ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿದಾಯಕ ವಾತಾವರಣ ಅತ್ಯವಶ್ಯಕ

Ravi Talawar
ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿದಾಯಕ ವಾತಾವರಣ ಅತ್ಯವಶ್ಯಕ
WhatsApp Group Join Now
Telegram Group Join Now

ಬೆಳಗಾವಿ : ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಶಿಕ್ಷಕರ ಮಾರ್ಗದರ್ಶನ ಅವಶ್ಯವಾಗಿದ್ದರೆ ಪಾಲಕ-ಪೋಷಕರುನೀಡುವ ಸ್ಪೂರ್ತಿದಾಯಕ ವಾತಾವರಣ ಅತ್ಯವಶ್ಯಕವಾಗಿದೆ ಎಂದು ನ್ಯಾಯವಾದಿ ಎಫ್. ಎಸ್. ಸಿದ್ದನಗೌಡರ ಹೇಳಿದರು.

ಬೈಲಹೊಂಗಲ ನಗರದ ಹೊರವಲಯದಲ್ಲಿರುವ ಕಾರ್ಮೇಲ್ ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ-ಶಿಕ್ಷಕರ ಸಭೆಯಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿ,ಪ್ರೌಢಶಾಲಾ ಶಿಕ್ಷಣದಲ್ಲಿ ಪೋಷಕರ-ಶಿಕ್ಷಕರ ಸಭೆ ಮಹತ್ವದ್ದಾಗಿದ್ದು ಪೋಷಕರು ಶಿಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಮಗುವಿನ ಶೈಕ್ಷಣಿಕ ಪ್ರಗತಿಯ ಬಗ್ಗೆ ಚರ್ಚಿಸಲು, ಮಗುವಿನ ಕಲಿಕಾ ಸಾಮರ್ಥ್ಯವನ್ನು ಬೆಂಬಲಿಸಲು ಕಲಿಕಾತಂತ್ರಗಳನ್ನು ಅಭಿವೃದ್ಧಿಪಡಿಸಲು ಅವಕಾಶವನ್ನು ಪಡೆಯುತ್ತಾರೆ. ಶೈಕ್ಷಣಿಕ ಫಲಿತಾಂಶಗಳ ಸುಧಾರಿಸಲು ಪಾಲಕರು ಮಕ್ಕಳಲ್ಲಿ ಸೃಜನಾತ್ಮಕ ಭಾವನೆ ಬೆಳಿಸುವದು.

ಮಕ್ಕಳು ಅಂಕಗಳಿಸುವ ಯಂತ್ರವಾಗದೆ, ಸಾಮಾಜದಲ್ಲಿ ಉತ್ತಮ ನಡತೆ ಸಂಸ್ಕಾರ ಬೆಳಿಸಿಕೊಂಡು ಕ್ರೀಡೆ, ಧಾರ್ಮಿಕ ಆಚಾರ ವಿಚಾರಗಳು ಇತರರ ಜೋತೆ ಹೊಂದಾಣಿಕೆ ಸರಳತೆಯೊಂದಿಗೆ ರಚನಾತ್ಮಕ ಕಾರ್ಯಗಳನ್ನು ಮೈಗೂಡಿಸಿಕೊಂಡಾಗ ಆತನ ಸವಾಂಗೀಣ ಬೆಳವಣಿಗೆಗೆ ಪಾಲಕರು ಅನುವು ಮಾಡಿಕೊಟ್ಟಂತಾಗುತ್ತದೆ.

