ಮುನವಳ್ಳಿ: ನವಿಲುತೀರ್ಥ ಆಣೆಕಟ್ಟು ಮುಖ್ಯಕಾರ್ಯನಿರ್ವಾಹಕ ಕಛೆರಿಗೆ ರಾಮದುರ್ಗ ಹಾಗೂ ಬದಾಮಿ ತಾಲೂಕಿನ ರೈತರು ಮಲಪ್ರಭಾ ನದಿಗೆ ಹಾಗೂ ಎಡದಂಡೆ ಕಾಲುವೆಗೆ ನೀರು ಹರಿಸಲು ಸೋಮವಾರ ಮನವಿ ಸಲ್ಲಿಸಿದರು.
ಮಳೆ ಸರಿಯಾದ ಸಮಯಕ್ಕೆ ಆಗದೆಇದ್ದಕಾರಣ ರೈತರ ಬೆಳೆಗಳಿಗೆ ಹಾಗೂ ಕುಡಿಯಲು, ಜಾನುವಾರಗಳಿಗೆ, ಕೆರೆ, ಕಟ್ಟೆಗಳನ್ನು ತುಂಬಿಸಲು, ಮಲಪ್ರಭಾ ಆಣೆಕಟ್ಟೆಇಂದ ಎಡದಂಡೆ ಕಾಲುವೆಗೆ ಹಾಗೂ ನದಿಗೆ ನೀರು ಹರಿಸುವ ಸಲುವಾಗಿ ಹಲುವಾರು ಬಾರಿ ಸಂಬಂಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪೂರ, ಶಾಸಕರುಗಳಾದ ರಾಮದುರ್ಗದ ಅಶೋಕ ಪಟ್ಟಣ ಹಾಗೂ ಬದಾಮಿಯ ಬಿ.ಬಿ.ಚಿಮ್ಮನಕಟ್ಟಿ ಇವರುಗಳಿಂದ ದೂರವಾಣಿ ಮೂಲಕ ಸಂಬಂದಪಟ್ಟ ಅಧಿಕಾರಿಗಳಿಗೆ ಕರೆ ಮಾಡಿಸಿದರು ಕೂಡಾ ಅಧಿಕಾರಿಗಳು ಯಾವದೆ ಪ್ರತಿಕ್ರಿಯೆ ನೀಡದಕಾರಣ. ಇಂದು ಆ ಬಾಗದ ರೈತರು ನವಿಲುತಿರ್ಥದ ಆಡಳಿತ ಅಧಿಕಾರಿ ಮಮತಾ ಮೂಲಿಮನಿ, ವಿಭಾಗ ಅಧಿಕಾರಿ ಕಿರಣಗೌಡ ಗೌಡಪನ್ನವರ ಇವರುಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವಿಕರಿಸಿದ ಅಧಿಕಾರಿಗಳು ಸಂಬಂದಪಟ್ಟ ಮೆಲಾಧಿಕಾರಿಗಳ ಜೋತೆ ಚರ್ಚಿಸಿ ಶುಕ್ರವಾರದಿಂದ ನೀರು ಬೀಡುವದಾಗಿ ಆಶ್ವಾಸನೆ ನೀಡಿರುವರು.
ಒಂದು ವೇಳೆ ನೀರು ಬಿಡದೆ ಹೋದರೆ ಆಣೆಕಟ್ಟು ಮುಂಬಾಗದಲ್ಲಿ ಸಾಮೂಹಿಕವಾಗಿ ಆತ್ಮಹತ್ತೆ ಮಾಡಿಕೊಳ್ಳುವದಾಗಿ ಹಾಗೂ ಉಗ್ರ ಹೋರಾಟ ಮಾಡುವದಾಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ವಾಯ್.ಎಸ್.ದೇಸಾಯಗೌಡ್ರ, ಎಸ್.ಎಮ್.ಶಿವನಗೌಡ್ರ, ಎಚ್.ಪಿ.ಪಾಟೀಲ, ಎಸ್.ಎಮ್.ಕುಲಕರ್ಣಿ ರೈತ ಬಾಂದವರು ಇತರರು ಉಪಸ್ಥಿತರಿದ್ದರು.
ಪೋಟೋ ಶೀರ್ಷಿಕೆ: ೧೪ ಎಮ್ ಎನ್ ಎಲ ೨
ರೈತರು ಅಧಿಕಾರಿಗೆ ಮನವಿ ಸಲ್ಲಿಸಿದರು.