ಸಮುದಾಯ ಭವನದ ಮೇಲ್ಚಾವಣಿ ಕಾಮಗಾರಿಗೆ ಚಾಲನೆ

Ravi Talawar
ಸಮುದಾಯ ಭವನದ ಮೇಲ್ಚಾವಣಿ ಕಾಮಗಾರಿಗೆ ಚಾಲನೆ
WhatsApp Group Join Now
Telegram Group Join Now
ಬೆಳಗಾವಿ:ಸಾಂಬ್ರಾ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಶ್ರೀ ಬಸವೇಶ್ವರ ಸಮುದಾಯ ಭವನ ಕಟ್ಟಡದ ಮೇಲ್ಚಾವಣಿಗೆ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಸ್ಥಳೀಯ ಜನ ಪ್ರತಿನಿಧಿಗಳು, ಮುಖಂಡರು ಹಾಗೂ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಸೇರಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಪ್ರಯತ್ನದಿಂದ ಮಂಜೂರು ಮಾಡಿಸಿರುವ ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದೆ.
ಈ ಸಂದರ್ಭದಲ್ಲಿ ನಾಗೇಶ ದೇಸಾಯಿ, ಸದು ಪಾಟೀಲ, ಪ್ರವೀಣ ಮಾನೆ, ಸಂಜು ದೇಸಾಯಿ, ಚಕ್ರು ಪಾಟೀಲ, ಉಮೇಶ ಮಾಸ್ತಮರಡಿ, ಲಕ್ಷ್ಮಣ ಸುಳೇಭಾವಿ, ಭುಜಂಗ ಗಿರಮಲ್ಲ, ಗಜಾನನ ಕಮ್ಮಾರ, ರಾಜು ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article