ಯಶ್‌ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ  ಕೊತ್ತಲವಾಡಿ ಟ್ರೇಲರ್‌ ರಿಲೀಸ್‌

Ravi Talawar
ಯಶ್‌ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ  ಕೊತ್ತಲವಾಡಿ ಟ್ರೇಲರ್‌ ರಿಲೀಸ್‌
WhatsApp Group Join Now
Telegram Group Join Now
ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ.   ‘ಕೊತ್ತಲವಾಡಿ’ ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ರಾಜಕೀಯ ದಂಗಲ್‌, ಪೊಲೀಸ್‌ ವ್ಯವಸ್ಥೆ,  ಅವಕಾಶವಾದಿತನ, ನಾಯಕನ ಹೋರಾಟ, ಛಲ ಸುತ್ತ ಸಿನಿಮಾ ಸಾಗುತ್ತದೆ. ಹಳ್ಳಿ ಹೈದನಾಗಿ ಪೃಥ್ವಿ ಅಂಬರ್‌ ರಗಡ್‌ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ ವಿಭಿನ್ನ  ಪಾತ್ರದಲ್ಲಿ  ಮತ್ತು  ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.
      ಪುಷ್ಪ ಅರುಣ್‌ ಕುಮಾರ್‌ ಅವರು ಮಾತನಾಡಿ “ಆಗಸ್ಟ್‌ 1ಕ್ಕೆ ಸಿನಿಮಾ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಏನೋ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ. ಬೇರೆ ದೊಡ್ಡಸ್ತಿಕೆ ಇದರಲ್ಲಿ ಇಲ್ಲ. ಇವೆಲ್ಲಾ ಅಂದುಕೊಳ್ಳಬೇಡಿ. ಮನೆಯಲ್ಲಿರುವ ಬಾಸ್‌ ನೋಡಿ ನಮಗೆ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ್ದೇವೆ” ಎಂದರು.
     ನಿರ್ದೇಶಕ ಶ್ರೀರಾಜ್‌ “ಖುಷಿ ಅನ್ನೋವುದಕ್ಕಿಂತ ಇದು ಜವಾಬ್ದಾರಿ. ಆಡಿಯನ್ಸ್‌ ನೋಡಿ ಚಿತ್ರಕ್ಕೆ ಪ್ರತಿಕ್ರಿಯೆ ಕೊಡಬೇಕು. ಈ ಕಥೆ ಶುರುವಾದಾಗ ಪುಷ್ಪ ಅಮ್ಮನೊಂದಿಗೆ ಚರ್ಚೆ ಮಾಡಿದೆ. ಒಬ್ಬರೇ ಚಿತ್ರತಂಡ ಸೇರಿಕೊಂಡರು. ಯಾವುದಕ್ಕೂ ಕಾಂಪ್ರಮೈಸ್‌ ಆಗಬೇಡ. ನಿನಗೆ ಏನೂ ಬೇಕೋ ಅದು ತೆಗೆದುಕೊ ಎನ್ನುತ್ತಿದ್ದರು. ಇವತ್ತು ನೀವು ನೋಡುತ್ತಿರುವ ಕ್ವಾಲಿಟಿ, ಕಂಟೆಂಟ್‌ ಕಾರಣ ಪುಷ್ಪ ಅಮ್ಮ. ಈ ರೀತಿ ನಿರ್ಮಾಪಕರು ಕನ್ನಡ ಇಂಡಸ್ಟ್ರೀಗೆ ಬೇಕು” ಎಂದು ಹೇಳಿದರು. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ ‘ಕೊತ್ತಲವಾಡಿ’ ಚಿತ್ರದಲ್ಲಿದೆ. ಟ್ರೇಲರ್‌ನಲ್ಲಿ ನಿಡುವಳ್ಳಿ ಸಂಭಾಷಣೆ ಹೈಲೆಟ್ ಆಗಿದೆ. ಪುಷ್ಪ ಅರುಣ್‌ ಕುಮಾರ್‌ ತಮ್ಮದೇ  ಪಿಎ ಪ್ರೊಡಕ್ಷನ್‌ ನಡಿ ಬಂಡವಾಳ ಹೂಡಿದ್ದಾರೆ.
     ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರಡಕ್ಷನ್ ಹಾಡಿಗೆ ಹಾಗೂ ಹಿನ್ನಲೆ ಸಂಗೀತ ಅಭಿನಂದನ್ ಕಶ್ಯಪ್  ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನವಿದೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ.
WhatsApp Group Join Now
Telegram Group Join Now
Share This Article