ಹುಕ್ಕೇರಿಯಲ್ಲಿ ೧೮ ರಂದು ಬಿಜೆಪಿ ಕಾರ್ಯಕರ್ತರ ಆತ್ಮಾವಲೋಕನ ಸಭೆ- ರಾಜಕೀಯ, ಸಹಕಾರ ಕ್ಷೇತ್ರದ ಬೆಳವಣಿಗೆಗಳ ಚರ್ಚೆ, ಜನರ ಅಭಿಪ್ರಾಯ ಸಂಗ್ರಹ
ಹುಕ್ಕೇರಿ 18:- ಅಭಿವೃದ್ಧಿ ಕೆಲಸಗಳಿಗೆ ಅನುದಾನ ಕೊರತೆ ಮತ್ತು ಕಳೆದ ಎರಡು ವ?ದಲ್ಲಿ ತಾಲೂಕಿನ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಆಗುತ್ತಿರುವ ವ್ಯತಿರಿಕ್ತ ಬದಲಾವಣೆಗಳ ಕುರಿತು ಬಿಜೆಪಿ ಪಕ್ಷದ ಕಾರ್ಯಕರ್ತರ, ಮುಖಂಡರ ಆತ್ಮಾವಲೋಕನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಹುಕ್ಕೇರಿ ಪಿಕಾರ್ಡ ಬ್ಯಾಂಕಿನಲ್ಲಿ ಅವರು ಪಿಕಾರ್ಡ ಬ್ಯಾಂಕಿನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಬಿಜೆಪಿಯಿಂದ ಆಯ್ಕೆಯಾಗಿ ಎರಡು ವರ್ಷ ಕಳೆದ ಹಿನ್ನಲೆಯಲ್ಲಿ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಶುಕ್ರವಾರ ಜುಲೈ ೧೮ ರಂದು ಮುಂಜಾನೆ ಹಮ್ಮಿಕೊಳ್ಳಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ರೈತರ, ನೀರಾವರಿ, ಶಿಕ್ಷಣ ಉದ್ಯೋಗ ಹಾಗೂ ಸಹಕಾರಿ ರಂಗದ ಸಂಸ್ಥೆಗಳ ಬಗ್ಗೆ ಪ್ರತಿ ಗ್ರಾಮದ ಕಾರ್ಯಕರ್ತರಿಂದ ಅಭಿಪ್ರಾಯಗಳ ಸಂಗ್ರಹಣೆ, ಕಾರ್ಯಕರ್ತರ ಕುಂದುಕೊರತೆಯ ಅತ್ಮಾವಲೋಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಭೆಯಲ್ಲಿ ಕ್ಷೇತ್ರದ ಶಾಸಕ ನಿಖಿಲ್ ಕತ್ತಿ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸುವರು. ತಾಲೂಕಿನಿಂದ ೨ ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಸಭೆಯಲ್ಲಿ ತಾಲೂಕಿನ ಜನರ ಅಭಿಪ್ರಾಯ ಮತ್ತು ಸಲಹೆ-ಸೂಚನೆ ಸಂಗ್ರಹಿಸಿ ಮುಂದಿನ ನಡೆ ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಮೌನ ಮುರಿದ ಮಾಜಿ ಸಂಸದ ರಮೇಶ ಕತ್ತಿ.ಕಳೆದ ಒಂದು ವರ್ಷದಿಂದ ಮೌನ ತಾಳಿದ ರಮೇಶ ಕತ್ತಿ ಅವರು ಪತ್ರಿಕಾಗೋಷ್ಟಿಯಲ್ಲಿ ಮೌನ ಮುರಿದ ಅವರು ಬೆಳಗಾವಿ ಡಿಸಿಸಿ ಬ್ಯಾಂಕ್, ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಮತ್ತು ಹುಕ್ಕೇರಿ ಪುರಸಭೆಯಲ್ಲಿ ನಂಬಿಗಸ್ಥರಿಂದಲೆ ಆಡಳಿತದ ಅಧಿಕಾರ ಕೈ ತಪ್ಪಿದರಿಂದ ಕಳೆದ ೯ ತಿಂಗಳಿನ ಮೌನ ತಾಳಿದ್ದ ಅವರು ಇಂದು ಹೇಳಿಕೆ ನೀಡಿದರು.
ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ, ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕೆಲ ನಿರ್ದೇಶಕರು ನಂಬಿಕೆ ದ್ರೋಹ ಎಸಗಿದ್ದಾರೆ. ಜೊತೆಗೆ ತಾಲೂಕಿನ ಜನರ ಅಭಿಪ್ರಾಯಗಳನ್ನು ಧಿಕ್ಕರಿಸಿ ಬೇರೆ ಗುಂಪಿನೊಂದಿಗೆ ಗುರುತಿಸಿಕೊಂಡು ತಾಲೂಕಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಮೌನ, ತಾಳ್ಮೆ ವಹಿಸುವುದನ್ನು ಹಿರಿಯರು ತಮಗೆ ಕಲಿಸಿಕೊಟ್ಟಿದ್ದರು ೪೫ವರ್ಷಗಳ ಸಹಕಾರಿ ರಂಗದಲ್ಲಿಯ ನಂಬಿಗೆ ದ್ರೋಹ ಅನುಭವ ವಿಭಿನ್ನವಾಗಿದೆ. ಇಂದು ಕ್ಷೇತ್ರದ ಜನತೆಯ ಹಿತ ದೃಷ್ಠಿಯಿಂದ ಮೌನ ಮುರಿಯುವದು ಅನಿವಾರ್ಯವಾಗಿದೆಂದರು ಮಾರ್ಮಿಕವಾಗಿ ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಆದ ಬೆಳವಣಿಗೆಯನ್ನು ನನ್ನ ತಾಲೂಕಿನ ಜನತೆ ಸ್ವಾಭಿಮಾನದಿಂದ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೇವಲ ಈ ಸಂಘ-ಸಂಸ್ಥೆಗಳ ನಿರ್ದೇಶಕರು ಮಾತ್ರ ಬೇರೆಡೆ ಹೋಗಿರಬಹುದು. ಆದರೆ, ತಾಲೂಕಿನ ಜನರು ಮಾತ್ರ ಕತ್ತಿ ಕುಟುಂಭದೊಂದಿಗೆ ತೆಲೆಮಾರಿನ ನಂಟನ್ನು ಹೊಂದಿದ್ದಾರೆ. ಕ್ಷೇತ್ರದ ಜನತೆಯೆ ನನಗೆ ಆಸ್ತಿ ಎಂದರು ಸಹಕಾರಿ ಕ್ಷೇತ್ರದ ಸಂಘ-ಸಂಸ್ಥೆಗಳು ಮತ್ತು ರಾಜಕೀಯ ಮೇಲಿನ ಕತ್ತಿ ಕುಟುಂಬದ ಬಿಗಿಹಿಡಿತ ಸಡಿಲಿಕೆಗೆ ಕಾರಣವೇನು ಮತ್ತು ಹೊಂದಾಣಿಕೆ ರಾಜಕಾರಣ ತಮಗೆ ಮುಳುವಾಯಿತೇ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಹೊಸ ಮುಖಗಳಿಗೆ ಅಧಿಕಾರ ಆಯ್ಕೆಯಲ್ಲಿ ಎಡವಿರುವುದು ಒಂದೆಡೆಯಾದರೆ, ದಿ.ಉಮೇಶ ಕತ್ತಿ ಅವರ ಅನುಪಸ್ಥಿತಿಯೂ ಕಾರಣವಿರಬಹುದು ಎಂದ ಮನದಾಳದ ನೋವು ಹೋರಹಾಕಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸತ್ಯಪ್ಪಾ ನಾಯಿಕ, ಮಹಾವೀರ ಸಮೂಹ ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ರಾಜು ಮುನ್ನೋಳಿ, ಗುರು ಕುಲಕರ್ಣಿ, ಬಿಜೆಪಿ ಯುವ ಘಟಕದ ಅಧ್ಯಕ್ಷ ಪ್ರಜ್ವಲ ನಿಲಜಗಿ, ಸುಹಾಸ ನೂಲಿ, ಶಿವನಗೌಡ ಪಾಟೀಲ, ಅಮರ ನೇರ್ಲಿ, ರಾಜು ಬಿರಾದಾರಪಾಟೀಲ, ಎ.ಕೆ ಪಾಟೀಲ, ಎಚ್ ಎಲ್ ಪೂಜೇರಿ, ಸಾತಪ್ಪಾ ಕರ್ಕಿನಾಯಿಕ, ಶಿವನಗೌಡ ಪಾಟೀಲ, ಬಸಲಿಂಗ ಕರಗುಪ್ಪಿ, ಇಲಿಯಾಸ ಅತ್ತಾರ, ಇಮ್ರಾನ ಮೋಮಿನ, ಬಸವರಾಜ ಗಂಗಣ್ಣವರ, ಪಿಂಟು ಶೆಟ್ಟಿ, ಮಧುಕರ ಕರನಿಂಗ, ಮಹಾಂತೇಶ ಬೆಟಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.