“FPA ಇಂಡಿಯಾದ ಆರೋಗ್ಯ ಸೇವೆಯು  ಶ್ಲಾಘನೀಯವಾದದು: ಡಾ.ಯೋಗಾನಂದರೆಡ್ಡಿ

Ravi Talawar
“FPA ಇಂಡಿಯಾದ ಆರೋಗ್ಯ ಸೇವೆಯು  ಶ್ಲಾಘನೀಯವಾದದು: ಡಾ.ಯೋಗಾನಂದರೆಡ್ಡಿ
WhatsApp Group Join Now
Telegram Group Join Now
ಬಳ್ಳಾರಿ ಜುಲೈ 24: ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ ಬಳ್ಳಾರಿ ಶಾಖೆ ತನ್ನ 76 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಉಚಿತ ಗರ್ಭಕಂಠದ ತಪಾಸಣೆ ಕಾರ್ಯಕ್ರಮವನ್ನುFPA ಇಂಡಿಯಾದ ಸಭಾಂಗಣದಲ್ಲಿ  ಹಮ್ಮಿಕೊಂಡಿತ್ತು.
ಕಾರ್ಯಕ್ರಮದ  ಉದ್ಘಾಟಕರಾಗಿ ಆಗಮಿಸಿದಂತಹ ಡಾ. ಯೋಗಾನಂದ ರೆಡ್ಡಿ Y.C. ಮಕ್ಕಳ ತಜ್ಞರು ಅಧ್ಯಕ್ಷರು ಕರ್ನಾಟಕ ವೈದಕೀಯ ಕೌನ್ಸಿಲ್,ಉದ್ಘಾಟನೆ ಮಾಡಿ ಮಾತನಾಡಿದ ಅವರು FPA ಇಂಡಿಯಾದ ಆರೋಗ್ಯ ಸೇವೆಯು ಶ್ಲಾಘನೀಯವಾದದು, ಇದು ಇಷ್ಟು ವರ್ಷಗಳ ಕಾಲ ಎಂತಹ ಮಹತ್ವದ ಆರೋಗ್ಯ ಸೇವೆ ನೀಡುತ್ತ ಬಂದಿದೆ ಎಂದರೆ ಅಖಂಡ ಬಳ್ಳಾರಿ ಜಿಲ್ಲೆಯ ಜನತೆ  20% ರಷ್ಟು ಆರೋಗ್ಯ ಸೇವೆಯನ್ನು FPA ಇಂಡಿಯಾ ನೀಡುತ್ತಿರುವುದು ಅಕ್ಷರ ಸಹ ಸತ್ಯ ಎಂದರು ಇದರ ಜೊತೆಯಲ್ಲಿ ಸಂಸ್ಥೆಯ ಹೇಳ್ಗೆಗೆ ಶ್ರಮ ಪಟ್ಟಂತಹ ಡಾ. BK ಶ್ರೀನಿವಾಸ ಮೂರ್ತಿ ಅವರ ಅಪಾರ ಕೊಡುಗೆಯನ್ನು ಕೊಂಡಾಡಿದರು.
ನಂತರ ಮಾತನಾಡಿದ ಇನ್ನೋರ್ವ  ಕಾರ್ಯಕ್ರಮದ ಅತಿಥಿಗಳು ಡಾ. ಜ್ಯೋತಿ ಅರವಿಂದ ಪಾಟೀಲ್ ಸ್ತ್ರೀ ರೋಗ ತಜ್ಞರು,ಅದ್ಯಕ್ಷರು OBG & GYN ಸೊಸೈಟಿ  ಬಳ್ಳಾರಿ ಇವರು ಗರ್ಭಕೋಶದ ಕ್ಯಾನ್ಸರ್ ತಪಾಸಣೆ ಮತ್ತು HPV ವ್ಯಾಕ್ಸಿನೇಷನ್ ಮಹತ್ವವನ್ನು ತಿಳಿಸಿಕೊಟ್ಟರು.
