ಕಾಗವಾಡ: ಬಸವ ನಗರದಲ್ಲಿ ಸೋಮವಾರ ಶಾಸಕ ರಾಜು ಕಾಗೆ ಅವರು ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ‘ಸಾರ್ವಜನಿಕರ ಅಹವಾಲು ಆಲಿಸಲು ಮತ್ತು ಸರ್ಕಾರದ ಸೌಲಭ್ಯಕ್ಕಾಗಿ ಅಲೆದಾಟ ತಪ್ಪಿಸಲು ಈ ಕಾರ್ಯಾಲಯ ತೆರೆಯಲಾಗಿದೆ. ಈ ಭಾಗದ ಜನರು ತಮ್ಮ ಅಹವಾಲುಗಳನ್ನು ಕಾರ್ಯಾಲಯಕ್ಕೆ ಬಂದು ಸಲ್ಲಿಸಬಹುದು’ ಎಂದರು.
ಈ ಸಂದರ್ಭದಲ್ಲಿ ಜನಾರ್ಧನ ಧೋಡಾರೆ, ವಿದ್ಯಾಧರ ಧೋಡಾರೆ, ಅಮಿತ, ಜ್ಯೋತಿಕುಮಾರ ಪಾಟೀಲ್, ರಮೇಶ ಚೌಗಲೆ, ಚಿದಾನಂದ್ ಅವಟಿ, ಪ್ರಕಾಶ್ ಪಾಟೀಲ ಪ್ರಕಾಶ್ ಕಾಂಬಳೆ, ಸೌರಭ ಪಾಟೀಲ, ಶಾಂತಿನಾಥ ಕರವ, ವಿನಾಯಕ ಚೌಗಲೆ, ರಾಜು ಧೋಡಾರೆ, ವಿಶಾಲ ಧೋಡಾರೆ,ಶೀಲಾದರ ಚೌವ್ಹಾಣ,ಅವಿನಾಶ ದೇವಣೆ,ಶೀಲಾದರ ಕಾಂಬಳೆ,ಮಲ್ಲಿಕಾರ್ಜುನ ಕಾಂಬಳೆ,ಬಾಳಕೃಷ್ಣ ಭಜಂತ್ರಿ,ಇದ್ದರು.