ನರೇಗಲ್ಲ : ಸ್ಥಳೀಯ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆಯಲ್ಲಿ ದಶಕಗಳ ಬೇಡಿಕೆಯಾಗಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೂತನ ಶಾಖೆ ಆರಂಭಿಸಲು ಪ.ಪಂ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿರುವುದು ವಾಣಿಜ್ಯ ವಲಯ ಮತ್ತು ಸಾಮಾನ್ಯ ಜನರಲ್ಲಿ ಹರ್ಷ ವ್ಯಕ್ತವಾಗಿದೆ.
ಹೌದು, ಪಟ್ಟಣ ಪಂಚಾಯಿತಿಯಲ್ಲಿ ಜರುಗಿದ ಸಭೆಯಲ್ಲಿ ೧೫ನೇ ಹಣಕಾಸು ಹಾಗೂ ಎಸ್.ಎಫ್.ಸಿ ಯೋಜನೆಯಡಿಯಲ್ಲಿನ ಆಡಳಿತಾತ್ಮಕ ಮಂಜೂರಾತಿ, ಕಾರ್ಯಾಲಯದ ಮೊದಲನೇಯ ಮಹಡಿಯ ನೂತನ ಕಟ್ಟಡವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೂತನ ಶಾಖೆಗೆ ಕಟ್ಟಡ ಬಾಡಿಗೆ ನೀಡುವ ಕುರಿತು, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಖಾಸಗಿ ಮಾಲಿಕತ್ವದ ಬಡಾವಣೆಗಳಿಗೆ ಅಮೃತ ೨.೦ ಯೋಜನೆಯಡಿಯಲ್ಲಿ ೨೪*೭ ನೀರು ಪೂರೈಸುವ ಹಾಗೂ ಇನ್ನಿತರೆ ವಿಷಯಗಳ ಚರ್ಚೆ ಕುರಿತು ಹಮ್ಮಿಕೊಂಡಿದ್ದ ವಿಶೇಷ ಸಾಮಾನ್ಯ ಸಭೆ ಕೇಲ ಸದಸ್ಯರ ವಿರುದ್ಧದ ನಡುವೆ ನಡೆಯಿತು.
ಉಪಾಧ್ಯಕ್ಷ ಕುಮಾರಸ್ವಾಮಿ ಕೋರಾಧ್ಯಾನಮಠ ಹಾಗೂ ವಾರ್ಡ್ ನಂ. ೧ ಸದಸ್ಯ ರಾಚಯ್ಯ ಮಾಲಗಿತ್ತಿಮಠ ಮಾತನಾಡಿ, ಅಮೃತ ೨.೦ ಯೋಜನೆಯಡಿಯಲ್ಲಿ ಪಟ್ಟಣದಲ್ಲಿ ಈಗಾಗಲೇ ಡಿಪಿಆರ್ ಪ್ರಕಾರ ೫೭ ಕಿ.ಮೀದಷ್ಟು ಪೈಪ್ ಲೈನ್ ಮಾಡಲು ಅನುಮತಿ ದೊರೆತ್ತಿದ್ದು, ಇನ್ನೂಳಿದ ೨೦೦೧ ರಿಂದ ೨೦೨೩-೨೪ ಸಾಲಿನಲ್ಲಿ ಖಾಸಗಿ ಮಾಲೀಕತ್ವದ ಲೇಔಟ್ಗಳಿಗೆ ಈಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ಸಿಸಿ ಕೂಡ ನೀಡಲಾಗಿರುತ್ತದೆ. ಪಟ್ಟಣದಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿರುವ ಲೇಔಟ್ ಮಾಲೀಕರು ಸದ್ಯ ಲಭ್ಯವಿಲ್ಲ. ಅದರಲ್ಲಿ ಕೇಲವೊಂದು ಜನ ಊರು ಬಿಟ್ಟಿದ್ದಾರೆ. ಇನ್ನೂ ಕೇಲವೊಂದು ಮಾಲೀಕರು ಪೋತಿ ಹೊಂದಿದ್ದಾರೆ. ಪಟ್ಟಣ ಪಂಚಾಯಿತಿ ವತಿಯಿಂದ ಈಗಾಗಲೇ ಸಿಸಿ ನೀಡಿರುವ ಲೇಔಟ್ನಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅಳವಡಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಕರ್ನಾಟಕ ಒಳಚರಂಡಿ, ನೀರು ಸರಬರಾಜು ಮಂಡಳಿ ಇದಕ್ಕೆ ಒಪ್ಪಿಗೆ ನೀಡಬೇಕು ಎಂದು ಪಟ್ಟುಹಿಡಿದರು.
ಕರ್ನಾಟಕ ಒಳಚರಂಡಿ, ನೀರು ಸರಬರಾಜು ಮಂಡಳಿ ಕಾರ್ಯಪಾಲಕ ಅಭಿಯಂತರ ಜಗದೀಶ ಹೊಸಮನಿ ಮಾತನಾಡಿ, ಅಮೃತ ೨.೦ ೨೪*೭ ಯೋಜನೆಡಿಯಲ್ಲಿ ಈಗಾಗಲೇ ಶೇಕಾಡ ೯೦ ರಷ್ಟು ಪೈಪ್ ಲೈನ್ ಕಾಮಗಾರಿ ಮುಕ್ತಾಯವಾಗಿದ್ದು, ಇನ್ನೂ ಕೇವಲ ೧೦ ಕಿ.ಮೀ ದಷ್ಟು ಮಾತ್ರ ಬಾಕಿದೆ. ಅಲ್ಲದೆ, ಸದಸ್ಯರು ಹೇಳುತ್ತಿರುವಂತೆ ನಾವು ಡಿಪಿಆರ್ನಲ್ಲಿ ಇಲ್ಲದ ಲೇಔಟ್ಗಳಿಗೆ ಪೈಪ್ ಲೈನ್ ಕಾಮಗಾರಿ ಕೈಗೊಳ್ಳುವುದು ಅಸಾಧ್ಯವಾಗದೆ. ಏಕಂದರೆ, ಸರ್ಕಾರ ಮತ್ತು ಇಲಾಖೆ ಅನುಮೋದನೆ ನೀಡದಷ್ಟು ಮಾತ್ರ ಕಾರ್ಯ ಮಾಡಲು ನಮ್ಮಗೆ ಅವಕಾಶ ಇದೆ. ಹೆಚ್ಚುವರಿ ಆಗಿ ಕಾಮಗಾರಿ ನಿರ್ವಹಣೆ ಮಾಡಬೇಕಾದ್ರೆ ಲೇಔಟ್ಗಳ ಮಾಲೀಕರಿಂದ ೧೩% ಅಭಿವೃದ್ಧಿ ಹಣವನ್ನು ಸಂದಾಯ ಮಾಡಿಸಿ ನಾವು ಅದಕ್ಕೆ ಅನುಮತಿ ಪಡೆದುಕೊಂಡು ಕಾಮಗಾರಿಯನ್ನು ನೆರವೇರಿಸುತ್ತಿವೆ ಎಂದರು.
ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿ, ನರೇಗಲ್ಲ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಎಸ್ಬಿಐ ಬ್ಯಾಂಕ್ ಇಲ್ಲದೆ ಗ್ರಾಹಕರಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಆದ್ದರಿಂದ ನಾವು ನಮ್ಮ ಪ.ಪಂ ಮೊದಲ ಮಹಡಿ ನೂತನ ಕಟ್ಟಡವನ್ನು ಎಸ್ಬಿಐ ಬ್ಯಾಂಕ್ ಶಾಖೆಗೆ ಕೊಡಲು ಅಧ್ಯಕ್ಷರ ಹಾಗೂ ಸರ್ವ ಸದಸ್ಯರ ಒಪ್ಪಿಗೆಯನ್ನು ಪಡೆಯಲಾಗಿದೆ. ಇನ್ನೂ ವಾರ್ಡ್ ನಂ.೯ ರ ಸದಸ್ಯರು ಕೇಳಿರುವ ೧೫ನೇ ಹಣಕಾಸು, ಎಸ್ಎಫ್ಸಿ ಯೋಜನೆಯಡಿಯಲ್ಲಿ ಮಂಜೂರಾತಿ ಪಡೆದುಕೊಂಡ ಕಾಮಗಾರಿಗಳ ಮಾಹಿತಿಯನ್ನು ಕೂಡಲೇ ಪೂರೈಸುತ್ತೇವೆ. ಈಗಾಗಲೇ ಹೆಸ್ಕಾಂಗೆ ೧೧ ಲಕ್ಷಕ್ಕೂ ಅಧಿಕ ಮೊತ್ತವನ್ನು ಭರಣಾ ಮಾಡಲಾಗಿದೆ. ಈಗಾಗಲೇ ಪಟ್ಟಣದಲ್ಲಿ ಅವಶ್ಯವಿರು ಕಡೆಗಳಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಭಾಕ್ಸ್ :
