ವಿಜಯನಗರ ( ಹೊಸಪೇಟೆ): ವಿಜಯನಗರ ಜಿಲ್ಲಾ ಮಾದಿಗ ಮಹಾಸಭಾ ವತಿಯಿಂದ 2ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಗರದ ಎಸಿ ಬುದ್ಧ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆ ಜಿಲ್ಲಾಧಿಕಾರಿ ಎಂಎಸ್ ದಿವಾಕರ್ ರವರು ಮಾತನಾಡಿ ಒಂದು ಸಮಾಜವು ಮುಂದ ಬರಬೇಕಾದರೆ ಶಿಕ್ಷಣವು ಕೂಡ ಅತ್ಯವಶ್ಯಕವಾಗಿರುತ್ತದೆ. ಉನ್ನತ ಹುದ್ದೆಯನ್ನು ಸೇರುವುದರಿಂದ ಒಂದು ಕುಟುಂಬ ಬೆಳೆಯುವುದರ ಜೊತೆಗೆ ಸಮಾಜವು ಕೂಡ ಬೆಳೆಯುತ್ತದೆ,, ಎತ್ತರದ ಗುಡಿ ಮತ್ತು ಸತತ ಪ್ರಯತ್ನ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು, ತಾವು ಅತ್ಯುತ್ತಮ ಸಾಧನೆ ಮಾಡಿದರೆ ಸನ್ಮಾನಗಳು ತಾವಾಗಿ ಹುಡುಕಿಕೊಂಡು ಬರುತ್ತವೆ. ನಾನು ಒಂದನೇ ತರಗತಿಯಿಂದ ಎಂ.ಎಸ್.ಸಿ ಮುಗಿಯುವವರೆಗೂ ನನಗೆ ಒಂದು ಸನ್ಮಾನವೂ ಆಗಿಲ್ಲ ಆದರೆ ನೀವು 10ನೇ ತರಗತಿ ಇರುವಾಗ ಸಮಾಜ ನಿಮ್ಮನ್ನು ಗುರುತಿಸಿ ಸನ್ಮಾನ ಮಾಡುತ್ತಿದೆ ನೀವು ಅದೃಷ್ಟವಂತರು ಎಂದರೆ ತಪ್ಪಾಗಲಾರದು ನಮ್ಮಲ್ಲಿ ಮೇಲು ಕೀಳು ಎಂಬ ಭಾವನೆ ಇರಬಾರದು ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನದೇ ಆದಂತಹ ಕೌಶಲ್ಯವನ್ನು ಹೊಂದಿರುತ್ತಾನೆ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿ ಸನ್ಮಾನಿಸಿದರು.
ಕಾರ್ಯಕ್ರಮವನ್ನು ಎಚ್ ಎನ್ ಎಫ್ ಇಮಾಮ್ ನಿಯಾಜಿ ಅಧ್ಯಕ್ಷರು ನಗರ ಅಭಿವೃದ್ಧಿ ಪ್ರಾಧಿಕಾರ ಹೊಸಪೇಟೆ ಇವರು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಎಲ್ಲಾ ಗಣ್ಯರು ದೀಪವನ್ನು ಬೇಕಾಗಿಸುವುದ್ರ ಮೂಲಕ ಹಾಗೂ ನೂತನ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕಾರದೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೂರ್ಣಾಂದ ಭಾರತಿ ಸ್ವಾಮೀಜಿಗಳು ಮಾತಂಗ ಪರ್ವತ ಹಂಪಿ ವಹಿಸಿ ಇವರು ಆಶೀರ್ವಚನ ನೀಡಿದರು.
.ಪ್ರಸ್ತಾವಿಕವಾಗಿ ಎ. ಬಸವರಾಜ್ ಮಾತನಾಡಿ ನಮ್ಮ ಸಂಘವು ಸಮಾಜದ ಏಳಿಗೆಗಾಗಿ ಮತ್ತು ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ ಒಂದು ಸಂಘವನ್ನು ಮುನ್ನಡೆಸಬೇಕಾದರೆ ಅನೇಕ ರೀತಿಯ ಸಮಸ್ಯೆಗಳು ಬರುತ್ತವೆ ಅದನ್ನು ಬದಿಗೊಟ್ಟಿ ನಾವೇ ಮುಂದೆ ಸಾಗಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್. ಶೇಷರವರು ವಹಿಸಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಿವಕುಮಾರ್, ಮಾದಿಗ ಸಮಾಜದ ಗಣ್ಯರಾದ ಎಂ ಸಿ ವೀರಸ್ವಾಮಿ, ಡಾ.ಬಿ.ಆರ್.ಅಂಬೇಡ್ಕರ್ ಸಂಘ ಅಧ್ಯಕ್ಷರಾದ ಕೆ.ಪಿ. ಉಮಾಪತಿ,ಬಲ್ಲಹುಣಸಿ ರಾಮಣ್ಣ, ಸೋಮಶೇಖರ್ ಕಮಲಾಪುರ, ಪೂಜಾಪ್ಪ,ಕೆ.ಉಚ್ಚಂಗಪ್ಪ, ಹಡಗಲಿ, ನಿಂಗಪ್ಪ, ಪಿ.ಸಂತೋಷ್ ಕುಮಾರ್, ಕೊಟ್ರೇಶ್, ನಾಗಪ್ಪ, ಲಕ್ಷ್ಮಣ ಹಾಗೂ ಮಾದಿಗ ಮಹಾಸಭಾ ಕಾರ್ಯಧ್ಯಕ್ಷರಾದ ಶ್ರೀನಿವಾಸ್ ಎಚ್ ಉಪಾಧ್ಯಕ್ಷರಾದ ಕರಿಯಪ್ಪ, ಬಿ ಹನುಮಂತಪ್ಪ ಜಿ ಪಂಪಾಪತಿ ವಿಜಯ್ ಕುಮಾರ್, ರವಿ ನಿಂಗಪ್ಪ ಆಗೋಲಿ ಸುಹೇಲ್ ಸೇರಿದಂತೆ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಇದ್ದರು.