ಬಸಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ  ಸಂಸತ್ ಚುನಾವಣೆ 

Ravi Talawar
ಬಸಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಶಾಲಾ  ಸಂಸತ್ ಚುನಾವಣೆ 
WhatsApp Group Join Now
Telegram Group Join Now
ಬಳ್ಳಾರಿ,ಜು,17.:ನಗರದ ಕೌಲ್ ಬಜಾರ್ ಪ್ರದೇಶದ  ಬಸಮ್ಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಬದ್ಧತೆಯಿಂದ ಮತದಾನದಲ್ಲಿ ಭಾಗವಹಿಸಿ ಸಂಸತ್ತನ್ನು ರಚಿಸಿದರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಕೆ ಚಂದನ ಗೌಡ ತಿಳಿಸಿದರು.
 ಇಂದು ಶಾಲೆಯಲ್ಲಿ ಮಕ್ಕಳಿಗಾಗಿ ಮಕ್ಕಳಿಂದ ಸಂಸತ್ ಚುನಾವಣೆಯನ್ನು ನಡೆಸಲಾಯಿತು, ಈ ಚುನಾವಣೆಯಲ್ಲಿ ಒಟ್ಟು 19 ವಿದ್ಯಾರ್ಥಿಗಳು ಸ್ಪರ್ಧೆ ಮಾಡಿದ್ದರು. ಇದರಲ್ಲಿ 6 ವಿದ್ಯಾರ್ಥಿಗಳನ್ನು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಾಯಿತು. ಚುನಾವಣೆಯಲ್ಲಿ ಒಟ್ಟು 264 ಮತದಾನ ನಡೆದಿದ್ದು
ಶಾಲಾ ಪ್ರಧಾನ ಕಾರ್ಯದರ್ಶಿಯಾಗಿ ಹರಿಕಾ (55) ಮತ .ಮಣಿಲಕ್ಷ್ಮಿ (28)
ಕ್ರೀಡಾ ಕಾರ್ಯದರ್ಶಿ ಹೆಚ್.ಯೋಗೀಶ್ (31) ಮತ ರುಬಿನಾ ಸಿದ್ದೀಕ್ (44) ಮತಗಳು ಪಡೆದು ಜಯಗಳಿಸಿದರು. ಮತ್ತು ಸಾಂಸ್ಕೃತಿಕ ಕಾರ್ಯದ
ಮೋಯಿಜಾ ಮಿನಾಜ್ (45) ಮತ ಲಿಖಿತಾ (41) ಮತಗಳು ಪಡೆದು ಚುನಾವಣೆಯಲ್ಲಿ ವಿಜಯಶಾಲಿಯಾದರು.
ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕವೃಂದ ಈ ಚುನಾವಣಾ ಪ್ರಕ್ರಿಯೆಯನ್ನು  ನಡೆಸಿದರು, ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಶಿಕ್ಷಕ ಚೆನ್ನನಗೌಡ,  ಮಕ್ಕಳಲ್ಲಿ ನಾಯಕತ್ವ ಗುಣ ವಿಕಾಸವಾಗಲು ಇಂತಹ ಅಣಕು ಸಂಸತ್   ಚುನಾವಣೆಗಳು  ಅವಕಾಶ ಕಲ್ಪಿಸುತ್ತದೆ ಎಂದರು.
ವಿದ್ಯಾರ್ಥಿಗಳ ಮುಂದಿನ ಭವಿಷ್ಯ ನಿರ್ಮಾಣಕ್ಕೆ ಇಂತಹ ಕಾರ್ಯಕ್ರಮಗಳು ಪ್ರೇರಣಾದಾಯಕವಾಗಿವೆ ಇದು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಮೂಡಿಸಲು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಪ್ರೇರೇಪಿಸುವ ಮಹತ್ವದ ಹೆಜ್ಜೆಯಾಗಿದೆ  ಎಂದು  ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಜಿ.ರಾಜೇಶ್ವರಿ, ಮುಖ್ಯೋಪಾಧ್ಯಾಯ ಕೆ.ಚೆನ್ನನ್ನಗೌಡ, ದೈಹಿಕ ಶಿಕ್ಷಕ ಬಿ. ಹೆಚ್, ಎಂ,ವಿರೂಪಾಕ್ಷಯ್ಯ, ಸಹ ಶಿಕ್ಷಕ ಡಿ,ಜಿ,ಶೇಖರ್ ಗೌಡ, ಶಶಿಧರಯ್ಯ, ಟಿ.ಮಾರುತಿ , ಗಂಗಾಧರಯ್ಯ ಶಾಸ್ತ್ರಿ,ಎನ್, ಕಾರ್ತಿಕ್, ಸಹ ಶಿಕ್ಷಕಿ ವಿ.ಜಯಲಕ್ಷ್ಮಿ ಸೇರಿದಂತೆ ಶಾಲಾ  ವಿದ್ಯಾರ್ಥಿಗಳಿದ್ದರು.
WhatsApp Group Join Now
Telegram Group Join Now
Share This Article