚಾಪುರಿ , ಆನಂದ ಅತ್ತುಗೋಳ ಸಿರಿಗೌಡ ನಿರ್ವಾಣಿ, ರಾಹುಲ ಪಾಟೀಲ, ಮಹೇಶ ನಿರ್ವಾಣಿ, ರಾಜು ತಿಳಗಂಜಿ, ಅಜ್ಜ ಬೆಣ್ಣಿ, ಅಜೇಯ ಚವಗಲಾ ಸೇರಿದಂತೆ ಅಪಾರ ಸಂಖ್ಯೆಯ ವಿವಿಧ ಗ್ರಾಮಗಳ ಅಡವಿಸಿದ್ದೇಶ್ವರ ಮಠದ ಶರಣರು, ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಪದಾಧಿಕಾರಿಗಳು, ಭಕ್ತರು, ಉಪಸ್ಥಿತರಿದ್ದರು.