ಬಳ್ಳಾರಿ, ಜು. 19: ಬದುಕಿನ ಪ್ರತಿ ಕ್ಷಣವನ್ನೂ ಸದುಪಯೋಗ ಮಾಡಿಕೊಂಡಾಗಲೇ ಆದರ್ಶ ವ್ಯಕ್ತಿತ್ವ ರೂಪುಗೊಂಡು ಜೀವನ ಸಾರ್ಥಕವಾಗುತ್ತದೆ ಎಂದು ಹಂಪಿ ಹೇಮಕೂಟ ಶೂನ್ಯಸಿಂಹಾಸನಾಧೀಶ್ವರ, ನಿರಂಜನ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಅವರು ತಿಳಿಸಿದ್ದಾರೆ.
ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಮಠದ ಅಕ್ಕನ ಬಳಗದ ಸಹಯೋಗದಲ್ಲಿ ನಡೆದ `ಮಾಸಿಕ ಶಿವಾನುಭವ ಸಂಪದ – 06′ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ರಾಜ್ಯಾಧ್ಯಕ್ಷರು, ಶ್ರೀಮಠದ ಆಪ್ತರಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ಶ್ರದ್ಧಾಂಜಲಿ’ಯಲ್ಲಿ ಶ್ರೀಗಳು ಆಶೀರ್ವಚನ ಮಾಡಿದರು.
ಪ್ರತಿಯೊಬ್ಬರೂ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ, ಜನಸೇವೆ, ಧರ್ಮಸೇವೆ ಹೀಗೇ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ದೈನಂದಿನ ಚಟುವಟಿಕೆಗಳಲ್ಲಿ ಸಮಯವನ್ನು ಮೀಸಲು ಮಾಡಿ, ಆದರ್ಶ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಫ.ಗು. ಹಳಕಟ್ಟಿ ಅವರು ಶಿಕ್ಷಣ, ರಾಜಕೀಯ, ಜನಸೇವೆ, ಕಾನೂನು ಶಾಸ್ತçದ ಸೇವೆಯ ಜೊತೆಯಲ್ಲಿಯೇ ವಚನ ಸಾಹಿತ್ಯಕ್ಕಾಗಿ ತಮ್ಮ ಬದುಕನ್ನು ತ್ಯಾಗ ಮಾಡಿ, 16 ಸಾವಿರ ವಚನಗಳನ್ನು ಸಂಗ್ರಹ ಮಾಡಿ ಮನೆ ಮನೆ ತಲುಪಿಸಿ ಪ್ರಾತಃಸ್ಮರಣೀಯರಾಗಿ ಅಜರಾಮರರಾಗಿದ್ದಾರೆ. ಬದುಕನ್ನು ವಚನ ಸಾಹಿತ್ಯಕ್ಕಾಗಿ ಮೀಸಲು ಮಾಡಿ ಕಾಯಕಯೋಗಿ ನಮ್ಮಲ್ಲಿ ಶಾಶ್ವತವಾಗಿದ್ದಾರೆ. ಎನ್. ತಿಪ್ಪಣ್ಣ ಅವರೂ ಜೀವಮಾನವಿಡೀ ಶಿಕ್ಷಣ, ಸಮಾಜಕ್ಷೇತ್ರ, ನ್ಯಾಯಶಾಸ್ತçಕ್ಕೆ ದುಡಿದು ನಮ್ಮೆಲ್ಲರಲ್ಲೂ ಅಮರರಾಗಿದ್ದಾರೆ ಎಂದರು.
ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಅವರು, ವಚನ ಸಾಹಿತ್ಯದ ಪಿತಾಮಹ ಫ.ಗು. ಹಳಕಟ್ಟಿ ಅವರ `ಜೀವನದರ್ಶನ’ವನ್ನು ಮಾಡಿ, ಹಳಕಟ್ಟಿ ಅವರು ವಚನ ಸಾಹಿತ್ಯದ ಅವಿಭಾಜ್ಯ ಎಂದರು.
ಮುಖ್ಯ ಅತಿಥಿಗಳಾದ ಪತ್ರಕರ್ತ ಎನ್. ವೀರಭದ್ರಗೌಡ ಅವರು, ಆಧುನಿಕತೆ ಮತ್ತು ದುಡಿಮೆಯ ಒತ್ತಡದಲ್ಲಿ ದೇವರು, ಸಂಸ್ಕೃತಿ, ಸಂಸ್ಕಾರಗಳನ್ನು ಮರೆಯುತ್ತಿರುವ ಸಂದರ್ಭದಲ್ಲಿ `ಶಿವಾನುಭವ ಗೋಷ್ಠಿ’ಗಳು ನಮ್ಮೆಲ್ಲರನ್ನು ಒಗ್ಗೂಡಿಸುವುದರ ಜೊತೆಯಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ನೆನಪಿಸುತ್ತವೆ. ನಮ್ಮೆಲ್ಲರ ಹಿರಿಯರಾಗಿದ್ದ ಶ್ರೀ ಎನ್. ತಿಪ್ಪಣ್ಣ ಅವರ ವೀರಶೈವ – ಲಿಂಗಾಯತ ಒಳಪಂಗಡಗಳು ಒಗ್ಗೂಡುವ ಮೂಲಕ ಅವರ ಜೀವನದ ಆಶಯವನ್ನು ಪಾಲಿಸೋಣ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಜಿ.ಟಿ. ಫೌಂಡೇಶನ್‌ನ ಅಧ್ಯಕ್ಷರು, ವಕೀಲರು ಆಗಿರುವ ತಿಮ್ಮಪ್ಪ ಜೋಳದರಾಶಿ ಅವರು, ಸಮಾಜಮುಖಿ ಸೇವೆಗಳನ್ನು ಕೈಗೊಂಡಿರುವ ಶ್ರೀಮಠವು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಸೇವೆ ಸಲ್ಲಿಸುತ್ತಿದೆ ಎಂದರು.
ಇAದುಮತಿ ಪಾಟೀಲ್ ಮತ್ತು ಡಾ. ರೇಣುಕಾ ಮಂಜುನಾಥ್ ಅವರು ಶ್ರೀಯುತ ಎನ್. ತಿಪ್ಪಣ್ಣ ಅವರ ಜೀವನ – ಸಾಧನೆ ಮತ್ತು ಸಾರ್ಥಕತೆಯ ಕುರಿತು ಮಾತನಾಡಿ, ನಮನ ಸಲ್ಲಿಸಿದರು. ಶ್ರೀಯುತರ ಆತ್ಮಕ್ಕೆ ಶಾಂತಿಕೋರಿ ಎರೆಡು ನಿಮಿಷ ಮೌನಾಚರಣೆ ಆಚರಿಸಲಾಯಿತು.
ಅಕ್ಕನ ಬಳಗದ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಸಹ ಶಿಕ್ಷಕಿ ಶ್ರೀಮತಿ ಈರಮ್ಯ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ದೊಡ್ಡಬಸವ ಗವಾಯಿಗಳು ಹಾಗೂ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ಇಂದುಮತಿ ಪಾಟೀಲ್ ವಂದನಾರ್ಪಣೆ ಸಲ್ಲಿಸಿದರು.