ಕಂಪ್ಲಿ,ಜು.25.. ಪÀಟ್ಟಣದ ಬಹುತೇಕ ಕಡೆಗಳಲ್ಲಿ ಪೊಲೀಸ್ ಇಲಾಖೆ ಪುರಸಭೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದು, ಕಂಪ್ಲಿ ಪಟ್ಟಣದ ಬಹುತೇಕ ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿದ್ದು, ಅಪರಾಧ ನಿಯಂತ್ರಣ, ಅಪರಾಧಗಳ ಪತ್ತೆ ಸೇರಿದಂತೆ ಸಾರ್ವಜನಿಕರ ಸುರಕ್ಷತೆ ಕಾಪಾಡುವಲ್ಲಿ ಸ್ಥಳೀಯ ಪೊಲೀಸರಿಗೆ ಆನೆಬಲ ಬಂದAತಾಗಿದ್ದು, ಪಟ್ಟಣದ ವ್ಯಾಪ್ತಿಯಲ್ಲಿ ಅಳವಡಿಸಿರುವ ಹಾಗೂ ಇನ್ನು ಅಳವಡಿಸಬೇಕಾಗಿರುವ ಸಿಸಿ ಕ್ಯಾಮೆರಾಗಳ ನಿರ್ವಹಣೆ ಪೊಲೀಸ್ ಠಾಣೆಯಲ್ಲಿ ನಡೆಯುತ್ತಿದೆ.
ಪಟ್ಟಣದ ವಿವಿಧ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳಿಗೆ ಪುರಸಭೆಯ ೧೪ ಲಕ್ಷರೂ ಅನುದಾನ ಹಾಗೂ ಸಾರ್ವಜನಿಕರಿಂದ ಸಂಗ್ರಹವಾಗಿದ್ದ ೩ ಲಕ್ಷರೂ ಸೇರಿದಂತೆ ೧೭ ಲಕ್ಷರೂಗಳ ವೆಚ್ಚದಲ್ಲಿ ಪಟ್ಟಣದ ವಿವಿಧ ಪ್ರಮುಖ ಸ್ಥಳ,ವೃತ್ತಗಳಲ್ಲಿ ೮ಮೆಗಾಫಿಕ್ಸೆಲ್ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿದ್ದು, ಇನ್ನೊಂದಿಷ್ಟು ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಪಟ್ಠಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ನಡುವಲ ಮಸೀದಿ,ವಾಲ್ಮೀಕಿ ವೃತ್ತ, ಹೊಸ ಬಸ್ನಿಲ್ದಾಣ, ಬಳ್ಳಾರಿ ರಸ್ತೆ, ಕುರುಗೋಡು ರಸ್ತೆ, ಕಂಪ್ಲಿ ಕೋಟೆಯ ತುಂಗಭದ್ರಾ ನದಿಯ ಸೇತುವೆ ಹತ್ತಿರ, ಮಾರೆಮ್ಮ ದೇವಸ್ಥಾನ, ಸಣಾಪುರ ರಸ್ತೆ, ಹೌಸಿಂಗ್ ಬೋರ್ಡ್ ಕಾಲೋನಿ, ಗಾಂಧಿ ವೃತ್ತ, ಮೆಡ್ಪ್ಲಸ್ ಸೇರಿದಂತೆ ೧೩ ಸ್ಥಳಗಳಲ್ಲಿ ೨೧ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇನ್ನು ೧೩ ಕಡೆಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆಯಬೇಕಿದೆ. ಒಟ್ಟಾರೆ ಪಟ್ಟಣದಲ್ಲಿ ೩೮ ಕ್ಕೂ ಅಧಿಕ ಕ್ಯಾಮೆರಾಗಳು ಅಳವಡಿಕೆಯಾಗಿ ಪೊಲೀಸರಿಗೆ ಭದ್ರತೆಯಲ್ಲಿ ಪೊಲೀಸರಿಗೆ ನೆರವಾಗಲಿವೆ.
