ಕುಕನೂರು : ತಾಲೂಕಿನ ನೆಲಜೇರಿ ಗ್ರಾಮದ ದೇವಪ್ಪ ಬೇವಿನಗಿಡದ ಎನ್ನುವ ಬಡ ಕುರಿಗಾಯಿಗೆ ಸೇರಿದ 13 ಕುರಿಗಳು ಚಿರತೆ ದಾಳಿಯಿಂದ ಮೃತಪಟ್ಟಿವೆ ಎಂದು ತಿಳಿದು ಬಂದಿದೆ.
ಬುಧವಾರ ತಡರಾತ್ರಿ 12.30ರ ಸುಮಾರಿಗೆ ನೆಲಜೇರಿ ಬಳಿ ಹಟ್ಟಿಯಲ್ಲಿದ್ದ ಸುಮಾರು 40-50 ಕುರಿಗಳಿದ್ದ ಹಿಂಡಿಗೆ ಏಕಾ, ಏಕಿ ಚಿರತೆ ದಾಳಿ ನಡೆಸಿದ್ದು ಅದರಲ್ಲಿದ್ದ 13 ಕುರಿಗಳ ಮೇಲೆ ದಾಳಿ ನಡೆಸಿದೆ ಎನ್ನಲಾಗಿದೆ.
ಈ ಮೊದಲು ಆ ಭಾಗದಲ್ಲಿ ಆಗಾಗ ಕರಡಿಗಳು ಕಾಣಿಸಿಕೊಳ್ಳುತ್ತಿದ್ದವು, ಆದರೆ ಚಿರತೆ ಕಾಣಿಸಿಕೊಂಡಿರಲಿಲ್ಲಾ ಎಂದು ಸಾರ್ವಜನಿಕರು ಮಾದ್ಯಮಕ್ಕೆ ಮಾಹಿತಿ ಒದಗಿಸಿದ್ದು ಇಂದು ಏಕಾ- ಏಕಿ ಚಿರತೆ ದಾಳಿ ನಡೆಸಿದ್ದು, ಅಲ್ಲಿನ ಜನತೆಯನ್ನು ತಲ್ಲಣಗೊಳಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಜನರು ಭಯ, ಭೀತರಾಗಿ ವಾಸಿಸುವಂತಾಗಿದೆ.
ಈ ಪ್ರಕರಣದಿಂದ ಬಡ ಕುರಿಗಾಯಿ ದೇವಪ್ಪನಿಗೆ ದಿಕ್ಕು ತೊಚದಂತಾಗಿ ಕಂಗಾಲಾಗಿದ್ದಾನೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಸ್ವಾತಿ, ಲಿಂಗರಾಜ ಕನ್ನಾಳ, ಪಶು ವೈದ್ಯರು ತೆರಳಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದ್ದು, ಬಡ ಕುರಿಗಾಯಿ ದೇವಪ್ಪ ಇವರ 13 ಕುರಿಗಳು ದಾಳಿಗೊಳಗಾಗಿದ್ದು, ಅವುಗಳಿಗೆ ಸೂಕ್ತ ಪರಿಹಾರವನ್ನು ಸರಕಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.