ನ್ಯಾಯಯುತ ಹೊರಾಟದಿಂದ ಆಡಳಿತ ಪಡೆಯುತ್ತೇವೆ: ಗಿರಮಲ್ಲ ಮುಧೋಳ

Ravi Talawar
ನ್ಯಾಯಯುತ ಹೊರಾಟದಿಂದ ಆಡಳಿತ ಪಡೆಯುತ್ತೇವೆ: ಗಿರಮಲ್ಲ ಮುಧೋಳ
WhatsApp Group Join Now
Telegram Group Join Now
ಮುಗಳಖೋಡ :  ನ್ಯಾಯಯುತ ಸಭೆಗಳನ್ನು ನಡೆಸದೆ ಕೊಟ್ಟಿ ದಾಖಲೆ ಸೃಷ್ಟಿಸಿ ನಂಬಿಕೆಗಳಿಗೆ ತಿಲಾಂಜಲಿ ನೀಡಿ ವಂಶಾಭಿವೃದ್ಧಿಯೇ ಮೂಲವಾಗಿ ಮಾಡಿಕೊಂಡು ಸಾರ್ವಜನಿಕ ಶಿಕ್ಷಣ ಸಂಸ್ಥೆಯಾದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯನ್ನು ತನ್ನ ದಾಗಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಸಿ ಬಿ ಕುಲಿಗೋಡ ಹಾಗೂ ಅವನ ಕುಟುಂಬಸ್ಥರ ನಡೆಗೆ ನ್ಯಾಯಯುತ ಹೊರಾಟದಿಂದ ಆಡಳಿತ ನಮ್ಮದಾಗಿಸಿಕೊಳ್ಳುತ್ತೆವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಗಿರಮಲ್ಲ ಮುಧೋಳ ಹೇಳಿದರು.
ಅವರು ಸೋಮವಾರ 28 ರಂದು ಸಂಜೆ 2 ಗಂಟೆಗೆ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಘದ ಮುಂಬಾಗದ ಶಿವರುದ್ರಪ್ಪ ಹೊಸಪೇಟಿ ತೋಟದ ಮನೆಯ ಆವರಣದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಉಪಾಧ್ಯಕ್ಷರ ಹಾಗೂ ಆಡಳಿತ ಮಂಡಳಿ ಕರೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ಚಂದ್ರು ಕುಲಿಗೋಡ ಮೊಸದಿಂದ ಸಂಸ್ಥೆಯ ಅಧ್ಯಕ್ಷನಾಗಿ ಆಡಳಿತ ಮಂಡಳಿ ಸಭೆ ಕರೆದು  ಅನಧಿಕೃತ ದಾಖಲೆ ಸೃಷ್ಟಿಸಿ ಹಂತಹಂತವಾಗಿ ನಮ್ಮ ಅದಿಕಾರ ಕಸಿದುಕೊಂಡು ತಮ್ಮ ಪುತ್ರನನ್ನು ಅಧ್ಯಕ್ಷನಾಗಿ ಹಾಗೂ ತಮ್ಮ ಕುಟುಂಬದವರನ್ನೇ ಸದಸ್ಯರನ್ನಾಗಿ ಮಾಡಿಕೊಂಡ ವಿಚಾರ ಇಲಾಖಾ ಕಛೇರಿಯಲ್ಲಿ ಪರಿಸಿಲಿಸಿದಾಗ ತಿಳಿದ ನಾವೆಲ್ಲ ಸಂಸ್ಥಾಪಕ ಆಡಳಿತ ಮಂಡಳಿ ಇಂದು ಇಂಚಗೇರಿ ಸಾಂಪ್ರದಾಯದ ಹಿಪ್ಪರಗಿ ಮಠದ ಪ್ರಭು ಬೆನ್ನಾಳೆ ಮಹಾರಾಜರು, ರಾಜಕೀಯ ಧುರೀಣ ಪ್ರಥಾಪ ಅಣ್ಣಾ ಪಾಟೀಲ ಹಾಗೂ ಮುಖಂಡರ ಮತ್ತು ಸಾರ್ವಜನಿಕ ಸಭೆಯ ಕರೆದು ಅವರೆಲ್ಲರ ಮುಂದಾಳತ್ವ ಮಾರ್ಗದರ್ಶನದಲ್ಲಿ ನ್ಯಾಯಯುತ ಹೊರಾಟದಿಂದ ಆಡಳಿತ ನಮ್ಮ  ದಾಗಿಸಿಕೊಳ್ಳುತ್ತೆವೆ ಎಂದು ಹೇಳಿದರು.
27/10/1977 ರಲ್ಲಿ ಮುರಲಿಧರ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಾವೆಲ್ಲಾ ಕಷ್ಟ ಪಟ್ಟು ಅಂದಿನ ದಿನಗಳಲ್ಲಿ ನಮ್ಮೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬಡ ವಿದ್ಯಾರ್ಥಿಗಳಿಗೆ ಪ್ರೌಢ ಶಿಕ್ಷಣಕ್ಕಾಗಿ
ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಿ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿದ ನಮ್ಮನ್ನೆ ಮೊಸದಿಂದ ತೆಗೆದು ತನ್ನ ಕುಟುಂಬದ ಆಸ್ತಿ ಮಾಡಿಕೊಳ್ಳಲು ಹುನ್ನಾರ ನಡೆಸುತ್ತಿರುವ ಸಿ ಬಿ ಕುಲಿಗೋಡ ಹಾಗೂ ಅವನ ಮಗ ಸಂಜು ಕುಲಿಗೋಡ ಕುಟುಂಬದಿಂದ ಬಿಡುಗಡೆ ಗೊಳಿಸಿ ಸಾರ್ವಜನಿಕ ಸಂಸ್ಥೆಯಾಗಿ ಉಳಿಸಿ ಬೆಳೆಸಲು ನಾವೆಲ್ಲ ಸಾರ್ವಜನಿಕರು ಹೊರಾಟಕ್ಕೆ ಸಿದ್ದರಾಗಿದ್ದೆವೆ ಎಂದು ಸಂಸ್ಥಾಪಕ ಸದಸ್ಯ ಬಾಬಾಸಾಹೇಬ ಪರಗೌಡ ಪಾಟೀಲ ಹೇಳಿದರು,
.ಜ್ಯೋತೆಪ್ಪಾ ಗುಮಠಿ,ಪ್ರಥಾಪ ಶೇಗುಣಸಿ, ಸಂಗಪ್ಪ ಜಂಬಿಗಿ, ಪರಗೌಡ ಪಾಟೀಲ, ಹಣಮಂತ ಕುಲಿಗೋಡ, ಸುರೇಶ ಹೊಸಪೇಟಿ, ಶಿವರುದ್ರಪ್ಪ ಹೊಸಪೇಟಿ, ಪುರಸಭೆ ಸದಸ್ಯರಾದ ಚೇತನ ಯಡವಣ್ಣವರ,ಮಹಾಂತೇಶ ಯರಡೆತ್ತಿ ಹಾಗೂ ಶಿಕ್ಷಣ ಸಂಸ್ಥೆಯ ಅಭಿಮಾನಿಗಳು ಇದ್ದರು.
WhatsApp Group Join Now
Telegram Group Join Now
Share This Article