ಘಟಪ್ರಭಾ.ರೈತ ಸಂಘ ಹಸಿರು ಸೇನೆ (ಅಹಿಂದ) ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಲವಾ ಗೋವಿಂದ ಕುಡ್ಡೆಮ್ಮಿ ಅವರು ಆಯ್ಕೆ ಮಾಡಲಾಗಿದೆ. ಅವರ ಆಯ್ಕೆಯನ್ನು ರಾಜ್ಯಾಧ್ಯಕ್ಷ ಗುರುನಾಥ ಹೆಗಡೆ ಮತ್ತು ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ಸರೋಜಿನಿ ತುಳಸಿಗೇರಿ ಅವರನ್ನು ಘಟಪ್ರಭಾದ ಮುಗಳಖೋಡ ಶಾಖಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘೋಷಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಸಮತಾ ಸೈನಿಕ ದಳದ ಬೆಳಗಾವಿ ಜಿಲ್ಲೆಯ ಮುಖಂಡರಾದ ಕೃಷ್ಣಾ ಗಂಡವ್ವಗೋಳ, ಲವಾ ಕುಡ್ಡೆಮ್ಮಿ ಅವರಿಗೆ ಹಾಗೂ ಸಂಘಟನೆಯ ಸರ್ವ ಸದಸ್ಯರಿಗೆ ಶುಭ ಕೋರಿದರು. ಬೆಳಗಾವಿ ಜಿಲ್ಲೆಯ ಅಹಿಂದ ಸಂಘಟನೆಯ ಬೆಳಗಾವಿ ಜಿಲ್ಲೆಯ ಅಧ್ಯಕ್ಷರಾದ ಬಾಳೇಶ ಮುನ್ನೊಳಿ, ಗೋಕಾಕ ತಾಲೂಕು ಅಧ್ಯಕ್ಷ ಪ್ರಕಾಶ ಬಿರನಾಳೆ ಸೇರಿದಂತೆ ರಾಯಬಾಗ, ಚಿಕ್ಕೋಡಿ ಅಥಣಿ, ಗೋಕಾಕ, ಬೆಳಗಾವಿ ಸೇರಿದಂತೆ ರೈತರು, ಹಾಗೂ ನಾಗರೀಕರು ಭಾಗವಹಿಸಿದ್ದರು.