ಸಂಕೇಶ್ವರ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ನಾಯಕತ್ವದ ಗುಣಗಳನ್ನು ಮೂಡಿಸಲು ಎಸ.ಡಿ. ವಿ. ಎಸ್ ಸಂಘದ ಅಕ್ಕಮಹಾದೇವಿ ಕನ್ಯಾ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
10ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಯ ಪ್ರಧಾನಿ, ಉಪ ಪ್ರಧಾನಿ, ಹಣಕಾಸು, ಆರೋಗ್ಯ, ಸಂಸ್ಕೃತಿಕ ಹೀಗೆ ವಿವಿಧ ಇಲಾಖೆಯ ಖಾತೆಗಳಿಗೆ ಚುನಾವಣಾ ಅಭ್ಯರ್ಥಿಗಳಾಗಿ ಸ್ಪರ್ಧಿಸಿದರು.
ಇವರಿಗೆ 8 ಮತ್ತು 9 ಹಾಗೂ 10ನೇ ತರಗತಿಯ ವಿದ್ಯಾರ್ಥಿನಿಯರು ಮತದಾರರಾಗಿ ಮತ ಚಲಾಯಿಸುವ ಮೂಲಕ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಿದರು. ಈ ಚುನಾವಣೆ ವೀಕ್ಷಕರಾಗಿ ಶಾಲೆಯ ಸ್ಥಾನಿಕ ನಿಯಂತ್ರಣ ಸಮಿತಿಯ ಅಧ್ಯಕ್ಷರಾದ ಕೆ.ಸಿ. ಶಿರಕೋಳಿ ಹಾಜರಿದ್ದರು.
ಆಯ್ಕೆಯಾದ ಅಭ್ಯರ್ಥಿಗಳ ವಿವರ…
ಶಾಲಾ ಪ್ರಧಾನಿಯಾಗಿ ಅಕ್ಷರಾ ಕರಣಿಂಗ,
ಉಪ ಪ್ರಧಾನಿ ಐಶ್ವರ್ಯ ಮಾನೆ, ಹಣಕಾಸು ಮಂತ್ರಿ ಸಂಪಾದ ಶಿಂಧೆ, ಆರೋಗ್ಯ ಮಂತ್ರಿ ಚೈತ್ರಾಲಿ ಬೆಂಡವಾಡಿ, ಸಂಸ್ಕೃತಿಕ ಮಂತ್ರಿ ಶಾರದ ಪೋತದಾರ, ಕ್ರೀಡಾ ಮಂತ್ರಿ ಸೌಪರ್ಣಿಕಾ ವಾಗಮೊಡೆ ಪ್ರವಾಸ ಮಂತ್ರಿ ಸೀಮಾ ಕುರಾಡಿ, ಪ್ರಾರ್ಥನಾ ಮಂತ್ರಿ ಸರಿಪಾ ಮಿರಜಕರ್.
ಈ ಚುನಾವಣೆಯ ಕಾರ್ಯವನ್ನು ಮುಖ್ಯಾದಪಕರಾದ ಆರ್ ಬಿ ಪಾಟೀಲ್ ಅವರೊಂದಿಗೆ ಶಾಲೆಯ ಸಭಾಪತಿಗಳಾದ ಎಸ್ ಎಸ್ ಕಡಗಾವಿ ಹಿರಿಯ ಶಿಕ್ಷಕರಾದ ಎಸ್ ಆರ್ ಚುನಮುರಿ, ಎ.ಬಿ ಜರಳಿ, ಡಿ.ಪಿ ಹಿರೇಮಠ, ಸೋಮನಾಥ ಶಿರಕೋಳಿ, ಎಸ್. ಡಿ ಗಾಯಕ್ವಾಡ್, ಜಿ ಎಸ್ ಕಾಂಬಳೆ ಇವರೊಂದಿಗೆ ಶಿಕ್ಷಕಿಯರಾದ ಎಸ್ ಸಿ ಎಶಾಗೋಳ, ಎಂ.ಆರ್. ಪಾಟೀಲ, ವಿ. ಎಂ ಹುದ್ದಾರ, ಎಸ್ ಎ ಮೊರೆ, ಎಲ್.ಎ. ಮಾನೆ, ಎಸ್ ಸಿ ಚೋಳಚುಗುಡ, ಎಸ್ ಎಸ್ ಕಮತೆ, ಹೆದ್ದೂರ್ ಶೆಟ್ಟಿ, ಎಸ್ ಬಿ ದೇವರಕ್ಕಿ ಕಾರ್ಯಿರ್ವಹಿಸಿ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಿಕೊಟ್ಟರು.