ಹುಕ್ಕೇರಿ 18: ನಗರದ ವಿಶ್ವರಾಜ್ ಸಭಾ ಭವನದಲ್ಲಿ ಇವತ್ತಿನ ದಿವಸ ಭಾರತೀಯ ಜನತಾ ಪಕ್ಷ ಹುಕ್ಕೇರಿ ತಾಲೂಕ ಘಟಕದ ವತಿಯಿಂದ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿತ್ತು.
ಕಳೆದ ಆರು ತಿಂಗಳಿಂದ ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಮಾನಗಳನ್ನು ಮೌನವಾಗಿ ವೀಕ್ಷಿಸಿ ನನ್ನ ತಪ್ಪಿಗೆ ಪಶ್ಚಾತಾಪ ಪಟ್ಟಿದ್ದೇನೆ ತಾಲೂಕಿನ ಸಹಕಾರಿ ಸಂಘದ ಎರಡು ಸಂಸ್ಥೆಗಳ ನಿರ್ದೇಶಕರು ಬೇರೆ ತಾಲೂಕಿನ ಜನರ ಬೆನ್ನು ಹಚ್ಚಿದ್ದು ಅವರು ನಾನು ಆಯ್ಕೆ ಮಾಡಿದ ಜನರಾಗಿದ್ದಾರೆ ನಾವು ಚಲಾಯಿಸಿ ಆಯ್ಕೆ ಮಾಡಿದ ಸದಸ್ಯರಲ್ಲಾ ಹಾಗೂ ಹಾಗೂ ಕತ್ತಿ ಕುಟುಂಬದ ಮೇಲೆ ತಾಲೂಕಿನ ಸಾವಿರಾರು ಜನ ಅಭಿಮಾನಿಗಳು ನಮ್ಮ ಕರೆಗೆ ಒಗೋಟು ಬಂದಿದ್ದಕೆ ಕುಟುಂಬದ ನಾಲ್ಕು ಜನರು ನಾಲ್ಕು ದಿಕ್ಕಿಗೆ ನಿಂತು ನಿಮ್ಮನ್ನು ರಕ್ಷಿಸುತ್ತೇವೆ ಎಂದು ಮಾಜಿ ಸಂಸದ ರಮೇಶ್ ವಿಶ್ವನಾಥ್ ಕತ್ತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಹುಕ್ಕೇರಿ ಮತಕ್ಷೇತ್ರದ ಶಾಸಕರಾದ ಶ್ರೀ ನಿಖಿಲ್ ಕತ್ತಿ ಇವರು ಮಾತನಾಡಿ ಕತ್ತಿ ಕುಟುಂಬ ಕಳೆದ ಮೂರು ತಲೆಮಾರುಗಳಿಂದ ಶಾಸಕರಾಗಿ ಕ್ಷೇತ್ರದ ಜನರಿಗೆ ಸೇವೆ ಸಲ್ಲಿಸುತ್ತಿದೆ ಕ್ಷೇತ್ರದ ಪ್ರಬುದ್ಧ ಮತದಾರರು ಇದನ್ನು ಅರಿತು ಮುಂಬರುವ ಚುನಾವಣೆಗಳನ್ನು ಎದುರಿಸುವ ಮೂಲಕ ಎದುರಾಳಿಗಳಿಗೆ ತಕ್ಕ ಉತ್ತರ ಕೊಡುವುದಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ಕೊಟರು ಸದರಿ ಸಭೆಯಲ್ಲಿ ಪವನ್ ಕತ್ತಿ, ಪೃಥ್ವಿಕತ್ತಿ, ಪ್ರಕಾಶ್ ಮುತಾಲಿಕ್ ಮಹಾವೀರ್ ನಿಲಜಗಿ ಗಜಾನನ ಕ್ವಳ್ಳಿ, ನಂದು ಮುಡಸಿ, ರೋಹನ್ ನೇಸರಿ, ಆನಂದ್ ಸಂಸುದ್ದಿ, ಕುಮಾರ್ ಬಸ್ತವಾಡಿ ಅಲ್ಲದೇ ಎಲ್ಲ ಗ್ರಾಮಗಳ ಮುಖಂಡರು ನೂರಾರು ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು