ಕರ್ನಾಟಕದಲ್ಲಿ ಎಮ್‌ಪಿ ಚುನಾವಣೆ ವೇಳೆ ಅಕ್ರಮ; ರಾಹುಲ್‌ ಆರೋಪ, ಪ್ರತಿಭಟನೆಗೆ ಸಿದ್ದು ಸಾಥ್‌

Ravi Talawar
ಕರ್ನಾಟಕದಲ್ಲಿ ಎಮ್‌ಪಿ ಚುನಾವಣೆ ವೇಳೆ ಅಕ್ರಮ; ರಾಹುಲ್‌  ಆರೋಪ, ಪ್ರತಿಭಟನೆಗೆ ಸಿದ್ದು ಸಾಥ್‌
WhatsApp Group Join Now
Telegram Group Join Now

ಬೆಂಗಳೂರು, (ಜುಲೈ 24): ಕರ್ನಾಟಕದಲ್ಲಿಲೋಕಸಭೆ ಚುನಾವಣೆ ವೇಳೆ ಮತಗಳ್ಳತನವಾಗಿವೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ  ಹೊಸ ಬಾಂಬ್ ಸಿಡಿಸಿದ್ದಾರೆ. ಲೋಕಸಭೆ ಚುನಾವಣೆ ವೇಳೆ ನಡೆದ ಅಕ್ರಮವನ್ನ ಪತ್ತೆ ಹಚ್ಚಿದ್ದೇವೆ. 6 ತಿಂಗಳುಕಾಲ ಸಂಶೋಧನೆ ಮಾಡಿ, ಯಾರು ಹೇಗೆ ವೋಟ್ ಮಾಡುತ್ತಾರೆ. ಹೊಸ ಮತದಾರರನ್ನ ಹೇಗೆ ಸೇರಿಸ್ತಾರೆ ಎಲ್ಲವನ್ನೂ ಪತ್ತೆ ಹಚ್ಚಿದ್ದೇವೆ ಎಂದು ಚುನಾವಣಾ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಈ ಆರೋಪವನ್ನು ಸಿಎಂ ಸಿದ್ದರಾಮಯ್ಯ  ಅನುಮೋದಿಸಿದ್ದು, ಲೋಕಸಭಾ ಚುನಾವಣೆ ಫಲಿತಾಂಶ​​​ ಆಶ್ಚರ್ಯ ಉಂಟುಮಾಡಿದೆ. ಈ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಜೊತೆ ಸಮಾಲೋಚನೆ ನಡೆಸಿ ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ನಡೆದಿರುವ ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶ ನಮಗೆ ಆಶ್ಚರ್ಯವನ್ನು ಉಂಟುಮಾಡಿದ್ದು ಮಾತ್ರವಲ್ಲ, ಹಲವಾರು ಬಗೆಯ ಅನುಮಾನಗಳನ್ನು ಕೂಡಾ ಹುಟ್ಟುಹಾಕಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿರುವ ಅಕ್ರಮವೇ ಕಾಂಗ್ರೆಸ್ ಪಕ್ಷದ ಹಿನ್ನಡೆಗೆ ಕಾರಣ ಎನ್ನುವ ಸತ್ಯ ಈಗ ಬಯಲಾಗುತ್ತಿದೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗ ನಡೆಸಿರುವ ಅಕ್ರಮಗಳ ದಾಸ್ತಾನನ್ನು ಒಂದೊಂದಾಗಿ ಬಯಲಿಗೆಳೆಯುತ್ತಿದ್ದು, ಕರ್ನಾಟಕದಲ್ಲಿ ನಡೆದಿರುವ ಚುನಾವಣಾ ಅಕ್ರಮಗಳ ಬಗ್ಗೆಯೂ ವಿವರಗಳನ್ನು ನೀಡಿದ್ದಾರೆ.

 

 

WhatsApp Group Join Now
Telegram Group Join Now
Share This Article