ಸಕಲ ಭಕ್ತರನ್ನು ಉದ್ದರಿಸುವ ಆದಿ ಶಕ್ತಿ ಜಗನ್ಮಾತೆ ದುರ್ಗಾ ದೇವಿ : ಯಲ್ಲನಗೌಡ ಪಾಟೀಲ

Hasiru Kranti
ಸಕಲ ಭಕ್ತರನ್ನು ಉದ್ದರಿಸುವ ಆದಿ ಶಕ್ತಿ ಜಗನ್ಮಾತೆ ದುರ್ಗಾ ದೇವಿ : ಯಲ್ಲನಗೌಡ ಪಾಟೀಲ
WhatsApp Group Join Now
Telegram Group Join Now

ಮಹಾಲಿಂಗಪುರ 19:- ಹಿಂದೂಗಳ ಆರಾಧ್ಯ ದೇವಿ ಜಗನ್ಮಾತೆ ದುರ್ಗಾದೇವಿ ಅನೇಕ ಹೆಸರುಗಳಿಂದ ಪೂಜಿಸಲ್ಪಡುತ್ತಾಳೆ. ಉತ್ತರ ಭಾರತದಲ್ಲಿ ದುರ್ಗೆಯನ್ನು ಹೆಚ್ಚಾಗಿ ಪ್ರಾರ್ಥಿಸುತ್ತಾರೆ. ಹಿಂದೂ ದೇವಾನು ದೇವತೆಗಳಲ್ಲಿ ಅತ್ಯಂತ ಶಕ್ತಿಶಾಲಿ ಉಗ್ರವಾತಾರರಿ ಸ್ವರೂಪಳು ದುಷ್ಟ ರಾಕ್ಷಸ ಶಕ್ತಿಗಳನ್ನು ಸಂಹರಿಸಲು ಲೋಕಕಲ್ಯಾಣಕ್ಕಾಗಿ ಅವತಾರವೇತ್ತ ದೇವಿ ದೇವತೆಯನ್ನು ಯುದ್ಧದ ದೇವತೆ, ಶಕ್ತಿ ದೇವಿ, ಉಗ್ರ ಸ್ವರೂಪಿಣಿಯಾಗಿ ಪೂಜಿಸುತ್ತಾರೆ. ನಂಬಿದ ಭಕ್ತರಿಗೆ ಸಕಲ ಕರುಣಿಸುವ ಕರುಣಾಮಯಿ ತಾಯಿ ಸಕಲ ಮತ್ತೊದಾರಕಿಯಾಗಿದ್ದಾಳೆ. ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ದುರ್ಗಾದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಿಗೆ ಪೂಜೆ ನೆರವೇರಿಸಿ ಮಾತನಾಡಿ ಧಾರ್ಮಿಕ ಮತ್ತು ಆಧ್ಯಾತ್ಮದ ನಾಡು ಭಾವಕತೆ ಬಿಡು ಶಾಂತಿಯ ತವರು ಮಹಾಮಹಿಮಾ ಪುರು? ಮಹಾಲಿಂಗೇಶ್ವರರ ತಪೋ ಭೂಮಿ ಮಹಾಲಿಂಗಪುರದ ದುರ್ಗಾದೇವಿಯ ಜಾತ್ರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ತಾಯಿ ದುರ್ಗಾ ಮಾತೆ ಕೃಪೆ ತೋರುತ್ತಾಳೆ ಎಂದರು.
ನಂತರ ಮಾತನಾಡಿದ ಸಮಾಜದ ಮುಖಂಡರಾದ ಅರ್ಜುನ ಆನೇಪ್ಪಗೋಳ ಶ್ರೀ ಪರಬ್ರಹ್ಮರೂಪಿಣಿಯಾದ ಅಧಿಪರಾಶಕ್ತಿ ಶಾಕ್ತೇಯರ ಪರಬ್ರಹ್ಮ. ಶಕ್ತಿ ದೇವತೆ ಇವಳಿಲ್ಲದೆ ಎಲ್ಲವು ಚೈತನ್ಯಶೂನ್ಯ, ಜಡವಾಗಿ ಪರಿಣಮಿಸುತ್ತದೆ. ಇವಳಿಂದಲೇ ಹರಿಹರ ಬ್ರಹ್ಮರು ಉದಯ್. ಇವಳಿಂದಲೇ ಸೃಷ್ಠಿಯ ಅಂತ್ಯ. ಸೃಷ್ಠಿಯ ಆದಿಯಲ್ಲಿ ಉದಯಿಸಿದ ಇವಳನ್ನು ಆದಿಶಕ್ತಿ ಎಂದರೆ, ಪರಬ್ರಹ್ಮರೂಪಿಯಾಗಿ ಎಲ್ಲರಲ್ಲೂ ಚೈತನ್ಯಕಾರಕಳಾದ ಕಾರಣ ಪರಾಶಕ್ತಿ. ಶಕ್ತಿಯಿಲ್ಲದೆ ಎಲ್ಲವೂ ಜಡ, ಪ್ರತಿಯೊಂದು ಕಾರ್ಯದ ಕಾರಣವೂ ಶಕ್ತಿಯೇ ಬ್ರಹ್ಮನ ಸೃಷ್ಠಿ, ಹರಿಯ ಪಾಲನೆ, ಹರನ ಸಂಹಾರ ಈ ಎಲ್ಲವೂ ಶಕ್ತಿಯಿಂದಲೇ ನಡೆಯುವುದು ಮತ್ತು