ಸ್ಮಾರ್ಟ್‌ಕ್ಲಾಸ್, ವಿಜ್ಞಾನ ಲ್ಯಾಬ್ ತರಗತಿಗಳು ಇಂದು ಅತ್ಯಂತ ಅವಶ್ಯಕ: ಸಿಎಸ್‌ಆರ್ ಸಕಿನಾ ಬಕೇರ

Ravi Talawar
ಸ್ಮಾರ್ಟ್‌ಕ್ಲಾಸ್, ವಿಜ್ಞಾನ ಲ್ಯಾಬ್ ತರಗತಿಗಳು ಇಂದು ಅತ್ಯಂತ ಅವಶ್ಯಕ: ಸಿಎಸ್‌ಆರ್ ಸಕಿನಾ ಬಕೇರ
WhatsApp Group Join Now
Telegram Group Join Now

ಯರಗಟ್ಟಿ: ಸ್ಥಳೀಯ ಕನ್ನಡ ಮತ್ತು ಇಂಗ್ಲಿಷ್‌ ಮಾಧ್ಯಮ ಪ್ರಾಥಮಿಕ ವಿಭಾಗಗಳನ್ನು ಒಳಗೊಂಡ ಶಾಲಾ ಕಟ್ಟಡದಲ್ಲಿ ನಿರ್ಮಿಸಲಾದ ಸಭಾಭವನ, ಸ್ಮಾರ್ಟ್‌ಕ್ಲಾಸ್, ವಿಜ್ಞಾನ ಲ್ಯಾಬ್ ವಿಭಾಗವನ್ನು ಉದ್ಘಾಟಿಸಲಾಯಿತು.

ಬಾಸ್ ಇಂಡಿಯಾ ಫೌಂಡೇಶನ ಹೆಡ್ ಸಿಎಸ್‌ಆರ್ ಸಕಿನಾ ಬಕೇರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯ ಅತಿ ಹಳೆಯ ಪ್ರಾಥಮಿಕ ಶಾಲೆಗಳಲ್ಲಿ ಒಂದಾದ ಈ ವಿದ್ಯಾಸಂಸ್ಥೆಯಲ್ಲಿ ಹಲವಾರು ಮಂದಿ ವಿದ್ಯಾರ್ಜನೆಗೈದು ಉನ್ನತ ಸ್ಥಾನಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈ ವಿದ್ಯಾಸಂಸ್ಥೆ ಪಠ್ಯ-ಪತ್ಯೇತರ ಚಟುವಟಿಕೆಗಳಲ್ಲಿ ಜಿಲ್ಲೆ, ರಾಜ್ಯವನ್ನು ಪ್ರತಿನಿಧಿಸಿದೆ ಎಂದರು.
ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿ ನಿರ್ಮಿಸಲ್ಪಟ್ಟ ಹೊಸ ಸಭಾಭವನ, ಸ್ಮಾರ್ಟ್‌ಕ್ಲಾಸ್, ವಿಜ್ಞಾನ ಲ್ಯಾಬ್ ತರಗತಿಗಳು ಇಂದು ಅತ್ಯಂತ ಅವಶ್ಯಕ. ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಮಾಡಿಕೊಳ್ಳಿ. ಮುಂದಿನ ಪೀಳಿಗೆಗೆ ಇವು ಪ್ರೇರಣೆ ನೀಡಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ ಇಂದು ಮಕ್ಕಳ ಪ್ರತಿಭೆ ವಿಶಿ?ವಾಗಿ ಅರಳಬೇಕಾದರೆ ಸ್ಮಾರ್ಟ್ ತರಗತಿಗಳೂ ಅವಶ್ಯ. ಇದರಿಂದ ಮಕ್ಕಳು ಕ್ರಿಯಾಶೀಲವಾಗಿ ಸವಾಂಗೀಣ ಬೆಳವಣಿಗೆಗೆ ಸಹಕಾರವಾಗಲಿ ಎಂದರು.

ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಬಾಸ್ ಇಂಡಿಯಾ ಫೌಂಡೇಶನ ಹೆಡ್ ಕಾರ್ಪೊರೇಟ್ ಪ್ರಕಾಶಗೌಡ ಪಾಟೀಲ, ರಾಕೇಶಕುಮಾರ ತ್ರಿಪಾಠಿ, ಡಾ. ಪುಂಡಲೀಕ ಕಾಮತ್, ಯಶವಂತ ಪಾಟೀಲ, ಎಸ್. ಕೆ. ಹುಚ್ಚರೆಡ್ಡಿ, ಸಿ. ಈ. ಹಿರೇಮಠ, ಎಸ್‌ಡಿಎಂಸಿ ಉಪಾಧ್ಯಕ್ಷೆ ಸಕ್ಕುಬಾಯಿ ಕುಂಬಾರ, ಮಾಜಿ ಸೈನಿಕರಾದ ಕುಮಾರ ಹಿರೇಮಠ, ಸಿಆರ್‌ಸಿ ವಸಂತ ಬಡಿಗೇರ, ಮುದಕಪ್ಪ ತಡಸಲೂರ, ಪ್ರಧಾನ ಗುರುಗಳಾದ ಎ. ಎಂ. ಮಕ್ತಮನ್ನವರ, ಪ್ರಮೋದ ಬಡಿಗೇರ, ಗದಿಗೆಪ್ಪ ಕಡಕೋಳ, ದೀಪಾ ಬಡಿಗೇರ, ಇಬ್ರಾಹಿಂ ಚಾಂದಖಾನ್ನವರ, ಶಿವಾನಂದ ಬಳಿಗಾರ, ಎಂ. ಎಂ. ಚೀಲದ, ಶಿವಾನಂದ ಮಿಕಲಿ, ಎಂ. ಎಸ್. ಅತ್ತಾರ, ಜಯಶ್ರೀ ಬಡಕಪ್ಪನವರ ಸೇರಿದಂತೆ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಪೋ?ಕರು ಭಾಗವಹಿಸಿದ್ದರು.

 

WhatsApp Group Join Now
Telegram Group Join Now
Share This Article