ಯರಗಟ್ಟಿ : ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸತ್ತಿಗೇರಿ ಗ್ರಾಮದ ಖಾದಿರಸಾಬ ಮದಾರಸಾಬ ರಾಜೇಖಾನ ವಯಾ: ೩೫ ವ? ಇತನಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಹಾಗೂ ಸದರಿಯವನು ತನ್ನ ಅಪರಾಧಿಕ ಪ್ರವೃತ್ತಿಯನ್ನು ತಿದ್ದಿಕೊಳ್ಳದ ಕಾರಣ. ಕರ್ನಾಟಕ ಪೊಲೀಸ್ ಕಾಯ್ದೆ ಯನ್ವಯ ಸದರಿಯವನಿಗೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಉಪವಿಭಾಗದ ಗಡಿಯಿಂದ. ಮಾನ್ಯ ಉಪ ವಿಭಾಗೀಯ ದಂಡಾಧಿಕಾರಿಗಳು ಬೈಲಹೊಂಗಲರವರು, ಸದರಿಯವನಿಗೆ ಬಾಗಲಕೋಟ ಜಿಲ್ಲೆಯ ಬಾಗಲಕೋಟ ಗ್ರಾಮಿಣ ಪೊಲೀಸ್ ಠಾಣೆಯ ವ್ಯಾಪ್ತಿಗೆ ೦೧ ತಿಂಗಳ ಅವಧಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದು ಇರುತ್ತದೆ.
ಆದ್ದರಿಂದ ಖಾದಿರಸಾಬ ಮದಾರಸಾಬ ರಾಜೇಖಾನ ವಯಾ: ೩೫ ವ? ಸಾ: ಸತ್ತಿಗೇರಿ, ಇತನು ಒಂದು ತಿಂಗಳ ಅವಧಿಯ ಒಳಗಾಗಿ ಸದರಿ ಆಸಾಮಿಯು ಬೆಳಗಾವಿ ಜಿಲ್ಲೆಯ ಒಳಗೆ ಕಂಡು ಬಂದಲ್ಲಿ ಸಾರ್ವಜನಿಕರು ಈ ಕೆಳಕಂಡ ಮೊಬೈಲ ನಂಬರಗಳಿಗೆ ತಿಳಿಸಲು ಮುರಗೋಡ ಸಿಪಿಐ ಆಯ್. ಎಂ. ಪಠಪತಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
೧] ಪೊಲೀಸ್ ಇನ್ಸಪೇಕ್ಟರ ಮುರಗೋಡ ೯೪೮೦೮೦೪೦೭೯
೨] ಪೊಲೀಸ್ ನಿಸ್ತಂತು ಕೊಠಡಿ ಬೆಳಗಾವಿ ೦೮೩೧-೨೪೦೫೨೩೧ (೯೪೮೦೮೦೪೦೦೦)
ಖಾದಿರಸಾಬ ಮದಾರಸಾಬ ರಾಜೇಖಾನ ಗಡಿಪಾರು ಮಾಡಿ ಆದೇಶ