ಮತ್ತೋರ್ವ ಅತಿಥಿಗಳು ಡಾ. ಸಂಗೀತ ಕಟ್ಟಿಮನಿ ಕಾರ್ಯದರ್ಶಿಗಳು IMA ಬಳ್ಳಾರಿ ಹೆಣ್ಣು ಮಕ್ಕಳು ಜವಾಬ್ದಾರಿಯುತ ಜೀವನವನ್ನು ಕಟ್ಟಿಕೊಳ್ಳುವುದರಲ್ಲಿ  ಸಭಲರಾಗಬೇಕು ಹೇಳಿ ಎದ್ದೇಳಿ ಎಚ್ಚೆತ್ತುಕೊಳ್ಳಿ ನಿಮ್ಮ ಆರೋಗ್ಯ ನಿಮ್ಮ ಹಕ್ಕು ಎಂದು ಹೇಳಿದರು.
ತದನಂತರ ಮಾತನಾಡಿದ FPA ಇಂಡಿಯಾದ ಬಳ್ಳಾರಿ ಶಾಖೆಯ  ಉಪಾಧ್ಯಕ್ಷರು ಡಾ. ಚಂದನ  ಇವರು ಪೋಸ್ಟ್ ನಟಾಲ್ ಕೇರ್ ಬಾಣಂತಿಯ ಅವಧಿಯಲ್ಲಿ ಯಾವ ರೀತಿಯ ಆರೋಗ್ಯ ಕ್ರಮಗಳನ್ನು ವಹಿಸಬೇಕು ಏನೆಲ್ಲಾ ಗರ್ಭ ನಿರೋಧಕ ವಿಧಾನಗಳನ್ನು ಪಾಲಿಸಬೇಕು ಎನ್ನುವುದನ್ನು ಸವಿವರವಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ಭಾಷಣವನ್ನು ಮಾಡಿದ   TG ವಿಠ್ಠಲ್  FPA ಇಂಡಿಯಾ ಬಳ್ಳಾರಿ ಶಾಖೆಯ ಅದ್ಯಕ್ಷರು, ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳ ಬಗ್ಗೆ ತಿಳಿದುಕೊಂಡು ಜೀವನ ನಡೆಸಿ ಹೆಣ್ಣಾಗಲಿ ಗಂಡಾಗಲೀ  ಬೇಧ ಭಾವ ಮಾಡದೆ ಸಮಾನ ಹಕ್ಕು ನೀಡಿ ಗೌವರವಿಸಿ ಹಾಗೂ ಬ್ರೂಣ ಲಿಂಗ ಹತ್ಯೆ ಮಹಾಪಾಪ ಯಾರೂ ಅದನ್ನು ಮಾಡಬೇಡಿ ಒಳ್ಳೆಯ ಹಕ್ಕುಗಳನ್ನು ಆಯ್ದುಕೊಂಡು ಸಮೃದ್ಧಿ ಜೀವನವನ್ನು ಕಟ್ಟಿಕೊಳ್ಳಿ ಎಂದು ಹೇಳಿದರು.
ಕಾರ್ಕ್ರಮದಲ್ಲಿ FPA ಇಂಡಿಯಾ ಪ್ರಧಾನ ಕಚೇರಿಯ ಉಪಾಧ್ಯಕ್ಷರಾದಂತಹ ಶ್ರೀ ಯುತ  S ವಿಜಯಸಿಂಹ ಇವರು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
FPA ಇಂಡಿಯಾ ಬಳ್ಳಾರಿ ಶಾಖಾ ವ್ಯವಸ್ಥಾಪಕರು  S ವಿಜಯಲಕ್ಷ್ಮೀ ಸ್ವಾಗತ ಕೋರಿದರು ಕಾರ್ಯಕ್ರಮ ಅಧಿಕಾರಿ ನಿರೂಪಣೆ ಮಾಡಿದರು ಕಾರ್ಯಕ್ರಮದಲ್ಲಿ ಎಲ್ಲಾ FPA ಇಂಡಿಯಾ ಎಲ್ಲಾ ಸದಸ್ಯರು ಮತ್ತು ಸಿಬ್ಬಂದಿವರ್ಗ ಹಾಗೂ 100ಕ್ಕೂ ಹೆಚ್ಚಿನ ಫಲಾನುಭವಿಗಳು ನೆರೆದಿದ್ದರು.
ಕಾರ್ಯಕ್ರಮದ ನಂತರ ಪಾಲಭಾವಿಗಳಿಗೆ ಉಚಿತ ಗರ್ಭಕಂಠದ ತಪಾಸಣೆ ಮಾಡಲಾಯಿತು.
WhatsApp Group Join Now
Telegram Group Join Now
Share This Article