ಬೆಳಗಾವಿ,ಮಾ26:ಮಹಿಳೆಯರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳನ್ನು ಶ್ರದ್ಧೆಯಿಂದ ಮಾಡಬೇಕು.ಅದರ ಜೊತೆಗೆ ಪರೋಪಕಾರಿ ಕೆಲಸಗಳನ್ನು ಕೈಗೊಳ್ಳಬೇಕು ಇದರಿಂದ ಮನಶಾಂತಿ ದೊರೆಯುವದು.ಒಬ್ಬ ಮಹಿಳೆ ತನ್ನ ಕುಟುಂಬದಲ್ಲಿ ಸುಧಾರಣೆ ತರುವ ಮೂಲಕ ಇಡೀ ಸಮಾಜ ವನ್ನೇ ಪರಿವತಿ೯ಸಬಹುದು.ನಿಮ್ಮಂತಹ ಮಹಿಳಾ ಮಂಡಳಗಳ ಮುಖಾಂತರ ಸಮಾಜ ಸುಧಾರಣೆ ಕಾಯ೯ಗಳನ್ನು ಕೈಗೊಳ್ಳುವಂತೆ ಸರಳಜೀವಿ ಪದ್ಮಭೂಷಣ ಶ್ರೀಮತಿ ಸುಧಾ ಮೂರ್ತಿ ಅವರು ಇಲ್ಲಿನ ಮಹಿಳೆಯರಿಗೆ ಸಲಹೆ ನೀಡಿದರು.
ಅವರು ನಿನ್ನೆ ಇಲ್ಲಿನ ದೂರದರ್ಶನ ನಗರದ ಸಂಸ್ಕೃತಿ ಮಹಿಳಾ ಮಂಡಳದ ವತಿಯಿಂದ ಜರುಗಿದ ವಾರ್ಷಿಕ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಈ ಸಮಾವೇಶದಲ್ಲಿ ಸಂಸ್ಕೃತಿ ಮಹಿಳಾ ಮಂಡಳ, ರಡ್ಡಿ ಮಹಿಳಾ ಸಂಘ,ಮೈತ್ರಿ ಕ್ಲಬ್, ನಾನು ನಮ್ಮವರೊಂದಿಗೆ ಸಂಘ, ದೂರದರ್ಶನ ನಗರದ ಪತಂಜಲಿ ಯೋಗಾಸನ ಕೇಂದ್ರದ ಮಹಿಳೆಯರು ಪಾಲ್ಗೊಂಡಿದ್ದರು.
ಸಂಸ್ಕೃತಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀಮತಿ ಶಾಂತಾ ಜಂಗಲ ಅಧ್ಯಕ್ಷತೆ ವಹಿಸಿದ್ದರು.ಶ್ರೀಮತಿ ಪ್ರತಿಭಾ ಸಿದ್ದಪ್ಪ ಗೌಡರ ಸ್ವಾಗತ ಬಯಸಿದರು.ಸಂಯೋಜಕಿಯರಾದ ಶ್ರೀಮತಿ ಸುನೀತಾ ಸುರೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ಶ್ರೀಮತಿ ಅನುಶ್ರೀ ದೇಶಪಾಂಡೆಯವರು ವಂದಿಸಿದರು.
ವಿಶೇಷ ಅತಿಥಿಯಾಗಿ ಡಾ.ಸುನಂದಾ ಕುಲಕರ್ಣಿ,ಶ್ರೀ ರಮೇಶ ಜಂಗಲ ಆಗಮಿಸಿದ್ದರು.
ಬೆಳಗಾವಿಯ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳಾಗಿ ಶ್ರೀಮತಿಯರಾದ ಲಲಿತಾ ಕಾಂಚನ,ಕಾಂಚಾಣ, ಅರಕೇರಿ, ಕಸ್ತೂರಿ ಬರಮನಿ,ತುಳಸಾ ಪಾಟೀಲ, ಸವಿತಾ ನಾಡಗೌಡರ,ಆರತಿ ಅಂಗಡಿ,ಮಂಗಳಾ ಅರಳಿಕಟ್ಟಿ,
ನೀಲಂ ಗುತ್ತೀಗೋಳಿ, ಸುನೀತ ನಂದೆಣ್ಣವರ, ಕಮಲಾ ಪುರದ, ಲೀನಾ ಭಟ್ಕಳ, ದೀಪಾ ಹಾಲಪ್ಪನವರ ಮುಂ. ಭಾಗವಹಿಸಿದ್ದರು.