ಇವಳನ್ನೇ ದುರ್ಗಾ ಎಂದು ಕರೆಯುವುದು. ಇವಳನ್ನೇ ಪರಮೇಶ್ವರಿ, ಪರಶಿವೆ, ಮಹಾಮಾಯಾ, ಆದಿಮಾಯೇ, ಯೋಗನಿದ್ರಾ ನವ ಅವತಾರ ತಾಳಿ ನವದುರ್ಗೆ ಇನ್ನು ಅನೇಕ ಹೆಸರುಗಳಿಂದ ಇಡೀ ವಿಶ್ವದಾದ್ಯಂತ ಪೂಜಿಸಲ್ಪಡುತ್ತಾಳೆ ಮಹಾತಾಯಿ . ಜಾತ್ರೆ ಕಾರ್ಯ ನೆರವೇರಿದ್ದು ಅತ್ಯಂತ ಶ್ಲಾಘನಿಯವಾದುದು ದುರ್ಗಾದೇವಿ ಸಕಲವನ್ನೂ ಕರುಣಿಸಲಿ ಎಂದು ಹಾರೈಸಿದರು.
ದೇವಿ ಮೂರ್ತಿಗೆ ಶುಕ್ರವಾರ ಮುಂಜಾನೆ ವಿಶೇ? ಹೂವಿನ ಅಲಂಕಾರ ಹೋಮ್, ಹವನ, ಪಂಚ ಧಾನ್ಯ, ಪಂಚ ಪು?, ಪಂಚ ತೀರ್ಥಗಳಿಂದ ವಿಶೇ? ಪೂಜೆ ನೆರವೇರಿಸಿ ನಂತರ ಮಧ್ಯಾಹ್ನ ಮಹಾಮಂಗಳಾರತಿ, ಜರುಗಿ ಮಹಾಪ್ರಸಾದದೊಂದಿಗೆ ಜಾತ್ರೆ ಸಂಪನ್ನವಾಯಿತು.
ತೆರವು ಅರ್ಪಣೆ : ಆದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ತೇರವು ಅರ್ಪಣೆ. ಶ್ರೀ ದುರ್ಗಾದೇವಿ ಜಾತ್ರೆ ನಿಮಿತ್ಯ ನಗರದ ಎಲ್ಲ ಹನುಮಾನ ಮಂದಿರಗಳಿಗೆ ಬ್ರಹತ್ ಚಪ್ಪಲಿ (ತೇರವು) ಗಳನ್ನು ಸಂಪ್ರದಾಯದಂತೆ ಹಲಗೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಹೋಗಿ ಅರ್ಪಿಸಿ ಮಾರುತಿ ಕೃಫೆಗೆ ಪಾತ್ರರಾದರು.
ಇಂದಿನ ಕಾರ್ಯಕ್ರಮದಲ್ಲಿ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರು. ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ಶೇಖರ ಅಂಗಡಿ, ವೆಂಕಣ್ಣ ಗುಂಡಾ, ಅಶೋಕಗೌಡ ಪಾಟೀಲ, ಶಂಕರಗೌಡ ಪಾಟೀಲ,ಮಹಾಲಿಂಗಪ್ಪ ಕೋಳಿಗುಡ್ಡ, ಮಹಾಲಿಂಗ ಕುಳ್ಳೊಳ್ಳಿ, ಮಹಾಲಿಂಗಪ್ಪ ಲಾತುರ,ಭೀಮಶಿ ಗೌಂಡಿ, ಶಿವಬಸು ಗೌಂಡಿ, ನಾಗಪ್ಪ ಗೌಂಡಿ, ಪ್ರಲ್ದಾದ ಉತ್ತೂರ, ಪ್ರಶಾಂತ್ ಮುಖೇನ್ನವರ, ಲಕ್ಷ್ಮಣ ಮಾಂಗ, ಅರ್ಜುನ್ ದೊಡಮನಿ, ರವಿ ಹಲಸಪ್ಪಗೋಳ, ಪುಂಡಲೀಕ ಮಿಲಟರಿ, ಮಾನಿಂಗಪ್ಪ ಸಣದಿ, ರವಿಗೌಡ ಪಾಟೀಲ, ರಾಜು ಚಮಕೇರಿ, ಸುನಿಲಗೌಡ ಪಾಟೀಲ, ವಿಜುಗೌಡ ಪಾಟೀಲ, ಹಣಮಂತ ಬುರುಡ,ಶಿವಾಜಿ ಪತ್ತಾರ, ಮಂಜು ಪತ್ತಾರ ಸೇರಿ ಹಲವರು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಗಣ್ಯಮಾನ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

WhatsApp Group Join Now
Telegram Group Join Now
Share This Article