ಶ್ರೀ ಧರ್ಮಸ್ಥಳ ಸಂಘದ ವತಿಯಿಂದ ಬಿಪಿ, ಶುಗರ, ತೈರಾಡ ತಪಾಸಣಾ ಶಿಬಿರ

Hasiru Kranti
ಶ್ರೀ ಧರ್ಮಸ್ಥಳ ಸಂಘದ ವತಿಯಿಂದ ಬಿಪಿ, ಶುಗರ, ತೈರಾಡ ತಪಾಸಣಾ ಶಿಬಿರ
WhatsApp Group Join Now
Telegram Group Join Now
ಬೈಲಹೊಂಗಲ..ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ    ವಕ್ಕುಂದ ಗ್ರಾಮದ  ಶ್ರೀ ಅಕ್ಕಮಹಾದೇವಿ  ಜ್ಞಾನವಿಕಾಸ ಕೇಂದ್ರದಲ್ಲಿ ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಇಶಾ ಮಲ್ಟಿಸ್ಪೆಶಾಲಿಟಿ  ಆಸ್ಪತ್ರೆ ಬೈಲಹೊಂಗಲ ಇವರ ಸಹಯೋಗದಲ್ಲಿ  ಉಚಿತ ಥೈರೈಡ್ಪಿ, ಬಿ ಪಿ, ಶುಗರ್ ತಪಾಸನೆ   ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು  ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಕಲ್ಲಿ, ಪಿಡಿಓ  ಶ್ರೀಮತಿ ವಿಜಯಲಕ್ಷ್ಮಿ ಅನಿಗೋಳ, ಬೈಲಹೊಂಗಲ ತಾಲೂಕ ಯೋಜನಾಧಿಕಾರಿಗಳಾದ ವಿಜಯಕುಮಾರ, ಗ್ರಾಮ ಪಂಚಾಯತಿ ಉಪಾಧ್ಯಕ್ಷರು ಶ್ರೀಮತಿ ರೇಖಾ ಡವಳೆ, ಇಶಾ ಆಸ್ಪತ್ರೆ ಸಿಬ್ಬಂದಿ ಸಂತೋಷ್ ಸರ್ ಇವರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ  ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಉದ್ಘಾಟನೆ ನೆರವೇರಿಸಿ ಪಿಡಿಓ  ವಿಜಯಲಕ್ಷ್ಮಿ ಅನಿಗೋಳ ಮಾತನಾಡಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡದಿರುವ ಕಾರ್ಯಗಳಿಲ್ಲ, ಆರೋಗ್ಯ ತಪಾಸಣೆ ಶಿಬಿರಗಳು  ಇಂತಹ ಹತ್ತಾರು ಕಾರ್ಯಕ್ರಮಗಳನ್ನು ಕೈಗೊಂಡಿದೆ, ವೀರೇಂದ್ರ ಹೆಗ್ಗಡೆ ಅವರು ಬಡವರಿಗೆಂದೇ ಇಂತಹ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು ಕಾರ್ಯಕ್ರಮಗಳ ಉಪಯೋಗ ಎಲ್ಲರೂ ಪಡೆದುಕೊಳ್ಳಬೇಕು, ಮಹಿಳೆಯರು ಆರ್ಥಿಕವಾಗಿ ಸಬಲೀಕರಣ ಹೊಂದುವದರೊಂದಿಗೆ ಕುಟುಂಬ ನಿರ್ವಹಣೆಯನ್ನು  ಜಾಣ್ಮೆಯಿಂದ ನಿರ್ವಹಿಸುವುದು ಅಗತ್ಯವಾಗಿದೆ.
ಎಲ್ಲರೂ ಅನಾವಶ್ಯಕ ಖರ್ಚು ಮಾಡದೆ ಸ್ವ ಉದ್ಯೋಗ ರೂಪಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸಿ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಡೀ ಕರ್ನಾಟಕದಾದ್ಯಂತ ವ್ಯಾಪಿಸಿದ್ದು ಅದೆಷ್ಟೋ ಕುಟುಂಗಳಿಗೆ ದಾರಿದೀಪವಾಗಿದೆ.ತಮ್ಮ ಅವಶ್ಯಕತೆಗೆ ಪೂರಕವಾಗಿ ಸಾಲ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
 ತಾಲೂಕಿನ  ಯೋಜನಾಧಿಕಾರಿಗಳಾದ ವಿಜಯಕುಮಾರ ಮಾತನಾಡಿ  ಯೋಜನೆ ಕಾರ್ಯಕ್ರಮಗಳ ಬಗ್ಗೆ ಉದಾರಣೆ ಸಮುದಾಯ ಅಭಿವೃದ್ಧಿ ಮಾಶಾಸನ ವಾತ್ಸಲ್ಯ,ಸುಜ್ಞಾನಿಧಿ,ಶಿಷ್ಯವೇತನ,ಜಲಮಂಗಳ, ಆರೋಗ್ಯ ರಕ್ಷಾ, ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆ ಬಗ್ಗೆ  ಕುರಿತು ಮಾಹಿತಿ ನೀಡಿದರು. ಹಾಗೂ 100 ಜನ ಸದಸ್ಯರ ಥೈರಾಡ್, ಬಿ ಪಿ, ಶುಗರ್ ಪರೀಕ್ಷೆ  ಮಾಡಿಸಲಾಯಿತು. ಈ ಸಂದರ್ಭದಲ್ಲಿ    ನಿರೂಪಣೆಯನ್ನು  ಜ್ಞಾನವಿಕಾಸ ಸಮನ್ವಯಾಧಿಕಾರಿ ಶೈಲಾ ಜೆ  ನಡೆಸಿಕೊಟ್ಟರು, ಸ್ವಾಗತವನ್ನು  ವಲಯದ ಮೇಲ್ವಿಚಾರಕರಾದ  ಜಗದೀಶ್ ನೆರವೇರಿಸಿದರು, ಸೇವಾಪ್ರತಿನಿಧಿ ರೇಣುಕಾ,  ಭಾರತಿ   ಡವಳೆ, ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article