ಬಾಗಲಕೋಟೆ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಜಿಲ್ಲಾ ಶಾಖೆ, ಬಾಗಲಕೋಟೆ ೨೦೨೪ ರಿಂದ ೨೦೨೯ ಅವಧಿಗೆ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಅವರನ್ನು ನಾಮ ನಿರ್ದೇಶಿತ ನಿರ್ದೇಶಕರು ಎಂದು ಪ್ರಮಾಣ ಪತ್ರ ನೀಡಿ, ನೇಮಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಳ್ಳಾರಿ ಅವರು ಪ್ರಕಟನೆಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬಾಗಲಕೋಟೆ ಜಿಲ್ಲಾ ಶಾಖೆಗೆ ನೂತನವಾಗಿ ನಾಮ ನಿರ್ದೇಶಿತ ನಿರ್ದೇಶಕರಾಗಿ ನೇಮಕವಾದ ಡಾ.ಅರುಣುಕುಮಾರ ಗಾಳಿ ಅವರಿಗೆ ಕೆ.ಜಿ.ಸಿ.ಟಿ.ಎ ವಲಯ ಅಧ್ಯಕ್ಷರಾದ ಡಾ.ನೀಲಪ್ಪ ಹೊಸಮನಿ, ಹಡಲಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶರಣಗೌಡ ಪಾಟೀಲ ಅವರು ಅಭಿನಂದಿಸಿದ್ದಾರೆ.
ಪೋಟೊ :೧ ನವನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಅರುಣಕುಮಾರ ಗಾಳಿ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬಾಗಲಕೋಟೆ ೨೦೨೪-೨೦೨೯ ಅವಧಿಗೆ ನಾಮ ನಿರ್ದೇಶಿತ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ.