ಧಾರವಾಡ: ಗಣೇಶ ಚತುರ್ಥಿಯ ಹಬ್ಬದ ಅಂಗವಾಗಿ ಪೂರ್ವಭಾವಿ ಸಭೆಯನ್ನು ಇಂದು ಧಾರವಾಡದ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಭಾಭವನದಲ್ಲಿ ನಡೆಸಲಾಯಿತು.
ಬಾವಿ ಹೊಂಡಗಳ ಸ್ವಚ್ಛತೆ , ಬಾವಿಗಳ ಸುತ್ತಲು ಬ್ಯಾರಿಕೇಡ್ ಇಡುವ ವ್ಯವಸ್ಥೆ , ವಿದ್ಯುತ್ ದೀಪ , ಶಾಮಿಯಾನ , ತೆಗ್ಗು ಗುಂಡಿಗಳನ್ನು ಮುಚ್ಚುವುದು , ಅನ್ನಸಂತರ್ಪಣೆ ನಡೆಯುವ ಸ್ಥಳಗಳಲ್ಲಿ ಸ್ವಚ್ಛತೆ , ಸಾರ್ವಜನಿಕ ಗಣಪತಿ ಹಾಗೂ ಮನೆ ಗಣಪತಿ ವಿಸರ್ಜನೆಗೆ ವಿಶೇಷವಾದ ಮುತುವರ್ಜಿ ವಹಿಸುವುದು ಹಾಗೂ ಹಲವು ವಿಷಯಗಳನ್ನು ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಉಪಮಹಾಪೌರರು ಸಂತೋಷ.ಚವ್ಹಾಣ, ವಿರೋಧ ಪಕ್ಷದ ನಾಯಕರು ಇಮ್ರಾನ್.ಎಲಿಗಾರ , ಪಾಲಿಕೆ ಆಯುಕ್ತರು ಡಾ.ರುದ್ರೇಶ.ಘಾಳಿ , ಪಾಲಿಕೆ ಸದಸ್ಯರುಗಳು ,
ಹೆಚ್ಚುವರಿ ಆಯುಕ್ತರು ವಿಜಯಕುಮಾರ ಹಾಗೂ ಪಾಲಿಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.