ನಮ್ಮ ಶರೀರ ರಕ್ಷಣೆಗೆ ನಾವು ದೃಢ ಸಂಕಲ್ಪ ಮಾಡಬೇಕು : ಕರಿಸಿದ್ದಪ್ಪ ಶಿರಸಂಗಿ 

Ravi Talawar
ನಮ್ಮ ಶರೀರ ರಕ್ಷಣೆಗೆ ನಾವು ದೃಢ ಸಂಕಲ್ಪ ಮಾಡಬೇಕು : ಕರಿಸಿದ್ದಪ್ಪ ಶಿರಸಂಗಿ 
WhatsApp Group Join Now
Telegram Group Join Now

 

ನೇಸರಗಿ.  ನಾವು ಪ್ರಸಕ್ತ ಕಾಲದಲ್ಲಿ ದಿನನಿತ್ಯ ಆಹಾರ ಸೇವನೆ ಮಾಡುವದರಲ್ಲಿ  ಹಾದಿ ತಪ್ಪುತಿದ್ದು  ಬೆಕ್ಕಬಿಟ್ಟಿ ಎಣ್ಣೆ ಪದಾರ್ಥ, ಮೈದಾ ಹಿಟ್ಟಿನ ಪದಾರ್ಥ, ಕುರುಕುಲ ತಿಂಡಿ, ಮಸಾಲೆ ಆಹಾರ, ಮಸಾಲೆ ಅಣ್ಣ, ವಗ್ಗರಣೆ ಪದಾರ್ಥ ಸೇವನೆಯಿಂದ ನಾವು ಸ್ವತ ನಮ್ಮ ಕೈಯಾರೆ ಶರೀರವನ್ನು  ಹಾಳು ಮಾಡಿಕೊಳ್ಳುತ್ತಿದ್ದು ಅದಕ್ಕಾಗಿ ನಾವೆಲ್ಲರೂ   ನಮ್ಮ ದೇಶದಲ್ಲಿ ಬೆಳೆಯುವ ಹಾಗೂ ದಿನನಿತ್ಯ ಬಳಕೆ ಸಾವಯವ  ವಸ್ತುಗಳಾದ ಅಕ್ಕಿ, ಗೋದಿ, ಬೆಲ್ಲ, ಕಾಳು ಬೀಜಗಳು, ಹಾಲು, ಮೊಸರು, ಬೆಣ್ಣೆ, ತುಪ್ಪ, ತರಕಾರಿ  ಇನ್ನೂ ಅನೇಕ ವಸ್ತುಗಳನ್ನು ನಾವು ಭಾರತ ದೇಶದ ಜವಾರಿ ಹಾಗೂ ಸಾವಯವ ವಸ್ತುಗಳ ಬಳಕೆ ಮಾಡಿ ಅದರಿಂದ ಆಹಾರ ಪದಾರ್ಥ  ತಯಾರಿಸಿ ಸೇವಿಸಿದರೆ ನಮ್ಮ ಶರೀರವು  ಸದೃಢವಾಗಿರುತ್ತೆ ಎಂದು   ವರದಶ್ರೀ ಫೌಂಡೇಶನ ಇದರ ಕಾರ್ಯದರ್ಶಿ  ಕರಿಸಿದ್ದಪ್ಪ ಶಿರಸಂಗಿ   ಹೇಳಿದರು.
     ಅವರು ಸೋಮವಾರದಂದು ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಲೀಲಾ ಮಠದಲ್ಲಿ ಶ್ರೀ ವರದಶ್ರೀ ಫೌಂಡೇಶನ ಸಹಯೋಗದೊಂದಿಗೆ  ಆಯೋಜಿಸಲಾಗಿದ್ದ ಕಣ್ಣಿನ ಮತ್ತು ಮೂಗು, ಕಿವಿಗಳ ಸಂರಕ್ಷಣೆಗೆ ಸಿದ್ದಿ ಹನಿ ರಸ  ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ  ಸಿದ್ದಿ  ಹನಿ ರಸ ಪಡೆದು ಕಣ್ಣು ಸ್ವಚ್ಛವಾಗಿ ಕಾಣುತ್ತಿದ್ದಾವೆ  ಎಂದು ಅನೇಕರು  ವೇದಿಕೆಯಲ್ಲಿ ಹೇಳುತ್ತಿದ್ದು ಅದು ನಮ್ಮ ಸಂಸ್ಥೆಗೆ ಹೆಮ್ಮೆ ಎಂದರು.
     ಶ್ರೀ ವಿನಾಯಕ ಕಂಪ್ಯೂಟರ ಶಾಲೆಯ ಅಧ್ಯಕ್ಷ ಬಸವರಾಜ ಹಿರೇಮಠ ಮಾತನಾಡಿ  ಶ್ರೀ ಸಿದ್ದಿ ಹನಿ ರಸದಿಂದ ಅನೇಕರಿಗೆ ಒಳ್ಳೆಯದಾಗಿದ್ದು ಶ್ರೀ ವರದಶ್ರೀ ಫೌಂಡೇಶನ್ ಕಾರ್ಯ ನಿರಂತರವಾಗಿ ಸಾಗಲಿ  ಎಂದರು.
    ಈ ಸಂದರ್ಭದಲ್ಲಿ  ಹಿರಿಯರಾದ  ಮಲ್ಲಿಕಾರ್ಜುನ ಮದನಬಾವಿ  ಅಶೋಕ ಅಗಸಿಮನಿ, ಯಲ್ಲಪ್ಪ ರೊಟ್ಟಿ, ಬಸವರಾಜ ಸಾಲಿಮಠ,  ಚನ್ನಬಸಪ್ಪ ರಾಚಣ್ಣವರ,ದೇಮಣ್ಣ ಗುಜನಟ್ಟಿ, ಸಿದ್ದಾರ್ಥ ಪಾಟೀಲ, ಬಸಪ್ಪ ಚಿಕ್ಕೋಪ್ಪ, ವೀರೂಪಾಕ್ಷ ನೇಸರಗಿ,
 ವರದಶ್ರೀ  ಸ್ವಯಂ ಸೇವಕರಾದ ವಿಶ್ವನಾಥ ರೆಡ್ಡಿ, ಅಭಿಷೇಕ ಚವಾನ, ಚಿರಂಜೀವಿ ಚಿತ್ರೆ, ಅಭಿಷೇಕ ಪಾಟೀಲ, ಈರಣ್ಣ ಅಂಗಡಿ ಸೇರಿದಂತೆ ರಾಜ್ಯದ ಅನೇಕ ಕಡೆಗಳಿಂದ ಚಿಕಿತ್ಸೆಗೆ ಬಂದ ಅಪಾರ ಜನತೆ, ಮುಖಂಡರು, ರೈತರು, ಮಹಿಳೆಯರು ಪಾಲ್ಗೊಂಡಿದ್ದರು.
WhatsApp Group Join Now
Telegram Group Join Now
Share This Article