ಗದಗ, ಜು. ೧೨ : ಬಸವಾದಿ ಶಿವಶರಣರು ಸಾರಿದ ಕಾಯಕ ದಾಸೋಹ ಸಂದೇಶವನ್ನು ಸಾಕಾರಗೊಳಿಸುವ ಮೂಲಕ ನಿತ್ಯ ಶ್ರಮ ವಹಿಸಿ ಶೃದ್ಧೆಯಿಂದ ಕಾಯಕ ಮಾಡುತ್ತಿರುವ ಕಾರ್ಮಿಕರ ಬದುಕು ನೆಮ್ಮದಿಯ ಬದುಕು ಆಗಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೇಸ್ ಸಮಿತಿಯ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಅವರು ನಗರದ ಕಾರ್ಮಿಕ ಕಲ್ಯಾಣ ಸಂಸ್ಥೆಯಲ್ಲಿ ಎರ್ಪಡಿಸಿದ್ದ ನಿಜ ಸುಖಿ ಹಡಪದ ಅಪ್ಪಣ್ಣ ಜಯಂತಿ ನಿಮಿತ್ಯ ಕಾರ್ಮಿಕ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ, ಕಾರ್ಮಿಕರ ಆದೇಶ ಪ್ರತಿ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಸವಣ್ಣ, ನಿಜ ಸುಖಿ ಹಡಪದ ಅಪ್ಪಣ್ಣ ಅವರ ತತ್ವ ಸಂದೇಶಗಳನ್ನು ಪರಿಪಾಲಿಸಿ ಅವರ ಅನುಯಾಯಿಗಳಾಗಿರುವ ಸಮಸ್ತ ಕಾರ್ಮಿಕರ ಬದುಕು ಕಲ್ಯಾಣವಾಗಲಿ. ಕಾರ್ಮಿಕ ಕಲ್ಯಾಣ ಸಂಸ್ಥೆ ಹಿರಿಯ ಶ್ರಮ ಜೀವಿಗಳನ್ನು, ಕಾರ್ಮಿಕ ಮಕ್ಕಳ ಪ್ರತಿಭೆಯನ್ನು ಗೌರವಿಸಲುಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಎರ್ಪಡಿಸಿದ್ದು ಶ್ಲ್ಯಾಘನೀಯ ಜೊತೆಗೆ ಕಾರ್ಮಿಕರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸಲು ಮುಂದಾಗಿರುವದು ಅಭಿನಂದನೀಯ ಎಂದರು.
ಮುಖ್ಯ ಅತಿಥಿ ಗದುಗಿನ ನಿಜ ಸುಖಿ ಹಡಪದ ಅಪ್ಪಣ್ಣ ವಿವಿದೊದ್ದೇಶಗಳ ಟ್ರಸ್ಟನ ಅಧ್ಯಕ್ಷ ಶ್ರೀನಿವಾಸ ಹಡಪದ ಮಾತನಾಡಿ ಟ್ರಸ್ಟ ಹಡಪದ ಅಪ್ಪಣ್ಣನವರ ತತ್ವ ಸಂದೇಶಗಳನ್ನು ಅನುಷ್ಠಾನ ಮಾಡುವ ಜೊತೆಗೆ ಪ್ರಚಾರ, ಧರ್ಮ ಜಾಗೃತಿ ಕಾರ್ಯವನ್ನು ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮೊಹ್ಮದ್ಇರ್ಫಾನ್ ಡಂಬಳ ಕಾರ್ಮಿಕ ಕಲ್ಯಾಣ ಸಂಸ್ಥೆಯು ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ ಜೊತೆಗೆ ಕಾರ್ಮಿಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯವನ್ನು ಮಾಡಿಕೊಂಡು ಬಂದಿದೆ ಎಂದರು.
