ಬೆಳಗಾವಿ, ಜುಲೈ ೨೯, ೨೦೨೫: ವೈಮಾಂತರಿಕ್ಷ ಉದ್ದಿಮೆಗಳಿಗೆ ಕಚ್ಚಾ ಲೋಹಗಳನ್ನು ಬಳಸಿ ಬಿಡಿಭಾಗಗಳನ್ನು ತಯಾರಿಸುವ ಕಂಪನಿ ಸ್ಕ್ವಾಡ್ ಫೋರ್ಜಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ತನ್ನ ಫೋರ್ಜಿಂಗ್ ಪ್ರಕ್ರಿಯೆಗೆ (ಲೋಹದ ಉತ್ಪನ್ನಗಳ ತಯಾರಿಕೆ) ಪ್ರತಿಷ್ಠಿತ ರಾಷ್ಟ್ರೀಯ ವೈಮಾಂತರಿಕ್ಷ ಮತ್ತು ರಕ್ಷಣಾ ಗುತ್ತಿಗೆದಾರರ ಮಾನ್ಯತೆ ಕಾರ್ಯಕ್ರಮದ (ಎನ್‌ಎಡಿಸಿಎಪಿ) ಮಾನ್ಯತೆ ಪಡೆದುಕೊಂಡಿದೆ.
ಸ್ಕ್ವಾಡ್ ಎನ್ನುವುದು ಏಕಸ್ ಲಿಮಿಟೆಡ್ (ಂequs) ಮತ್ತು ಸಂಕೀರ್ಣ ಸ್ವರೂಪದ ಲೋಹದ ಉತ್ಪನ್ನಗಳ ಪ್ರಮುಖ ತಯಾರಿಕೆ ಹಾಗೂ ಸಂಸ್ಕರಣಾ ಕಂಪನಿ ಆಬರ್ಟ್ ಆ?ಯಂಡ್ ಡುವಾಲ್‌ನ ಜಂಟಿ ಉದ್ದಿಮೆಯಾಗಿದೆ.
ಈ ಸರ್ಟಿಫಿಕೆಟ್ ಹೊಂದುವ ಮೂಲಕ ಸ್ಕ್ವಾಡ್, ಇಲ್ಲಿಯವರೆಗಿನ ಈ ಜಾಗತಿಕ ಮಾನದಂಡ ಸಾಧಿಸಿರುವ ವಿಶ್ವದ ಆಯ್ದ ಕೆಲವೇ ಫೋರ್ಜಿಂಗ್+ ಕಂಪನಿಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.
ಅಮೆರಿಕದ ಕಾರ್ಯಕ್ಷಮತೆ ಪರಾಮರ್ಶೆ ಸಂಸ್ಥೆ (ಪಿಆರ್‌ಐ) ಕಠಿಣ ಪರಿಶೋಧನೆಯ ನಂತರ ಈ ಸರ್ಟಿಫಿಕೇಟ್ ನೀಡಿದೆ. ಈ ಸರ್ಟಿಫಿಕೇಟ್‌ಗೆ ಸಂಬಂಧಿಸಿದ ಮೌಲ್ಯಮಾಪನವು ಕಚ್ಚಾ ಪದಾರ್ಥಗಳ ಸಂಗ್ರಹ, ಸಂಪೂರ್ಣ ತಯಾರಿಕೆ ಮುಂಚಿನ ಹಂತ, ತಾಪನ, ಲೇಪನ, ಟ್ರಿಮ್ಮಿಂಗ್, ತಪಾಸಣೆ, ಅರ್ಹತೆ ಮತ್ತು ಅಂತಿಮ ಸಾಗಣೆಯವರೆಗಿನ ಸಂಪೂರ್ಣ ಫೋರ್ಜಿಂಗ್ ಪ್ರಕ್ರಿಯೆ ಒಳಗೊಂಡಿದೆ.
