ಗದಗ ೧೬: ಎನ್.ಸಿ.ಸಿ. ಫೈರಿಂಗ್ ಶೆಡ್ ಹಾಗೂ ಗದಗ ಜಿಲ್ಲೆಯ ಎನ್.ಸಿ.ಸಿ. ಅಭಿವೃದ್ಧಿ ಕಾರ್ಯಗಳಿಗೆ ಪ್ರವಾಸೋದ್ಯಮ ಹಾಗೂ ಕಾನೂನು ಸಚಿವರಾದ ಡಾ.ಎಚ್.ಕೆ.ಪಾಟೀಲ ಅವರು ೮-೦೦ ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದ್ದಾರೆ.
ಇತ್ತೀಚೆಗೆ ವಿದ್ಯಾದಾನ ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಇವರ ನೇತೃತ್ವದಲ್ಲಿ ೩೮ ಕರ್ನಾಟಕ ಬಟಾಲಿಯನ್ ಗದಗ ವಿಭಾಗದ ಮುಖ್ಯಸ್ಥರಾದ ಕಮಾಂಡಿಂಗ್ ಆಫೀಸರ್ ಕರ್ನಲ್ ಭುವನ್ ಖರೆ, ಎನ್.ಸಿ.ಸಿ. ಹಿತೈಷಿಗಳಾದ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರಾದ ಸಿದ್ಧಲಿಂಗೇಶ್ವರ ಪಾಟೀಲ, ಎನ್.ಸಿ.ಸಿ. ಅಧಿಕಾರಿಗಳಾದ ಕ್ಯಾಪ್ಟನ್ ಬಿ.ಎಸ್.ರಾಠೋಡ್, ಸುಬೇದಾರ ಮೇಜರ್ ಗುರುವಂಗ ಸಚಿವರನ್ನು ಭೇಟಿಯಾಗಿ ಗದಗ ಜಿಲ್ಲೆಯಲ್ಲಿ ಎನ್.ಸಿ.ಸಿ. ಕಾರ್ಯಚಟುವಟಿಕೆಗಳು ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಕುರಿತು ಸಚಿವರೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಸಚಿವರು ವಿದ್ಯಾರ್ಥಿಗಳಿಗೆ ಫೈರಿಂಗ್ ಪ್ರಾಯೋಗಿಕ ತರಬೇತಿ ಅನುಕೂಲಕ್ಕಾಗಿ ಶೆಡ್ ನಿರ್ಮಿಸಲು ೮ ಲಕ್ಷ ರೂಪಾಯಿಗಳ ಅನುದಾನವನ್ನು ನೀಡುವುದಾಗಿ ಘೋಷಣೆ ಮಾಡಿದರು. ಅವರ ಈ ಪ್ರೋತ್ಸಾಹ ಹಾಗೂ ಸಹಾಯಕ್ಕೆ ಎನ್.ಸಿ.ಸಿ. ಅಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.