ಪ.ಪಂ ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಮಾತನಾಡಿ, ೧೫ನೇ ಹಣಕಾಸು ಹಾಗೂ ಎಸ್ಎಫ್ಸಿ ಯೋಜನೆಯಡಿಯಲ್ಲಿ ಆಡಳಿತಾತ್ಮ ಮಂಜೂರಾತಿ ಪಡೆಯಲು ಅಧ್ಯಕ್ಷರು ವಿಶೇಷ ಸಾಮಾನ್ಯ ಸಭೆಯನ್ನು ಆಯೋಜನೆ ಮಾಡಿದ್ದಾರೆ. ನಿಜಾ ಆದರೆ, ಯಾವ ಯಾವ ಕಾಮಗಾರಿಗಳಿಗೆ ಮಂಜೂರಾತಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವಂತಹ ಸ್ಪಷ್ಟ ಮಾಹಿತಿ ಸದಸ್ಯರಿಗಿಲ್ಲ. ಅಂದರೆ ಇದು ಯಾವ ವಿಶೇಷ ಸಾಮಾನ್ಯ ಸಭೆ. ಮೊದಲು ಸದಸ್ಯರಿಗೆ ಕಾಮಗಾರಿಗಳ ಮಾಹಿತಿಯನ್ನು ಒದಗಿಸಿ ಎಂದು ಪಟ್ಟುಹಿಡಿದರು. ಇದಕ್ಕೆ ವಾರ್ಡ್ ನಂ.೩ರ ಸದಸ್ಯ ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಧ್ವನಿ ಗೂಡಿಸಿದರು. ನಮ್ಮ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಹಾಕಿಕೊಳ್ಳುವಂತೆ ಮನವಿ ಮಾಡಿಕೊಂಡಿರುತ್ತೇವೆ. ಒಂದು ವೇಳೆ ಅಧ್ಯಕ್ಷರು ತಮ್ಮಗೆ ಬೇಕಾದ ಕಾಮಗಾರಿಗಳನ್ನು ಮಾತ್ರ ಹಾಕಿಕೊಂಡಿದ್ದರೆ ನಾವು ಯಾಕೇ ಒಪ್ಪಿಗೆ ಸೂಚಿಸಬೇಕು ಎಂದರು ಆಕ್ರೋಶ ವ್ಯಕ್ತಪಡಿಸಿದರು.
ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ ಅಧ್ಯಕ್ಷ ವಹಿಸಿದ್ದರು. ಹಿರಿಯ ಸದಸ್ಯರಾದ ದಾವುದಲಿ ಕುದರಿ, ಶ್ರೀಶೈಲಪ್ಪ ಬಂಡಿಹಾಳ ಮಾತನಾಡಿದರು. ಸ್ಥಾಯಿ ಕಮೀಟಿ ಚೇರಮನ್ ಮುತ್ತಪ್ಪ ನೂಲ್ಕಿ, ಸದಸ್ಯರಾದ ಈರಪ್ಪ ಜೋಗಿ, ನಾಮನಿದೇರ್ಶಕ ಸದಸ್ಯರಾದ ಶೇಖಪ್ಪ ಕೆಂಗಾರ, ಸಕ್ರಪ್ಪ ಹಡಪದ, ಹೆಸ್ಕಾಂ ಶಾಖಾಧಿಕಾರಿ ವಿ.ವೈ ಸರ್ವಿ, ಪ.ಪಂ ಕಿರಿಯ ಅಭಿಯಂತರ ವೀರಂದ್ರಸಿಂಗ್ ಕಾಟೆವಾಲಾ, ಪ.ಪಂ ಸಿಬ್ಬಂದಿ ರಮೇಶ ಹಲಗಿಯವರ, ಎಂ.ಎಚ್. ಸೀತಿಮನಿ, ಶಂಕ್ರಪ್ಪ ದೊಡ್ಡಣ್ಣವರ, ಆರೀಫ್ ಮಿರ್ಜಾ ಸೇರಿದಂತೆ ಇತರರಿದ್ದರು.