ನವದೆಹಲಿ, ಜುಲೈ 22: 38 ವರ್ಷದ ಭಾರತೀಯ ಪ್ರಜೆಯಾದ ಕೇರಳದ ನರ್ಸ್ ನಿಮಿಷಾ ಪ್ರಿಯಾಳ ಮರಣದಂಡನೆಯನ್ನು ಜುಲೈ 16ರಂದು ನಿಗದಿಪಡಿಸಲಾಗಿತ್ತು. ಆದರೆ, ಭಾರತೀಯ ಅಧಿಕಾರಿಗಳ ಹಸ್ತಕ್ಷೇಪದ ನಂತರ ಅದನ್ನು ಮುಂದೂಡಲಾಯಿತು.
ಆಕೆ ಪ್ರಸ್ತುತ ಇರಾನ್ ಬೆಂಬಲಿತ ಹೌತಿಗಳ ನಿಯಂತ್ರಣದಲ್ಲಿರುವ ಯೆಮೆನ್ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ. ಈ ಪ್ರಕರಣದ ಪ್ರಮುಖ ರಾಜತಾಂತ್ರಿಕ ಬೆಳವಣಿಗೆಯಲ್ಲಿ, ಯೆಮೆನ್‌ನಲ್ಲಿ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ವಿಧಿಸಲಾದ ಮರಣದಂಡನೆಯನ್ನು ಯೆಮೆನ್ ಮತ್ತು ಭಾರತೀಯ ನಾಯಕರ ವ್ಯಾಪಕ ಪ್ರಯತ್ನದ ನಂತರ ರದ್ದುಗೊಳಿಸಲಾಗಿದೆ ಎಂದು ಧರ್ಮ ಗುರು ಡಾ. ಕೆಎ ಪೌಲ್ ಮಂಗಳವಾರ ರಾತ್ರಿ (ಸ್ಥಳೀಯ ಸಮಯ) ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.