ರಾಮದುರ್ಗ: ಬ್ಯಾಂಕ ಆಫ್ ಬರೋಡ ೧೧೮ ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಜು. ೧೯ ರಂದು ಸಂಜೆ ೫ ಗಂಟೆಗೆ ಪಟ್ಟಣದ ವಿದ್ಯಾಚೇತನ ಆವರಣದಲ್ಲಿರುವ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ಶಾಖಾ ವ್ಯವಸ್ಥಾಪಕ ಹನಮಂತರಾಯ್ ಬಿರಾದಾರ ಹೇಳಿದರು.
ಸ್ಥಳೀಯ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ೧೯೦೮- ಜುಲೈ ೨೦ ರಂದು ಆರಂಭಗೊಂಡ ಬ್ಯಾಂಕ್ ಆಫ್ ಬರೋಡ, ಇಂದು ದೇಶ ವಿದೇಶಗಳಲ್ಲಿ ಶಾಖೆಗಳನ್ನು ಹೊಂದಿದ್ದು, ಉತ್ತಮವಾದ ಆರ್ಥಿಕ ಸೇವೆ ನೀಡುತ್ತಿದ್ದು, ಸಂಸ್ಥಾಪನಾ ದಿನದ ಅಂಗವಾಗಿ ಪ್ರೆಸ್ ಕ್ಲಬ್ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮದ ಪೂರ್ವದಲ್ಲಿ ಪಟ್ಟಣದಲ್ಲಿ ಪರಿಸರ ಜಾಗೃತಿ ಜಾಥಾ ನಡೆಸಲಾಗುವುದು ಎಂದರು.
ತಾ.ಪಂ ಇಒ ಬಸವರಾಜ ಐನಾಪೂರ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ, ಉದ್ಯಮಿ ಜಮುನಾ ಪ್ರದೀಪ ಪಟ್ಟಣ, ಸಿ.ಪಿ.ಐ ವಿನಾಯಕ ಬಡಿಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣಾಧಿಕಾರಿ ಶಿವಕ್ಕ ಮಾದರ, ಬಿಪ್ಸ್ ಪ್ರಾಚಾರ್ಯ ಲೀಲಾವತಿ ಆರಿಬೆಂಚಿ, ಸಮಾಜ ಕಲ್ಯಾಣ ಅಧಿಕಾರಿ ಹಣಮಂತ ವಕ್ಕುಂದ, ಸಿಡಿಪಿಓ ಶಂಕರ ಕುಂಬಾರ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಾಲೂಕಿನ ಸಮಸ್ತ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಬ್ಯಾಂಕಿನ ಸಿಬ್ಬಂದಿಗಳಾದ ಶಿವಕುಮಾರ ಉದಮುಡಿ, ಪೃತ್ವಿ ಮೇಲಂ, ರಾಜೇಶ್ವರಿ ಮ್ಯಾಗೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಇಂದು ಬ್ಯಾಂಕ ಆಫ್ ಬರೋಡ ೧೧೮ ನೇ ಸಂಸ್ಥಾಪನಾ ದಿನಾಚರಣೆ