ಮಕ್ಕಳಲ್ಲಿ ಇತರರ ವಿದ್ಯಾರ್ಥಿಗಳ ಜೋತೆ ಬೆರೆಯುವದನ್ನು ಕಲಿಸದಿದ್ದರೆ ಏಕಾಂಗಿತನ ಆತನ ಸಾಧನೆಗೆ ಅಡ್ಡಿಯಾದರೆ ದುರ್ಗುಣರ ಸಂಘ ಆತನ ಅವನತಿಗೆ ದಾರಿಯಾಗುತ್ತದೆ. ಪಾಲಕರು ಮಕ್ಕಳಲ್ಲಿ ಮೌಲ್ಯವನ್ನು ಬೆಳೆಸಬೇಕೆಂದರೆ ಪಾಲಕರು ಮೌಲ್ಯವನ್ನು ಬೆಳಿಸಿಕೊಂಡಿರಬೇಕು. ಧಾರಾವಾಹಿಗಳ ಕ್ರೂರತೆ ಮೊಬೈಲ್ ಗಳ ದುಷ್ಪರಿಣಾಮದ ಅರಿವು ಮಕ್ಕಳಲ್ಲಿ ಬಿಬಿಂಸುವಾಗ ಅವುಗಳ ಬಳಕೆಯನ್ನು ಪಾಲಕರು ಬಿಡಬೇಕು. ಮಕ್ಕಳಿಗೆ ಹಣ ನೀಡಿದರೆ ಅವರ ಅವಶ್ಯಕತೆಗಳನ್ನು ಪೊರೈಸಿದರೆ ಯಶಸ್ವಿಯಾಗಲಾರರು. ಅವರ ಹಸಿವಿಗೆ ತಕ್ಕಂತ ಪೌಷ್ಟಿಕ ಆಹಾರ ನೀಡುವದರೊಂದಿಗೆ ಅವರ ಚಲನವಲನಗಳ ಮೇಲೆ ಪಾಲಕರ ಗಮನವಿರಬೇಕು ಅವರಿಗಾಗಿ ದಿನದ ೨೪ ಘಂಟೆ ಶ್ರಮವಹಿಸಿಸಿ ಹಣ ಗಳಿಸದೆ ಅವರಿಗಾಗಿ ದಿನಕ್ಕೆ ೨ರಿಂದ ೪ ಘಂಟೆ ಸಮಯ ನೀಡಿ ಜಗತ್ತಿನ ಸಾಧಕರ ಇತಿಹಾಸದೊಂದಿಗೆ ಸೋತು ಗೆದ್ದವರ ಪ್ರೇರಣೆ ತಿಳಿಸಿ, ದೇಶದ ಇತಿಹಾಸ ನೆನಪಿಸಿ ಮಕ್ಕಳು ಉತ್ತಮ ಸತ್ ಪ್ರಜೆಗಳಾಗುತ್ತಾರರೆ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ನಗರದಲ್ಲಿ ಕಾರ್ಮೆಲ್ ಶಾಲೆ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳೊಂದಿಗೆ ತಂದೆ ತಾಯಿಗಳ ವಾತ್ಸಲ್ಯ ವಂಚಿತ ವಿಕಲಚೇತನ ಮತ್ತು ಬದ್ದಿಮಾಂದ್ಯ ಮಕ್ಕಳಿಗೆ ವಾತ್ಸಲ್ಯ ಕೇಂದ್ರವಾಗಿ ಹೊರಹೊಮ್ಮಿದ್ದು ಶ್ಲಾಘನೀಯ. ಶಾಲೆಯ ಅಸಾಧಾರಣ ಸಹಪಠ್ಯ ಚಟುವಟಿಕೆಗಳು ಶಿಸ್ತು, ಕ್ರೀಡಾಶೀಲತೆ, ಮೌಲ್ಯಾಧಾರಿತ ಶಿಕ್ಷಣ ಮತ್ತು ಆತ್ಮವಿಶ್ವಾಸದ ಕಲಿಕೆಯೊಂದಿಗೆ ವಿಶೇಷ ಮಕ್ಕಳನ್ನು ಸುಧಾರಿಸುವ ಶಾಲೆಯ ಶಿಕ್ಷಕರ ವರ್ಗದ ಕಾರ್ಯ ಮೆಚ್ಚುವಂತದ್ದು ಸುಸಂಗತ ವ್ಯಕ್ತಿತ್ವವನ್ನು ಅಭಿವೃದ್ಧಿಪಡಿಸುತ್ತಿರುವ ಮುಖ್ಯೊಪಾಧ್ಯಯನಿ ಭಗಿನಿ ರೀತಾ ಪೀಂಟೊರವರ ಕಾರ್ಯ ಸದಾ ಸ್ಮರಣೀಯ ಎಂದರು.

ಮುಖ್ಯಶಿಕ್ಷಕಿ ಜ್ಯೋತಿ ಸ್ವಾಗತಿಸಿದರು. ಶಿಕ್ಷಕಿ ಸುಲೋಚನಾ ಮೆಕ್ಕೆದ ಪ್ರಸ್ತಾವಿಕವಾಗಿ ಮಾತನಾಡಿದರು ಶಿಕ್ಷಕ ಅರವಿಂದ ತೋರಣಗಟ್ಟಿ ವಂದಿಸಿದರು.ಶಿಕ್ಷಕರಾದ ಕುತ್ಸಿಯಾ ರೀಝಾ, ನಾಗರಾಜ ಕಕ್ಕಯ್ಯನವರ ಪಾಲಕರ ಸಮಿತಿ ರಚಿಸಿದರು. ಕಾರ್ಯಕ್ರಮದಲ್ಲಿ ನೂರಾರು ಪಾಲಕರು ಉಪಸ್ಥಿರಿದ್ದರು.

WhatsApp Group Join Now
Telegram Group Join Now
Share This Article