ಜಮಖಂಡಿ 18:- ಮನೆಯೊಂದರಲ್ಲಿ ಮಹಿಳೆ ಒಂಟಿಯಾಗಿರುವದನ್ನು ಗಮನಿಸಿದ ಕಳ್ಳರ ಗುಂಪೊಂದು ಹೊಂಚುಹಾಕಿ ಕಳ್ಳತನಕ್ಕೆ ಯತ್ನ ನಡೆಸಿ ವಿಫಲರಾದ ಘಟನೆ ನಗರದ ಗೌತಮಬುದ್ದ ಕಾಲೊನಿಯಲ್ಲಿ ಗುರುವಾರ ನಡೆದ ಬಗ್ಗೆ ವರದಿಯಾಗಿದೆ. ನಗರದ ನಿವಾಸಿ ಪೃಥ್ವಿ ಪ್ರದೀಪ ನವಣಿ ಎಂಬುವರು ಒಂಟಿಯಾಗಿದ್ದಾರೆ ಎಂಬುದನ್ನು ಗಮನಿಸಿದ ಕಳ್ಳರ ಗುಂಪು ಮದ್ಯಾಹ್ನ ಸುಮಾರು 12 ಗಂಟೆಯ ಹೊತ್ತಿಗೆ ಮನೆಗೆ ಬಂದು ಬಾಗಿಲು ಬಾರಿಸಿ ಮಹಿಳೆಯನ್ನು ಹೊರಗೆ ಕರೆದಿದ್ದಾರೆ ಎನ್ನಲಾಗಿದ್ದು ಹಿಂದಿ ಭಾಷೆಯಲ್ಲಿ ಮಾತನಾಡುತ್ತ ಮಹಿಳೆಯ ಚಿತ್ತವನ್ನು ಬೆರೆಡೆ ಸೆಳೆದು ಸರ ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದ ಮಹಿಳೆ ದಿಟ್ಟತನ ಪ್ರದರ್ಶಿಸಿದ್ದು ಪಕ್ಕದಲ್ಲಿದ್ದ ಕಾಕ್ರೋಚ್ ಹಿಟ್‌ನ ಬಾಟಲಿಯಿಂದ ಕಳ್ಳರ ಮುಖಕ್ಕೆ ಸ್ಪ್ರೇಮಾಡಿದ್ದಾರೆ, ಇದರಿಂದ ವಿಚಲಿತರಾದ ಕಳ್ಳರು ಸ್ಥಳದಿಂದ ಪರಾಗಿಯಾಗಿದ್ದಾರೆ. ಮಹಿಳೆಯ ದಿಟ್ಟತನದ ಪ್ರದರ್ಶನ ದಿಂದ ಸಂಭವಿಸ ಬಹುದಾಗಿದ್ದ ಕಳ್ಳತನ ವಿಫಲವಾಗಿದೆ. ಘಟನಾ ಸ್ಥಳಕ್ಕೆ ನಗರದ ಪಿಎಸ್‌ಐ ಅನೀಲ ಕುಂಬಾರ ಕ್ರೈಂ ವಿಭಾಗದ ಪಿಎಸ್‌ಐ ಎಚ್.ಎಚ್.ಹೊಸಮನಿ ಹಾಗೂ ಸಿಬ್ಬಂದಿಗಳು ಬೇಟೆ ನೀಡಿ ಮಾಹಿತಿ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ. ಮಹಿಳೆಯರು ಜಾಗರೂಕರಾಗಿರುವಂತೆ ಪೊಲೀಸರು ಮನವಿ ಮಾಢಿದ್ದಾರೆ.