ಜು. 23 ಕ್ಕೆ ಜಿ ಎನ್‌ ಜಿ ಎಲೆಕ್ಟ್ರಾನಿಕ್ಸ್ ಐಪಿಒ ಆರಂಭ

Pratibha Boi
ಜು. 23 ಕ್ಕೆ ಜಿ ಎನ್‌ ಜಿ ಎಲೆಕ್ಟ್ರಾನಿಕ್ಸ್ ಐಪಿಒ ಆರಂಭ
WhatsApp Group Join Now
Telegram Group Join Now

ನವದೆಹಲಿ , ಜುಲೈ 19, 2025: ಜಿ ಎನ್‌ ಜಿ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ಈಕ್ವಿಟಿ ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಬಿಡ್ 2025ರ ಜುಲೈ 23 ಆರಂಭಗೊಳ್ಳಲಿದೆ.
ಬಿಡ್/ ನೀಡಿಕೆಯು 2025ರ ಜುಲೈ 25 (ಶುಕ್ರವಾರ) ಕೊನೆಗೊಳ್ಳಲಿದೆ.
ಈ ಐಪಿಒ ನೀಡಿಕೆ ಗಾತ್ರವು ₹ 400 ಕೋಟಿಗಳವರೆಗೆ ₹ 2 ಮುಖಬೆಲೆಯ ಈಕ್ವಿಟಿ ಷೇರುಗಳ ಹೊಸ ವಿತರಣೆ ಮತ್ತು ₹ 2 ಮುಖಬೆಲೆಯ 25,50,000 ವರೆಗಿನ ಷೇರುಗಳ ಮಾರಾಟದ ಕೊಡುಗೆ ಒಳಗೊಂಡಿದೆ. ಈ ನೀಡಿಕೆಯ ಬೆಲೆ ಪಟ್ಟಿಯನ್ನು ಪ್ರತಿ ಈಕ್ವಿಟಿ ಷೇರಿಗೆ ₹225 ರಿಂದ ₹ 237 ರವರೆಗೆ ನಿಗದಿಪಡಿಸಲಾಗಿದೆ. ಕನಿಷ್ಠ 63 ಈಕ್ವಿಟಿ ಷೇರುಗಳಿಗೆ ಮತ್ತು ನಂತರ 63 ಈಕ್ವಿಟಿ ಷೇರುಗಳ ಗುಣಕಗಳಲ್ಲಿ ಬಿಡ್‌ ಸಲ್ಲಿಸಬಹುದು.
ಈ ʼಐಪಿಒʼ ಮೂಲಕ ಸಂಗ್ರಹವಾಗುವ ಮೊತ್ತವನ್ನು ಕಂಪನಿಯು ಮತ್ತು ಕಂಪನಿಯ ಪ್ರಮುಖ ಅಂಗಸಂಸ್ಥೆಯಾಗಿರುವ ಎಲೆಕ್ಟ್ರಾನಿಕ್ಸ್ ಬಜಾರ್ ಎಫ್‌ಜೆಡ್‌ಸಿ ಪಡೆದಿರುವ ಸಾಲಗಳ ಪೂರ್ವ ಪಾವತಿ ಇಲ್ಲವೆ ಮರುಪಾವತಿಗೆ ಹಾಗೂ ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಿಕೊಳ್ಳಲಿದೆ.
ಈ ಕೊಡುಗೆಯಲ್ಲಿ ಶೇ 50ಕ್ಕಿಂತ ಹೆಚ್ಚಿಗೆ ಇರದ ನೀಡಿಕೆಯು ಅರ್ಹ ಸಾಂಸ್ಥಿಕ ಖರೀದಿದಾರರಿಗೆ, ನೀಡಿಕೆಯ ಶೇ 5 ರಷ್ಟು ದೇಶೀಯ ಮ್ಯೂಚುವಲ್ ಫಂಡ್‌ಗಳಿಗೆ, ಶೇಕಡ 15ರಷ್ಟು ಸಾಂಸ್ಥಿಕಯೇತರ ಹೂಡಿಕೆದಾರರಿಗೆ ಮತ್ತು ಶೇಕಡ 35ಕ್ಕಿಂತ ಕಡಿಮೆ ಇರದ ನೀಡಿಕೆಯು ಸಾಮಾನ್ಯ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿರುತ್ತದೆ.
ಮೋತಿಲಾಲ್‌ಇನ್ವೆಸ್ಟ್‌ಮೆಂಟ್‌ಅಡ್ವೈಸರ್ಸ್‌ಲಿಮಿಟೆಡ್‌, ಐಐಎಫ್‌ಎಲ್‌ ಕ್ಯಾಪಿಟಲ್‌ಸರ್ವಿಸಸ್‌ಲಿಮಿಟೆಡ್‌ ಮತ್ತು ಜೆಎಂ ಫೈನಾನ್ಶಿಯಲ್‌ಲಿಮಿಟೆಡ್‌- ಈ ಐಪಿಒ ನೀಡಿಕೆ ಕಂಪನಿ ಮತ್ತು ಹೂಡಿಕೆದಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡುವ ಹಣಕಾಸು ಸಂಸ್ಥೆಗಳಾಗಿವೆ.

 

WhatsApp Group Join Now
Telegram Group Join Now
Share This Article