ಕಾಗವಾಡ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಗವಾಡ ತಾಲ್ಲೂಕು ಘಟಕದ ವತಿಯಿಂದ ಶನಿವಾರ ದಿ.19ರಂದು ತಾಲ್ಲೂಕಿನ ಐನಾಪುರ ಪಟ್ಟಣದ ಪ್ರತಿಷ್ಠಿತ ಕೆ .ಆರ್. ಇ.ಎಸ್ ಶಿಕ್ಷಣ ಸಂಸ್ಥೆಯ ಕೇಂದ್ರ ಭವನದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಜರುಗಲಿದೆ.
ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಹಣಮಾಪುರ ಸಿದ್ಧಾಶ್ರಮದ ಸಿದ್ದಯೋಗಿ ಪ.ಪೂ ಅಮರೇಶ್ವರ ಮಹಾರಾಜರು ಹಾಗೂ ಐನಾಪುರ ಗುರುದೇವಾಶ್ರಮದ ಪ. ಪೂಶ್ರೀ ಬಸವೇಶ್ವರ ಸ್ವಾಮಿಜಿ ವಹಿಸುವರು. ಉದ್ಘಾಟಕರಾಗಿ ಶಾಸಕ ರಾಜು ಕಾಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಶಾಸಕ ಲಕ್ಷ್ಮಣ ಸವದಿ ಆಗಮಿಸುವರು .
ಕಾ ನಿ ಪ ಸಂಘದ ಜಿಲ್ಲಾ ಸಂಚಾಲಕ ಸುಕುಮಾರ ಬನ್ನೂರೆ ನೇತೃತ್ವವಹಿಸುವರು
ಅಧ್ಯಕ್ಷತೆಯನ್ನು ಕಾ ನಿ ಪ ಸಂಘದ ತಾಲುಕಾ ಅಧ್ಯಕ್ಷ ಸುರೇಶ ಕಾಗಲಿ ವಹಿಸುವರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶ್ರೀಮಂತ ಪಾಟೀಲ,ತಹಸೀಲ್ದಾರ ರವಿಂದ್ರಹಾದಿಮನಿ ,ಭಾಗವಹಿಸುವವರು.
ಸದಲಗಾ. ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವಿರೇಶ ಪಾಟೀಲ ಉಪನ್ಯಾಸ ನೀಡಲಿದ್ದಾರೆ.
ತಾಲ್ಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಎಲ್ಲ ಗ್ರಾಪಂ ಅಧ್ಯಕ್ಷರು ಪಿ ಕೆ ಪಿ ಎಸ್ ಅಧ್ಯಕ್ಷರು ಚುನಾಯಿತ ಪ್ರತಿನಿಧಿಗಳು ಮುಖಂಡರು ಹಾಗು ಎಲ್ಲ ಪತ್ರಕರ್ತ ರು ಉಪಸ್ಥಿತರಿವರು ಎಂದು ಸಂಘಟಿಕರು ತಿಳಿಸಿದ್ದಾರೆ.