ಪ್ರಶಸ್ತಿ ಪ್ರದಾನ ಹಿರಿಯ ಕಾರ್ಮಿಕರಾದ ಬೆಳಧಡಿಯ ಶಂಕರಗೌಡ ಭರಮಗೌಡ್ರ, ಲಕ್ಕುಂಡಿಯ ಚನ್ನವೀರಗೌಡ ಪಾಟೀಲ, ನೀರಲಗಿಯ ಮೆಹಬೂಬಬೇಗ ಮುಲ್ಲಾ, ಮುಳಗುಂದದ ನಾಗಪ್ಪ ಭಂಗಿ ಹಾಗೂ ಮುಳಗುಂದದ ನಬೀಸಾಬ ಬೂದಿಹಾಳ ಅವರುಗಳಿಗೆ ನಿಜ ಸುಖಿ ಹಡಪದ ಅಪ್ಪಣ್ಣ ಜಯಂತಿ ನಿಮಿತ್ಯ ಕಾರ್ಮಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಪ್ರತಿಭಾ ಪುರಸ್ಕಾರ ಕಾರ್ಮಿಕರ ಪ್ರತಿಭಾನ್ವಿತ ಮಕ್ಕಳಾದ ಗಣೇಶ ವಂಕಲಕುಂಟಿ, ಪವಿತ್ರಾ ಹಾದಿಮನಿ, ಸನಾ ನಾಶೀರ ನರೇಗಲ್, ಪುಷ್ಪಾ ವಂಕಲಕುಂಟಿ, ಅಕ್ಕಮ್ಮ ಹಾದಿಮನಿ, ಮೂಬೀನ ಬೇಪಾರಿ ಹಾಗೂ ದಾದಾಫೀರ ಗುಳೇದಗುಡ್ಡ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮುಳಗುಂದ ಪಟ್ಟಣದ ಉದಯ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಮ್ಮದ್ಶಫಿ ಸಿದ್ಧಿ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು.
ವೇದಿಕೆಯ ಮೇಲೆ ಗಣ್ಯರಾದ ಜಹಿರುದ್ಧೀನ್ ತಾಡಪತ್ರಿ, ಸರ್ಪರಾಜ ಬಬರ್ಚಿ, ಮೆಹಬೂಬಖಾನ ಪಠಾಣ, ಅಹ್ಮದ್ಹುಸೇನ ಖಾಜಿ, ಮೋಹನ ದೊಡಕುಂಡಿ ಉಪಸ್ಥಿತರಿದ್ದರು. ನಿಂಗಪ್ಪ ಕಟ್ಟಿಮನಿ ಸ್ವಾಗತಿಸಿದರು ನಾಶೀರ್ ಚಿಕೇನಕೊಪ್ಪ ನಿರೂಪಿಸಿದರು ಕೊನೆಗೆ ಮೊಹ್ಮದಇಸೂಫ ಬೇಪಾರಿ ವಂದಿಸಿದರು.
ಸಮಾರಂಭದಲ್ಲಿ ಎಲ್ಲ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಲ್ಲದೆ ಈಶಪ್ಪ ಬಳ್ಳಾರಿ, ಬಾಪುಗೌಡ, ಶಕತ್ ಯರಂಡಿವಾಲೆ, ಮಂಜು ದೊಡ್ಡಮನಿ, ಶಬ್ಬೀರ ತಹಶೀಲ್ದಾರ, ರಾಮು ಬಾಗಲಕೋಟ, ಕಾಜಾಸಾಬ ಗಬ್ಬೂರ, ಚಾಂದ ಅಬ್ಬಿಗೇರಿ, ಭೀಮಪ್ಪ ಪೂಜಾರ, ದುರ್ಗಪ್ಪ ಗುಡಿಮನಿ, ಬಸಪ್ಪ ಹಾದಿಮನಿ, ಯಂಕಪ್ಪ ತಾಳದವರ, ಸಾಧಿಕ ಧಾರವಾಡ, ಜಲ್ಲೀವುಲ್ಲಾ ಬೊದ್ಲೇಖಾನ್, ಅಲ್ಲಾಭಕ್ಷೀ ದೊಡ್ಡಮನಿ, ಈಶ್ವರ ಲಕ್ಷ್ಮೇಶ್ವರ, ಅಲ್ತಾಫ ಕೊಪ್ಪಳ, ರೇಣವ್ವ ಯರಗೇರಿ, ಶಾಂತವ್ವ ಮುಳಗುಂದ ಸೇರಿದಂತೆ ಮುಂತಾದವರಿದ್ದರು.