ಅಲ್ಪಸಂಖ್ಯಾತ ಸಮೂದಾಯದ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಕೊಡಿ: ಶಾಸಕ ಲಕ್ಷ್ಮಣ ಸವದಿ

Hasiru Kranti
ಅಲ್ಪಸಂಖ್ಯಾತ ಸಮೂದಾಯದ ಮಕ್ಕಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಕೊಡಿ: ಶಾಸಕ ಲಕ್ಷ್ಮಣ ಸವದಿ
WhatsApp Group Join Now
Telegram Group Join Now
ಅಥಣಿ 01- ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿ ಆಗ ಮಕ್ಕಳು ಕೇವಲ ನಮ್ಮ ಕುಟುಂಬಕ್ಕೆ ಮಾತ್ರವಲ್ಲದೇ ಇಡೀ ಸಮಾಜಕ್ಕೆ ಆಸ್ತಿಗಳಾಗುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ಪಟ್ಟಣದ ನೀರಾವರಿ ಇಲಾಖೆ ಆವರಣದಲ್ಲಿ ಶುಕ್ರವಾರ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಂಜೂರಾದ ಸರಕಾರಿ ಮೌಲಾನಾ ಆಝಾದ ಮಾದರಿ ಆಂಗ್ಲ ಮಾಧ್ಯಮ ಶಾಲೆಯನ್ನು ಸಸಿಗೆ ನೀರು ಉಣಿಸುವ ಮೂಲಕ ಶಾಸಕ ಲಕ್ಷ್ಮಣ ಸವದಿ  ಉದ್ಘಾಟಿಸಿ ಮಾತನಾಡಿದ ಅವರು ನಾವು ಪಡೆದ ಶಿಕ್ಷಣ ಖರ್ಚು ಮಾಡಿದಷ್ಟು ವೃದ್ಧಿಯಾಗುತ್ತದೆ ಇದರ ವಿರುದ್ಧವಾಗಿ ನಾವು ಹಣ ಖರ್ಚು ಮಾಡಿದಷ್ಟು ಕಡಿಮೆಯಾಗುತ್ತದೆ ಹೀಗಾಗಿ ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮುಂದಾಗಬೇಕು ಹೊರತು ಸಂಪತ್ತು, ಹಣ, ಆಸ್ತಿಯನ್ನಲ್ಲ. ಮಾತೃಭಾಷೆ ಕನ್ನಡ, ದೇಶದ ಅತೀ ಹೆಚ್ಚು ಜನ ಮಾತನಾಡುವ ಹಿಂದಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಇಂಗ್ಲೀಷ ಭಾಷೆ ಸೇರಿದಂತೆ ತ್ರೀಭಾಷೆಗಳಿಗೂ ಆದ್ಯತೆ ನೀಡಬೇಕು. ಅಥಣಿಯೂ ಕೂಡ ಶೈಕ್ಷಣಿಕ ಕೇಂದ್ರವಾಗಿ ಇತ್ತೀಚಿಗೆ ಹೊರ ಹೊಮ್ಮಿದ್ದು, ಪಶು ವೈದ್ಯಕೀಯ ಮಹಾವಿದ್ಯಾಲಯ, ಡಿಪ್ಲೋಮಾ, ಸರಕಾರಿ ಪದವಿ ಮಹಾವಿದ್ಯಾಲಯಗಳು, ಚನ್ನಮ್ಮ ವಸತಿ ಶಾಲೆಗಳು  ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಮಂಜೂರಾಗಿರುವ ಕೃಷಿ ಮಹಾವಿದ್ಯಾಲಯ, ಕೇಂದ್ರಿಯ ವಿದ್ಯಾಲಯ, ಕಾರ್ಮಿಕರ ಮಕ್ಕಳಿಗಾಗಿ ಉಚಿತ ವಸತಿ ಶಾಲೆ ಸೇರಿದಂತೆ ಇನ್ನೂ ಅನೇಕ ಶೈಕ್ಷಣಿಕ ಕೇಂದ್ರಗಳು ಸದ್ಯದಲ್ಲಿ ಪ್ರಾರಂಭಗೊಳ್ಳಲಿವೆ, ಅಥಣಿ ಪಟ್ಟಣಕ್ಕೆ ಇನ್ನು ಕೆಲವೆ ದಿನಗಳಲ್ಲಿ ಎರಡು ಹೈಸ್ಕೂಲಗಳನ್ನು ಮಂಜೂರು ಮಾಡಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣ ಎಲ್ಲ ಸಮೂದಾಯದ ಮಕ್ಕಳಿಗೆ ಸಿಗಬೇಕು ಅಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯವಾಗಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಅಲ್ಪ ಸಂಖ್ಯಾತ ಮಕ್ಕಳಿಗಾಗಿ ಅಥಣಿಯಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಕೊರತೆ ಇತ್ತು. ಈ ಕೊರತೆಯನ್ನು  ಶಾಸಕ ಲಕ್ಷ್ಮಣ ಸವದಿಯವರು ನೀಗಿಸಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಮೂಲಕ ಸರಕಾರದ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು
ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳ ಸಿದ್ಧ ಸ್ವಾಮೀಜಿ, ಅಲ್ಪ ಸಂಖ್ಯಾತ ಇಲಾಖೆ ಜಿಲ್ಲಾಧಿಕಾರಿ ಫಕೀರಪ್ಪ ಪೂಜಾರಿ, ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಮಲ್ಲಿಕಾರ್ಜುನ ಬುಟಾಳಿ, ಸಂತೋಷ ಸಾವಡಕರ, ಮಲ್ಲೇಶ ಹುದ್ದಾರ, ಬಸವರಾಜ ನಾಯಿಕ, ಬಾಬು ಖೆಮಲಾಪುರ, ಮುಸ್ಲಿಂ ಧರ್ಮಗುರು ಮುಕ್ತಿ ಹಬೀಬುಲ್ಲಾ ಮುಲ್ಲಾ, ಧುರೀಣರಾದ ಸೈಯ್ಯದಮೀನ್ ಗದ್ಯಾಳ, ಯುನ್ನೂಸ್ ಮುಲ್ಲಾ, ರಿಯಾಜ ಸನದಿ, ಆಸೀಫ ತಾಂಬೋಳಿ, ರಫಿಕ್ ಢಾಂಗೆ, ಐ.ಜಿ.ಬಿರಾದಾರ, ರಫಿಕ್ ಪಟೇಲ್, ಇರ್ಷಾದ ಬಾರಗೀರ, ಎಮ್.ಎ.ತರಡೆ, ಶಬ್ಬೀರ ಸಾತಬಚ್ಚೆ, ಅರುಣಕುಮಾರ ಯಲಗುದ್ರಿ, ಶಾಂತಿನಾಥ ನಂದೇಶ್ವರ, ಡಾ.ಪದ್ಮಜಿತ್ ನಾಡಗೌಡ, ದುಂಡಪ್ಪ ಅಸ್ಕಿ, ರಾಮಣ್ಣ ಧರಿಗೌಡ, ಸಲಾಂ ಕಲ್ಲಿ, ಸಿ.ಬಿ.ಪಡನಾಡ, ಅಸ್ಲಂ ನಾಲಬಂದ, ಸಿರಾಜ ಸನದಿ,  ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜೆ ಸೇರಿದಂತೆ ಅಲ್ಪ ಸಂಖ್ಯಾತ ಬಂಧುಗಳು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article