ಈ ಮಾನ್ಯತೆ ಪಡೆದುಕೊಂಡಿರುವ ಸಾಧನೆಯ ಕುರಿತು ಪ್ರತಿಕ್ರಿಯಿಸಿರುವ ಏಕಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಮೆಲ್ಲಿಗೇರಿ ಅವರು, ?ಎನ್‌ಎಡಿಸಿಎಪಿ ಫೋರ್ಜಿಂಗ್ ಸರ್ಟಿಫಿಕೇಟ್ ಪಡೆದುಕೊಂಡಿರುವುದು ಬೆಳಗಾವಿ ಏರೋಸ್ಪೇಸ್ ಕ್ಲಸ್ಟರ್‌ನಲ್ಲಿರುವ ಏಕಸ್ ಪರಿಸರದಲ್ಲಿ ಸ್ಕ್ವಾಡ್ ಒಳಗೊಂಡಿರುವ ಸುಧಾರಿತ ಸಾಮರ್ಥ್ಯಗಳಿಗೆ ದೊರೆತ ತಾಂತ್ರಿಕ ಮಾನ್ಯತೆಯಾಗಿದೆ. ಫೋರ್ಜಿಂಗ್, ಪ್ರಿಸಿಷನ್ ಮಷಿನಿಂಗ್, ಸರ್ಫೇಸ್ ಟ್ರೀಟ್‌ಮೆಂಟ್ ಮತ್ತು ಏರೊಸ್ಟ್ರಕ್ಚರ್ ಜೋಡಣೆಗಳನ್ನು ಒಳಗೊಂಡ ಸಿದ್ಧಪಡಿಸಿದ ವೈಮಾಂತರಿಕ್ಷ ಘಟಕಗಳಿಗೆ ಸಂಪೂರ್ಣವಾಗಿ ಸಂಯೋಜಿತ ಪರಿಹಾರ ಒದಗಿಸುವ ನಮ್ಮ ಸಾಮರ್ಥ್ಯವನ್ನು ಇದು ಮತ್ತೊಮ್ಮೆ ಬಲಪಡಿಸಲಿದೆ. ಈ ಸಾಧನೆಯ ಮೈಲಿಗಲ್ಲು, ಪೂರೈಕೆ ಸರಪಳಿಯಾದ್ಯಂತ ದಕ್ಷತೆ ಮತ್ತು ಮೌಲ್ಯ ಹೆಚ್ಚಿಸುವಲ್ಲಿ ಅತ್ಯುನ್ನತ ಜಾಗತಿಕ ಮಾನದಂಡಗಳನ್ನು ಪಾಲಿಸುವ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಅಲ್ಯುಮಿನಿಯಂ, ಉಕ್ಕು, ಟೈಟಾನಿಯಂ ಅಥವಾ ನಿಕಲ್ ಆಧಾರಿತ ಮಿಶ್ರಲೋಹಗಳಲ್ಲಿ ಎಂಜಿನ್, ಲ್ಯಾಂಡಿಂಗ್ ಗೇರ್ ಮತ್ತು ಬ್ರೇಕಿಂಗ್ ಸಿಸ್ಟಮ್ ಘಟಕಗಳಿಗೆ ಸಣ್ಣ ಮತ್ತು ಮಧ್ಯಮ ಗಾತ್ರದ ಏರೋ-ಸ್ಟ್ರಕ್ಚರಲ್ ಭಾಗಗಳನ್ನು ತಯಾರಿಸುವಲ್ಲಿ ಸ್ಕ್ವಾಡ್ ಪರಿಣತಿ ಹೊಂದಿದೆ. ಬೆಳಗಾವಿ ತಯಾರಿಕಾ ಕ್ಲಸ್ಟರ್‌ನಲ್ಲಿರುವ ಇದರ ಘಟಕಗಳು ೧೦,೦೦೦ ಟನ್ ಹೈಡ್ರಾಲಿಕ್ ಪ್ರೆಸ್ ಮತ್ತು ೧,೨೦೦ ಟನ್ ಸ್ಕ್ರೂ ಪ್ರೆಸ್ ಮತ್ತು ಈ ಘಟಕಗಳನ್ನು ತಯಾರಿಸಲು ಇತರ ಸಂಬಂಧಿತ ಸೌಲಭ್ಯಗಳನ್ನು ಒಳಗೊಂಡಿದೆ.
ಸ್ಕ್ವಾಡ್-ಗೆ ಈಗ ದೊರೆತಿರುವ ?ಎನ್‌ಎಡಿಸಿಎಪಿ? ಮಾನ್ಯತೆಯು ಅದರ ಎಎಸ್೯೧೦೦ ಮಾನ್ಯತೆ ಮತ್ತು ಜಾಗತಿಕ ವೈಮಾಂತರಿಕ್ಷ ಮತ್ತು ರಕ್ಷಣಾ ವಲಯಗಳ ಗ್ರಾಹಕರ-ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಸೂಕ್ತವಾಗಿ ಹೊಂದಿಕೆಯಾಗುತ್ತದೆ. ಇದು ಏರ್‌ಬಸ್, ಬೋಯಿಂಗ್, ಸಫ್ರಾನ್ ಸೇರಿದಂತೆ ವೈಮಾಂತರಿಕ್ಷ ವಲಯದ ಇತರ ಪ್ರಮುಖ ಗ್ರಾಹಕರ ಜೊತೆಗೆ ವಾಣಿಜ್ಯ ಬಾಂಧವ್ಯ ಬಲಪಡಿಸಲು ದಾರಿ ಮಾಡಿಕೊಡಲಿದೆ. ಇದಕ್ಕೆ ಪೂರಕವಾಗಿ ಇತರ ಮೂಲ ಉಪಕರಣ ತಯಾರಿಕಾ ಕಂಪನಿಗಳು ಮತ್ತು ಗುತ್ತಿಗೆದಾರರ ಜೊತೆಗೆ ಹೊಸ ವಹಿವಾಟಿನ ಅವಕಾಶಗಳನ್ನೂ ಒದಗಿಸಲಿದೆ.
ಈ ಪ್ರಮಾಣಪತ್ರ ದೊರೆತಿರುವುದು ಸ್ಕ್ವಾಡ್ ಅನ್ನು ?ಎನ್‌ಎಡಿಸಿಎಪಿ?ಯ ಅರ್ಹ ತಯಾರಕರ ಪಟ್ಟಿಯಲ್ಲಿ (ಕ್ಯುಎಂಎಲ್) ಕಾಣಿಸಿಕೊಳ್ಳಲು ಅರ್ಹತೆ ಒದಗಿಸಲಿದೆ.