ಜಮಖಂಡಿ: ನಗರದ ಮುಧೋಳ ರಸ್ತೆಯಲ್ಲಿ ಬರತಕ್ಕ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತರಬೇತಿಯಲ್ಲಿರುವ ಕಲಿಕಾ ಶಿಕ್ಷಕರ ಇಂಟರಶಿಪ್ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಠಿಣ ಪರಿಶ್ರಮ, ಕಲಿಕೆ ಉತ್ಸಾಹಕ್ಕೆ, ತರಬೇತಿ ಅವಧಿಯಲ್ಲಿ ತರಬೇತಿಯಲ್ಲಿರುವ ಕಲಿಕಾ ಶಿಕ್ಷಕರು ತೋರಿದ ಬದ್ಧತೆ ಮತ್ತು ಕಲಿಯುವಿಕೆಗೆ ನೀಡಿದ ಕೊಡುಗೆಯನ್ನು ಗಮನಿಸಿ ತರಬೇತಿಯ ಕಲಿಕಾ ಶಿಕ್ಷಕರನ್ನು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಶಾಲೆ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ೨೫ ಕ್ಕೂ ಹೆಚ್ಚು ಕಲಿಕಾ ಶಿಕ್ಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
.