“ಪುಟಾಣಿಗಳ ಬಣ್ಣದೋಕುಳಿ” ಪೋಷಕರು, ಸ್ನೇಹ ಬಳಗದೊಂದಿಗೆ ಹೋಳಿ ಸಂಭ್ರಮ! 

Ravi Talawar
“ಪುಟಾಣಿಗಳ ಬಣ್ಣದೋಕುಳಿ” ಪೋಷಕರು, ಸ್ನೇಹ ಬಳಗದೊಂದಿಗೆ ಹೋಳಿ ಸಂಭ್ರಮ! 
WhatsApp Group Join Now
Telegram Group Join Now

ಎಂ.ಕೆ.ಹುಬ್ಬಳ್ಳಿ, ಮಾರ್ಚ್ 26: ತರಹೇವಾರಿ ಬಣ್ಣಗಳು, ಬಣ್ಣ ಎರಚುವ ಕೋವಿ, ಬಣ್ಣ ಮಿಶ್ರಿತ ನೀರು ತುಂಬಿದ ಬಲೂನ್ಸ್ ಹಿಡಿದು ಪರಸ್ಪರ ಬಣ್ಣ ಎರಚಿದ ಪುಟಾಣಿಗಳು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಎಂ.ಕೆ.ಹುಬ್ಬಳ್ಳಿ, ದಾಸ್ತಿಕೊಪ್ಪ, ಶುಗರ್ ಫ್ಯಾಕ್ಟರಿ, ಹೊಳಿ ಹೊಸೂರು, ನೇಗಿನಹಾಳ ಹಾಗೂ ಸುತ್ತಲಿನ ಹಲವು ಹಳ್ಳಿಗಳಲ್ಲಿ ಸೋಮವಾರ ಮತ್ತು ಮಂಗಳವಾರ ಹೋಳಿ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದರು.

               

ಕಾಮನನ್ನು ತಯಾರಿಸಿ ಇಡೀ ರಾತ್ರಿ ಹೋಳಿ ಹಾಡು, ತತ್ವಪದ, ಭಜನೆಗಳೊಂದಿಗೆ ಕಾಮನನ್ನು ಮೆರೆಸಿದ ಬುಧವಾರ ದಹಿಸಿ ಕೆಂಪು, ಕೇಸರಿ, ಹಳದಿ, ಹಸಿರು, ನೀಲಿ, ಗುಲಾಬಿ ಹೀಗೆ ವಿವಿಧ ಬಣ್ಣಗಳಲ್ಲಿ ಪುಟಾಣಿಗಳು, ಯುವಕ, ಯುವತಿಯರು ಮಿಂದೆದ್ದರು.

ಪುಟಾಣಿಗಳು ತಮ್ಮ ಪ್ರಿಯಕರ ಮತ್ತು ಸ್ನೇಹ ಬಳಗದೊಂದಿಗೆ ಖುಷಿಯಿಂದ ಬಣ್ಣದೋಕುಳಿ ಆಡಿದರು. ಹಿರಿಯರು, ಕಿರಿಯರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮದ ಹೋಳಿ ಹಬ್ಬಕ್ಕೆ ಸಾಕ್ಷಿಯಾದರು.

ದಾಸ್ತಿಕೊಪ್ಪ ಗ್ರಾಮದಲ್ಲಿ ಬುಧವಾರ ಕಾಮನನ್ನು ದಹಿಸಿ ಬಣ್ಣದೋಕುಳಿ ಆಡಲಾಯಿತು. ಗ್ರಾಮದ ಬಸವೇಶ್ವರ ಓಣಿ ಹಾಗೂ ಶಾಂತಿ ನಗರದಲ್ಲಿ ಕಾಮನನ್ನು ದಹಿಸಿ ಪುಟಾಣಿಗಳು ಹಾಗೂ ಯುವ ಸಮೂಹ ಬಣ್ಣಗಳಲ್ಲಿ ಮಿಂದೆದ್ದರು.

ಶಾಂತಿನಗರದ ಪುಟಾಣಿಗಳಾದ ಸಾಹಿತ್ಯ, ಸಾನ್ವಿ, ಕೃತಿಕಾ, ಪ್ರಣೀತ, ಚಾರ್ವಿ, ಖುಷಿ, ರಿಷಿ, ಶ್ರೇಯಸ್, ಆರಾಧ್ಯ, ಕುಮಾರ, ಗಣೇಶ್, ಕಾವೇರಿ ಹಾಗೂ ಕಾಲನಿಯ ಎಲ್ಲ ಮಕ್ಕಳ ತರಹೇವಾರಿ ಬಣ್ಣಗಳಲ್ಲಿ ಮಿಂದೆದ್ದು ಸಂಭ್ರಮಪಟ್ಟರು.

ಆನಂದ ತಳವಾರ, ಮಂಜು ಕೋಲಕಾರ, ರುದ್ರಪ್ಪ ತಳವಾರ, ಬಸವರಾಜ ಕೋಲಕಾರ, ಮಾರುತಿ ಗಣಾಚಾರಿ, ಯಜಕಲ್ ಕೋಲಕಾರ, ಸಿದ್ಧರಾಮ ತಳವಾರ, ಪರಶುರಾಮ ತಳವಾರ, ಹಣಮಂತ ತಳವಾರ, ರಾಜು ತಳವಾರ, ಅಶೋಕ ಕೋಲಕಾರ, ಶೇಖರ ತಳವಾರ, ಮೈಲಾರ ಕೋಲಕಾರ, ಚಂದ್ರು ತಳವಾರ, ನಾಗರಾಜ ತಳವಾರ, ಪ್ರಕಾಶ ಕೋಲಕಾರ, ಪ್ರಕಾಶನ ತಳವಾರ , ಮೈಲಾರ, ಶ್ರೀಧರ, ಚೇತನ್ ಸೇರಿದಂತೆ ಶಾಂತಿ ಕಾಲನಿಯ ಪ್ರಮುಖರು, ಯುವಕರು ಹೋಳಿ ಹಬ್ಬವನ್ನು ಸಂಭ್ರಮದಿಂದ ಒಗ್ಗಟ್ಟಾಗಿ ಆಚರಿಸಿದರು.

WhatsApp Group Join Now
Telegram Group Join Now
Share This Article