ವಿಜಯಪುರ : ಕ್ರೀಡೆಗಳು ಬದುಕಿನ ಅವಿಭಾಜ್ಯ ಅಂಗವಾಗಲಿ ಎಂದು ಸಮಾಜ ಸೇವಕ ಫಯಾಜ ಕಲಾದಗಿ ಹೇಳಿದರು.ನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲಯನ್ಸ್ ಪುಟ್ಬಾಲ್ ಕ್ಲಬ್ ವತಿಯಿಂದ ಹಮ್ಮಿಕೊಂಡ ೨೧ ವ? ವಯೋಮಿತಿಯ ಬಾಲಕ ಹಾಗೂ ಬಾಲಕಿಯರ ಪಂದ್ಯಾವಳಿ ಡಾ.ಬಿ.ಆರ್. ಅಂಬೇಡ್ಕರ್ ಪುಟ್ಬಾಲ್ ಪಂದ್ಯಾಳಿ ೨೦೨೫ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದಿನ ಯುವಕರು ದುಷ್ಟಟಕ್ಕೆ ಬಲಿಯಾಗುತ್ತಿದ್ದಾರೆ. ತಮ್ಮ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳದೇ ವ್ಯಸನೀಗಳಾಗುತ್ತಿರುವುದು ವಿಷಾದನೀಯ. ಯುವಕರು ಸದೃಢವಾದ ದೇಹವನ್ನು ಹೊಂದಲು ಕ್ರೀಡೆಗಳಲ್ಲಿ ತೊಡಗಿಕೊಳ್ಳಬೇಕು. ಕ್ರೀಡೆಯು ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿದರು. ರಾಜ್ಯ ಮತ್ತು ದೇಶದ ಕೀರ್ತಿ ಪತಾಕೆಯನ್ನು ಜಗತ್ತಿನಾದ್ಯಂತ ಹರಿಡಿಸುವ ಕೆಲಸದಲ್ಲಿ ಪ್ರತಿಯೊಬ್ಬರು ತೊಡಗಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಜಶೇಖರ್ ದೈವಾಡಿ ಮಾತನಾಡಿದರು.೨೧ ವ? ವಯೋಮಿತಿಯ ಬಾಲಕರ ವಿಭಾಗದಲ್ಲಿ ಲಯನ್ಸ್ ಫುಟ್ಬಾಲ್ ತಂಡ ಪ್ರಥಮ ಸ್ಥಾನ ಪಡೆದರು, ರಿತೇಶ್ ಫುಟ್ಬಾಲ್ ತಂಡ ವಿಜಯಪುರ ದ್ವಿತೀಯ ಸ್ಥಾನ ಪಡೆದರು.೨೧ ವ? ವಯೋಮಿತಿಯ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದರು. ಲಯನ್ಸ್ ಫುಟ್ಬಾಲ್ ತಂಡ ವಿಜಯಪುರ, ಜಗದಂಬ ಫುಟ್ಬಾಲ್ ತಂಡ ದೇವರ ಹಿಪ್ಪರಗಿ ಎರಡನೇ ಸ್ಥಾನ ಪಡೆದರು.
ಈ ಸಂದರ್ಭದಲ್ಲಿ ಮಾಣಿಕೇಶ್ವರಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಚಿದಾನಂದ ಅವಟಿ, ಮಾಣಿಕ್ ಗುಳಸ್ಕರ್ , ಎನ್.ಎಂ.ಹುಟಗಿ, ಸಂತೋ? ರಾಥೋಡ್ , ವಿಠ್ಠಲ್ ಮಳಗಿ, ಕೃ? ಗಾಡಿವಡ್ಡರ್, ಸತೀಶ ಹಿಪ್ಪರಗಿ, ಹಮೀದ್ ಜಾಗಿರದಾರ, ಶಿವಪ್ಪ ಕೌಟಗಿ, ಪ್ರಮೋದ್ ಶೆಟ್ಟಗಾರ, ಅರವಿಂದ್ ಅಂಗಡಿ, ಲಕ್ಷ್ಮೀ ದೊಡ್ಡಮನಿ, ದಾರಾಸಿಂಗ್ ಪವಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಗಣೇಶ್ ಬೋಸ್ಲೆ ಸ್ವಾಗತಿಸಿದರು. ಶ್ರೀಧರ್ ಜೋಶಿ ನಿರೂಪಿಸಿದರು. ಯಲ್ಲಪ್ಪ ಜಂಪ್ಲೆ ವಂದಿಸಿದರು.