ಮೂಡಲಗಿ : ಸುಮಾರು ೩೨ ವ?ಗಳ ಕಾಲ ಸಮಾಜದಲ್ಲಿ ಅಪರಾಧಗಳ ತಡೆಗಟ್ಟುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪಿಎಸ್‌ಐ ವಾದಿರಾಜರ ಪಾತ್ರ ಅಪಾರ ಎಂದು ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೂಡ ಬಣ್ಣಿಸಿದರು.
ಗುರುವಾರದಂದು ತಾಲೂಕಿನ ಕುಲಗೋಡ ಪೊಲೀಸ ಠಾಣೆಯಲ್ಲಿ ವಯೋ ನಿವೃತ್ತಿ ಹೊಂದಿದ ಪಿಎಸ್‌ಐ ವಾದಿರಾಜ ಉತ್ರ್ತೇಶ್ವರ ರವರ ಬಿಳ್ಕೋಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿವೃತ್ತ ಪಿಎಸ್‌ಐ ವಾದಿರಾಜರು ತಮ್ಮ ಸೇವಾವಧಿಯಲ್ಲಿ ಹುನಗುಂದ, ವಿಜಯಪೂರ, ಬಾಗೇವಾಡಿ ಸೇರಿದಂತೆ ರಾಯಬಾಗ ಪೊಲೀಸ್ ಠಾಣೆಗಳಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಈಗ ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಅವರ ನಿವೃತ್ತಿ ಜೀವನ ಸುಖ ಶಾಂತಿಯಿಂದ ಕೂಡಿ, ಅವರ ಅನುಭವ ಅನೇಕ ಯುವಕರಿಗೆ ದಾರಿದೀಪವಾಗಲಿ ಎಂದು ಹಾರೈಸಿದರು.
ಬಲಭೀಮ ದೇವಸ್ಥಾನದಿಂದ ವಾಧ್ಯಮೇಳದೊಂದಿಗೆ ಕುದುರೆ ಮೇಲೆ ಗ್ರಾಮದ ಪ್ರಮುಖ ಬೀದಿಗಳಲ್ಲಿ, ನಿವೃತ್ತ ಪಿಎಸ್‌ಐ ವಾದಿರಾಜ ಉತ್ರ್ತೇಶ್ವರ್‍ವರ ಭವ್ಯ ಮೆರವಣೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಠಾಣಾ ವ್ಯಾಪ್ತಿಯ ಗ್ರಾಮಗಳ ಮುಖಂಡರು. ವಿವಿಧ ಸಂಘಟನೆಗಳು. ಗ್ರಾಮಸ್ಥರಿಂದ ದಂಪತಿಗಳಿಗೆ ಸತ್ಕಾರ ನಡೆಯಿತು.
ಈ ಸಂದರ್ಭದಲ್ಲಿ ಕುಲಗೋಡ ಪಿಎಸ್‌ಐ ಆನಂದ ಬಿ, ಎಎಸ್‌ಐ ಎ.ಡಿ ಕೊಪ್ಪದ. ಎ.ಎಸ್ ಮಡಿವಾಳರ, ಅಜಿತ ಆಡಿನವರ, ಎಲ್.ಟಿ ಪೂಜೇರಿ, ವಿ.ಎಲ್ ದೂಳಪ್ಪನವರ, ಎಲ್.ಎಮ್ ನಾಯಿಕ, ಎಸ್.ಎನ್ ಬಡಬಡಿ, ಶಿವು ಪಾಟೀಲ, ವಿ.ಎ ದೇಸಾಯಿ, ಎಮ್.ಆರ್ ಲದ್ದಿ, ಸಿ.ಎಸ್ ಹಿರೇಮಠ, ಅಲ್ಲಮ್ಮಪ್ರಭು ಹಡಗಿನಾಳ ಹಾಗೂ ಠಾಣಾ ಸಿಬ್ಬಂದಿ ವರ್ಗ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.