ಸಿಸಿ ಕ್ಯಾಮೆರಾಗಳು ಕಣ್ಗಾವಲು ಮತ್ತು ಸುರಕ್ಷತೆಗಾಗಿ ಬಳಸುವ ವಿಡೀಯೋ ಕ್ಯಾಮರಾಗಳಾಗಿದ್ದು, ಇವುಗಳನ್ನು ಮುಖ್ಯವಾಗಿ ಅಪರಾಧಗಳನ್ನು ತಡೆಗಟ್ಟಲು,ಪತತೆ ಹಚ್ಚಲು ಹಾಗೂ ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಬಳಸಲಾಗುತ್ತದೆ. ಸಿಸಿ ಕ್ಯಾಮೆರಾಗಳು ಪೊಲೀಸರ ಮೂರನೆ ಕಣ್ಣು ಎಂದೇ ಕರೆಯಲಾಗುತ್ತಿದ್ದು ಅಪರಾಧಗಳ ನಿಯಂತ್ರಣಕ್ಕೆ ಅನುಕೂಲವಾಗಿವೆ.
ಈ ಹಿಂದೆ ಸಿಸಿ ಕ್ಯಾಮೆರಾಗಳಿಲ್ಲದೆ, ಪಟ್ಟಣದ ವಿವಿಧೆಡೆಗಳಲ್ಲಿ ನಡೆಯುತ್ತಿದ್ದ ಮನೆಗಳ್ಳತನ, ದ್ವಿಚಕ್ರ ವಾಹನಗಳ್ಳತನ, ಕೊಲೆ,ಗುಂಪು ಘರ್ಷಣೆ,ಗಲಭೆಗಳಂತಹ ಅಪರಾಧಗಳನ್ನು ತಡೆದು ಅಪರಾಧಿಗಳನ್ನು ಸೆರೆ ಹಿಡಿಯಲು ಪೊಲೀಸರಿಗೆ ಬಹು ದೊಡ್ಡ ಸಮಸ್ಯೆಯಾಗಿತ್ತು.ಅಲ್ಲದೆ ಅಪರಾಧಿಗಳ ಸುಳಿವು ಪತ್ತೆ ಹಚ್ಚುವುದು ಪೊಲೀಸರಿಗೆ ಅತ್ಯಂತ ಕ್ಲಿಷ್ಟವಾಗಿತ್ತು.ಇದೀಗ ಸಿಸಿ ಕ್ಯಾಮೆರಾಗಳ ಅಳವಡಿಕೆಯಿಂದ ಪೊಲೀಸರಿಗೆ ಅಪರಾಧಗಳ ಪತ್ತೆ ಕಾರ್ಯ ಸುಲಭವಾಗಲಿದ್ದು, ಸಿಸಿ ಕ್ಯಾಮೆರಾಗಳು ಇರುವುದರಿಂದ ಅಪರಾಧಗಳ ಸಂಖ್ಯೆಯೂ ಇಳಿಮುಖವಾಗಲಿವೆ.
ಪಟ್ಟಣದ ೨೦ಕ್ಕೂ ಅಧಿಕ ಸ್ಥಳಗಳಲ್ಲಿ ೩೮ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇದರ ನಿರ್ವಹಣೆ ಪೊಲೀಸ್ ಠಾಣೆಯಲ್ಲಿ ಜರುಗಲಿದೆ. ೮.ಮೆಗಾಫಿಕ್ಸೆಲ್ ಕ್ಯಾಮೆರಾಗಳ ಅಳವಡಿಕೆಯಿಂದಾಗಿ ಸುಗಮ ಸಂಚಾರ ವ್ಯವಸ್ಥೆ ಮೇಲೆ ನಗಾವಹಿಸಲು ಈ ಕ್ಯಾಮೆರಾಗಳು ಸಹಕಾರಕ್ಕೆ ಬರಲಿವೆ. ಅದರಲ್ಲೂ ಬೈಲ್ ಕಳ್ಳತನ, ಮನೆಗಳ್ಳತನ, ಕೊಲೆ, ಗುಂಪು ಘರ್ಷಣೆ,ಗಲಭೆಗಳನ್ನು ತಡೆಗಟ್ಟು ಮೂಲಕ ಅಪರಾಧಿಗಳನ್ನು ಸುಲಭವಾಗಿ ಸೆರೆ ಹಿಡಿದು ಅಪರಾಧಗಳನ್ನು ತಡೆಗಟ್ಟಲು, ಪತ್ತೆ ಹಚ್ಚಲು ವಿಶೇಷವಾಗಿ ಸಾರ್ವಜನಿಕರ ಸುರಕ್ಷತೆ ಕಾಪಾಡಲು ಅನುಕೂಲವಾಗಲಿದೆ.