ಬೈಲಹೊಂಗಲ. ಸಹಕಾರಿ ರಂಗದ ರೈತರ ಪ್ರಾಥಮಿಕ ಸಂಘಗಳು ರೈತರು ಬೆಳವಣಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದು ಹೊಸ ಕಟ್ಟಡ ರಚನೆಯಿಂದ ರೈತರಿಗೆ ಹೆಚ್ಚಿನ ಮಟ್ಟದ ಅನುಕೂಲ ಆಗುತ್ತದೆ ಎಂದು ಮಾಜಿ ಶಾಸಕ, ಬಿಡಿಸಿಸಿ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ತಾಲೂಕಿನ ಪಟ್ಟಿಹಾಳ ಕೆ.ಎಸ್. ಗ್ರಾಮದಲ್ಲಿ ಇಂದು ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಈ ಶುಭ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.