ಮುನಿರಾಬಾದ್ ಶಾದಿ ಮಹಲ್ ಕಟ್ಟಡ  ಸ್ಥಳ ಪರಿಶೀಲನೆ, ಚರ್ಚೆ

Ravi Talawar
ಮುನಿರಾಬಾದ್ ಶಾದಿ ಮಹಲ್ ಕಟ್ಟಡ  ಸ್ಥಳ ಪರಿಶೀಲನೆ, ಚರ್ಚೆ
WhatsApp Group Join Now
Telegram Group Join Now
ಕೊಪ್ಪಳ ಜುಲೈ 27, ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಜಾಮಿಯಾ ಮಸೀದಿ ಕಮಿಟಿ ಹಾಗೂ ಶಾದಿ ಮಹಲ್ ಕಮಿಟಿ ಯ ಪದಾಧಿಕಾರಿಗಳೊಂದಿಗೆ ಶಾದಿ ಮಹಲ್ ಕಟ್ಟಡ ನಿರ್ಮಾಣ ಅಭಿವೃದ್ಧಿ ಮತ್ತು ಸ್ಥಳ ಪರಿಶೀಲನೆ ಇತ್ಯಾದಿ ಕಾರ್ಯ ಗಳ ಬಗ್ಗೆ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ರವರು ರವಿವಾರ ಬಂದು ಭೇಟಿ ಮಾಡಿ ಸುದೀರ್ಘವಾಗಿ ಚರ್ಚೆ ನಡೆಸಿದರು,
ಇದೆ ವೇಳೆ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮತ್ತು ಹಜ್ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರ ಬಳಿ ಮನವರಿಕೆ ಮಾಡಿ ನಮ್ಮ ಸಂಸದ ಕೆ ರಾಜಶೇಖರ ಹಿಟ್ನಾಳಮತ್ತು ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರ ಸೂಚನೆಯಂತೆ ಸದರಿ ಮುನಿರಾಬಾದಿನ ಶಾದಿ ಮಹಲ್ ಕಟ್ಟಡ ಕಾಮಗಾರಿ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿ ಸಾರ್ವಜನಿಕರ ಉಪಯೋಗಕ್ಕೆ ಆಗುವಂತೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲು ಪ್ರಮಾಣಿಕ ಪ್ರಯತ್ನ ಮಾಡಿ ಸಚಿವರ ಗಮನಕ್ಕೆ ತಂದು ಅವರಿಗೆ ಮನವರಿಕೆ ಮಾಡಿ ಶಾಸಕರ ಮೂಲಕ ಹೆಚ್ಚಿನ ಅನುದಾನ ಒದಗಿಸಿಕೊಡುವ ಭರವಸೆಯನ್ನು ಇದೆ ವೇಳೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಮುನಿರಾಬಾದಿನ ಜಾಮಿಯಾ ಮಸೀದಿ ಕಮಿಟಿ ಹಾಗೂ ಶಾದಿ ಮಹಲ್ ಕಮಿಟಿಯ ಪದಾಧಿಕಾರಿಗಳಿಗೆ ಭರವಸೆ ನೀಡಿದರು,
ಈ ಸಂದರ್ಭದಲ್ಲಿ ಶಾದಿ ಮಹಲ್ ಕಮಿಟಿ ಅಧ್ಯಕ್ಷರಾದ ಸಾಧಿಕ್ ಪಾಷಾ ಜಾಮಿಯ ಮಸೀದಿ ಕಮಿಟಿ ಅಧ್ಯಕ್ಷರಾದ ಶೇರ್ ಖಾನ್ ಸೇರಿದಂತೆ ಖಾಜಾಪಾಷ ಮಾಜಿದ ಅಲ್ಲದೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದರು
WhatsApp Group Join Now
Telegram Group Join Now
Share This Article