ಎಣ್ಣೆ ಕಾಳು ಬೆಳೆಗಳ ಸುಸ್ಥಿರ ಕೃಷಿಯನ್ನು ಸಾಧಿಸುವಲ್ಲಿ ಸಮಗ್ರ ಕೀಟ ನಿರ್ವಹಣೆಯ ಮಹತ್ವ

Ravi Talawar
ಎಣ್ಣೆ ಕಾಳು ಬೆಳೆಗಳ ಸುಸ್ಥಿರ ಕೃಷಿಯನ್ನು ಸಾಧಿಸುವಲ್ಲಿ ಸಮಗ್ರ ಕೀಟ ನಿರ್ವಹಣೆಯ ಮಹತ್ವ
WhatsApp Group Join Now
Telegram Group Join Now

ನೇಸರಗಿ: ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ – ಎಣ್ಣೆಕಾಳು (ಓಒಇಔ-ಔS) ಯೋಜನೆಯಡಿಯಲ್ಲಿ ಎಣ್ಣೆಕಾಳು ಬೆಳೆಗಳ ಸಮಗ್ರ ಬೆಳೆ ನಿರ್ವಹಣೆ ಕುರಿತು ಎಣ್ಣೆ ಕಾಳು ಬೆಳೆಗಾರರಿಗೆ ೧೫ ನೇ ತರಬೇತಿ ಶಿಬಿರವನ್ನು ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಲಾಯಿತು ಎಂದು ಮತ್ತಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಮಂಜುನಾಥ ಚೌರಡ್ಡಿಯವರು ತಿಳಿಸಿದರು. ಶೇಂಗಾ ಮತ್ತು ಸೋಯಾಬಿನ್ ಕೃಷಿಯಲ್ಲಿ ಕೀಟ ನಿರ್ವಹಣೆಗಾಗಿ ಸುಸ್ಥಿರ ತಂತ್ರಜ್ಞಾನಗಳೊಂದಿಗೆ ರೈತರನ್ನು ಸಜ್ಜುಗೊಳಿಸುವುದು ತರಬೇತಿಯ ಪ್ರಾಥಮಿಕ ಉದ್ದೇಶವಾಗಿದೆ. ಹೆಚ್ಚುವರಿಯಾಗಿ ಎಣ್ಣೆ ಕಾಳು ಬೆಳೆಗಳಲ್ಲಿ ವಿವಿಧ ಕೀಟಗಳನ್ನು ಗುರುತಿಸುವಿಕೆ ಮತ್ತು ನಿರ್ವಹಣೆಯ ಕುರಿತು ವಿವರವಾದ ಮಾರ್ಗದರ್ಶನವನ್ನು ಈ ತರಬೇತಿಯಲ್ಲಿ ನೀಡಲಾಗುತ್ತಿದೆ. ತಮ್ಮ ತಾಂತ್ರಿಕ ಮಾರ್ಗರ್ಶನದಲ್ಲಿ ಸುಸ್ಥಿರ ಕೃಷಿಯನ್ನು ಸಾಧಿಸುವಲ್ಲಿ ಸಮಗ್ರ ಕೀಟ ನಿರ್ವಹಣೆಯ ಮಹತ್ವವನ್ನು ಒತ್ತಿ ಹೇಳಿದರು. ಜೈವಿಕ ನಿಯಂತ್ರಣ ವಿಧಾನಗಳು ಮತ್ತು ಜೈವಿಕ ಕೀಟನಾಶಕಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಯಂತಹ ಪ್ರಮುಖ ತಂತ್ರಜ್ಞಾನಗಳನ್ನು ಒಳಗೊಂಡ ಮಾಹಿತಿ ನೀಡಲಾಯಿತು ಕೇಂದ್ರದ ವಿಜ್ಞಾನಿ ಜಿ. ಬಿ. ವಿಶ್ವನಾಥ ಸೋಯಾಬಿನ್ ಬೆಳೆಯಲ್ಲಿ ವಿವಿಧ ತಳಿಗಳ ಮಾಹಿತಿ ನೀಡಿದರು. ಡಾ. ಎಸ್. ಎಸ್. ಹಿರೇಮಠ ಅವರು ರೋಗಗಳ ಸಮಗ್ರ ನಿರ್ವಹಣೆ ಕುರಿತು, ಎಸ್. ಎಮ್. ವಾರದ ಸೋಯಾಬಿನ್ ಬೆಳೆಯ ಮಣ್ಣಿನ ಫಲವತ್ತತೆ, ಪ್ರವೀಣ ಯಡಹಳ್ಳಿ ಖಾದ್ಯ ತೈಲ ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು. ಕೊನೆಯದಾಗಿ ಚರ್ಚಾಕೂಟವನ್ನು ಏರ್ಪಡಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಲಾಯಿತು.

 

 

WhatsApp Group Join Now
Telegram Group Join Now
Share This Article